ಕೊಡಗು ಕಾವೇರಿ ಪಡೆ : ಮಾಹಿತಿ ಪಡೆದ ಡಿಜಿಪಿ

03/10/2020

ಬಳಿಕ ಕಾವೇರಿ ಪಡೆ, ತುರ್ತು ಸ್ಪಂದನಾ ತಂಡ, ಶ್ವಾನ ದಳ, ಕೊಡಗು ಕಮಾಂಡೋ ಸಿಬ್ಬಂದಿಗಳ ಜೊತೆ ಮಡಿಕೇರಿಯಲ್ಲಿ ಸಮಾಲೋಚನೆ ನಡೆಸಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಕಾನೂನು ಸುವ್ಯವಸ್ಥೆ, ಡ್ರಗ್ಸ್ ದಂಧೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಮುಂದಿನ 3 ತಿಂಗಳ ಬಳಿಕ ರಾಷ್ಟ್ರೀಯ ತುರ್ತು ಸೇವೆಯ 112 ಸಂಖ್ಯೆ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಕೊಡಗು ಜಿಲ್ಲೆಗೂ ಕೂಡ 112 ಸಂಖ್ಯೆಯ ಸೇವೆ ಲಭ್ಯವಾಗಲಿದ್ದು, ದಸರಾ ಕಳೆದ ಬಳಿಕ ಈ ಯೋಜನೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. ಈ ಬಗ್ಗೆಯೂ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎಲ್ಲಾ ವರ್ಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 112 ಸಂಖ್ಯೆಗೆ ಡಯಲ್ ಮಾಡಿದರೆ ಎಲ್ಲಾ ತುರ್ತು ಸೇವೆಗಳು ಸಾರ್ವಜನಿಕರಿಗೆ ಸಿಗಲಿದೆ.