ಕೆಜಿಎಫ್ ನೂತನ ಅಧ್ಯಕ್ಷರಾಗಿ ಡಾ. ಎಚ್.ಟಿ. ಮೋಹನ್‍ ಕುಮಾರ್ ಆಯ್ಕೆ

03/10/2020

ಮಡಿಕೇರಿ ಅ.3 : ಕರ್ನಾಟಕ ಬೆಳೆಗಾರರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಡಾ.ಎಚ್.ಟಿ.ಮೋಹನ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಸೇರಿದ ಕಾಫಿ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಬೆಳೆಗಾರರ ಒಕ್ಕೂಟಕ್ಕೆ ಅಧ್ಯಕ್ಷರಾಗಿದ್ದ ಯು.ಎಂ.ತೀರ್ಥಮಲ್ಲೇಶ್ ರಾಜೀನಾಮೆ ಹಿನ್ನಲೆಯಲ್ಲಿ ಸಕಲೇಶಪುರದಲ್ಲಿ ಆಯೋಜಿತ ಕಾಫಿ ಬೆಳೆಗಾರರ ಸಭೆಯಲ್ಲಿ ಕೆಜಿಎಪ್ ನ ನೂತನ ಅಧ್ಯಕ್ಷರನ್ನಾಗಿ ಸಕಲೇಶಪುರದ ಮೋಹನ್‍ಕುಮಾರ್ , ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಮೋಹನ್‍ಕುಮಾರ್, ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರು, ಕಾಪಿ üಉದ್ಯಮದ ಹಿತಾಸಕ್ತಿಗೆಧಕ್ಕೆ ಬಾರದಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ರಾಜ್ಯದ ವಿವಿಧಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು ನೂತನಅಧ್ಯಕ್ಷ, ಕಾರ್ಯದರ್ಶಿಗಳಿಗೆ ಸಭೆಯಲ್ಲಿ ಬೆಂಬಲ ಘೋಷಿಸಿದರು.