ಅಗಲಿದ ಹಿರಿಯ ಚೇತನರಿಗೆ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‍ನಿಂದ ಶ್ರದ್ಧಾಂಜಲಿ ಸಲ್ಲಿಕೆ

03/10/2020

ವಿರಾಜಪೇಟೆ ಅ. 3 : ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಿವಿಧ ಘಟಕದ ಪದವಿಯನ್ನು ಅಲಂಕರಿಸಿ ಕಣ್ಮರೆಯಾದ ಹಿರಿಯ ಚೇತನರಿಗೆ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಹಾಲಿ ಡಿ.ಸಿ.ಸಿ ಸದಸ್ಯರಾಗಿದ್ದ ಎಂ.ಎ. ಉಸ್ಮಾನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಧ್ಯಕ್ಷರಾಗಿದ್ದ ಕಡಂಗ ಗ್ರಾಮದ ಅಬೂಬಕ್ಕರ್ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ಹಿರಿಯ ಸದಸ್ಯರಾಗಿದ್ದ ಕುಶಾಲನಗರದ ಎಸ್. ನರಸಿಂಹ ಮೂರ್ತಿ, ಕಡಂಗ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬಲ್ಲಚಂಡ ಟೀಟೂ ಮತ್ತು ಕಾರ್ಮಾಡು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದ ನೆಲ್ಲಮಕ್ಕಡ ಮೊಣ್ಣಪ್ಪ ಅಗಲಿದ ಚೇತರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ, ಗೌರವ ಸಲ್ಲಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಕೆ. ದೇವಲಿಂಗಯ್ಯ, ದಿವಂಗತರಾದ ಹಿರಿಯ ಜೀವಿಗಳು ಜಾತಿ ಮತ ಪಂತಗಳಿಂದ ಹೊರತಾಗಿ ಪಕ್ಷ ಸಂಘಟನೆಯಿಂದ ಗುರುತಿಸಿಕೊಂಡವರು, ಜಾತ್ಯಾತೀತ ಮಾನೋಭಾವಗಳ ಸಿದ್ದಾಂತ ತಳಹದಿಯ ಮೇಲೆ ಎಲ್ಲಾ ವರ್ಗದ ಸಮಾನ್ಯರಿಗೆ ಸಹಾಯಹಸ್ತ ಒದಗಿಸಿದ್ದಾರೆ. ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ಇಂದು ಜನಮಾನಸದಲ್ಲಿ ಅಜಾಮರವಾಗಿದ್ದಾರೆ. ಪಕ್ಷಕ್ಕೆ ಅಗಲಿದ ಚೇತನರು ನೀಡಿರುವ ಕೊಡುಗೆಗಳನ್ನು ಎಂದಿಗೂ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಧ್ಯಾಕ್ಷ ಎ.ಕೆ.ಹ್ಯಾರಿಸ್ ಮಾತನಾಡಿ, ನಮ್ಮನ್ನು ಅಗಲಿದ ಹಿರಿಯರ ಮಾರ್ಗದರ್ಶನ ಮತ್ತು ಅವರುಗಳು ಪಕ್ಷಕ್ಕೆ ನೀಡಿದ ಕೊಡುಗೆಗಳ ಅಪಾರ. ಪಕ್ಷವನ್ನು ಸಂಘಟಿಸುವಲ್ಲಿ ಅವರುಗಳು ನೀಡಿರುವ ಶ್ರಮವನ್ನು ಪಕ್ಷವು ಸ್ಮರಿಸುತ್ತದೆ. ದಿವಂಗತರಾದ ಎಲ್ಲಾ ಹಿರಿಯ ಸದಸ್ಯರ ಅತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸಿಗರು ನಮ್ಮ ನಡುವೆ ಇಲ್ಲಾ, ಇದು ಪಕ್ಷಕ್ಕೆ ತುಂಬಲಾರದ ನಷ್ಟ ಉಂಟುಮಾಡಿದ ಎಂದು ಬೇಸರ ವ್ಯಕ್ತಪಡಿಸಿದರು.
ಅಂದೂ ಹಿರಿಯರ ಪರಿಕಲ್ಪನೆ, ಸಂಘಟನಾಶೀಲತೆ, ಎಲ್ಲಾ ಧರ್ಮಿಯರ ನಡುವೆಯಿದ್ದ ಬಾಂಧವ್ಯ ಇವುಗಳು ದಿವಂಗತರಾದವರನ್ನು ಎಂದಿಗೂ ಸ್ಮರಿಸುವಂತೆ ಮಾಡುತ್ತದೆ. ದಿವಂಗತರಾದ ಉಸ್ಮಾನ್ ಹಾಜಿ ಅವರು ಸಹಿಷ್ಣು ಸ್ವಭಾವದಿಂದ ಜನಾಜನರಾಗಿದ್ದರು. ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯವಾದದ್ದು. ಪಕ್ಷದಲ್ಲಿದ್ದ ಗಾಢವಾದ ಪ್ರೀತಿ ಮತ್ತು ಸಂಘಟನಾ ಶಕ್ತಿಯು ಪ್ರಸ್ತುತ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪ್ರೇರಣಾ ಶಕ್ತಿಯಾಗಿದೆ. ದಿವಂಗತರಾದ ಎಲ್ಲಾ ಪಕ್ಷದ ಹಿರಿಯರನ್ನು ಸ್ಮರಿಸುತ್ತಾ ಅವರ ಅತ್ಮಕ್ಕೆ ಶಾಂತಿ ಲಭಿಸಲಿ ಮತ್ತು ಕುಟುಂಭಕ್ಕೆ ದುಖ: ಬರಿಸುವ ಶಕ್ತಿ ಕರುಣಿಸಲಿ ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ.ಮೋಹನ್ ಕುಮಾರ್, ಬ್ಲಾಕ್ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸಿನ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಎಜಾಜ್ ಅಹಮ್ಮದ್, ಬ್ಲಾಕ್ ಕಾಂಗ್ರೆಸಿನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಸದಸ್ಯ ಎಂ.ವೈ.ಆಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸಿನ ಸದಸ್ಯರು, ವಿವಿಧ ಘಟಕದ ನಾಯಕರು ಯುವ ಕಾಂಗ್ರೆಸಿನ ಪದಾಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಹಿರಿಯ ಕಾಂಗ್ರೇನ ಸದಸ್ಯರು ಹಾಜರಿದ್ದರು.