ಉತ್ತರ ಪ್ರದೇಶದಲ್ಲಿ ಅಮಾನವೀಯ ಕೃತ್ಯ : ಕೊಡಗು ಜೆಡಿಎಸ್ ಅಲ್ಪಸಂಖ್ಯಾತರ ಮಹಿಳಾ ಘಟಕ ಅಸಮಾಧಾನ

03/10/2020

ಸೋಮವಾರಪೇಟೆ ಅ.3 : ಉತ್ತರ ಪ್ರದೇಶದ ಹತ್ರಾಸ್ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ರಾಕ್ಷಸಿ ಕೃತ್ಯವನ್ನು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಮಹಿಳಾ ಘಟಕ ತೀವ್ರವಾಗಿ ಖಂಡಿಸಿದೆ.
ಕಾಮುಕರ ಅಟ್ಟಹಾಸಕ್ಕೆ ಉತ್ತರ ಪ್ರದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದರೂ ಅಲ್ಲಿಯ ಸರಕಾರ ಮಾತ್ರ ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಉನ್ನತ ಮಟ್ಟದ ತನಿಖೆಯಿಂದ ಸತ್ಯ ಹೊರತಂದು, ಆರೋಪಿಗಳನ್ನು ನೇಣಿಗೇರಿಸಬೇಕು ಎಂದು ವಿಭಾಗದ ಜಿಲ್ಲಾಧ್ಯಕ್ಷೆ ಎಂ.ಎ.ರುಬಿನಾ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಹೆತ್ತವರಿಗೆ ಶವವನ್ನೂ ನೀಡದೆ ಅಲ್ಲಿಯ ಪೊಲೀಸ್ ಅಧಿಕಾರಿಗಳು ಬೆಳಗ್ಗಿನ ಜಾವ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಆರೋಪಿಗಳ ರಕ್ಷಣೆಗೆ ಉತ್ತರಪ್ರದೇಶ ಪೊಲೀಸರ ತಂತ್ರವಾಗಿದೆ ಎಂಬ ಸಂಶಯ ಕಾಡುತ್ತಿದೆ. ಅತ್ಯಾಚಾರವೆಸಗಿದ ನಾಲ್ವರು ಆರೋಪಿಗಳಿಗೆ ನಿರ್ಭಯ ಕೊಲೆಹಂತಕರಿಗೆ ನೀಡಿದ ಶಿಕ್ಷೆಯನ್ನೇ ನೀಡಿ ಗಲ್ಲಿಗೇರಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.