ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಅಧ್ಯಕ್ಷರಾಗಿ ಸಂತೋಷ್ ನಾಗರಾಜ್ ಆಯ್ಕೆ

October 4, 2020

ಮಡಿಕೇರಿ ಅ.4 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ದಸರಾ ಮಂಟಪ ಸಮಿತಿಯ 45ನೇ ವರ್ಷದ ನೂತನ ಅಧ್ಯಕ್ಷರಾಗಿ ಸಂತೋಷ್ ನಾಗರಾಜ್ ಆಯ್ಕೆಯಾಗಿದ್ದಾರೆ.
ಶ್ರೀಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬ್ರಿಜೇಶ್, ಉಪಾಧ್ಯಕ್ಷರಾಗಿ ಕೂಪದೀರ ಅಯ್ಯಪ್ಪ ಹಾಗೂ ಖಜಾಂಚಿಯಾಗಿ ಜಗತ್ ಆಯ್ಕೆಯಾದರು.
ಸಭೆಯಲ್ಲಿ ಈ ಬಾರಿಯ ದಸರಾ ಆಚರಣೆ ಕುರಿತು ಚರ್ಚಿಸಲಾಯಿತು.