ಕೊಡವ ವಿಚಾರಗೋಷ್ಠಿ : ಕೊಡವರನ್ನು ವಂಚಿಸುವ ನಯ ವಂಚಕರಿದ್ದಾರೆ : ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಬೇಸರ

ಮಡಿಕೇರಿ ಅ.4 : ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿ ದಲಿತರಿಗೆ ಪಂಗನಾಮ ಹಾಕಿದ ಮಾದರಿಯಲ್ಲೇ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು ಹೊಗಳುವ ಮೂಲಕ ಕೊಡವರನ್ನು ವಂಚಿಸುವ ನಯ ವಂಚಕತನದ ಪರಮಾವಧಿಯಾಗಿ ಇಂದಿನ ರಾಜಕೀಯ ಹೇಳಿಕೆಗಳು-ಬೆಳವಣಿಗೆಗಳು ಕಾಣುತ್ತಿವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಸಿ.ಎನ್.ಸಿ. ಆಶ್ರಯದಲ್ಲಿ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದೀಯ ಪಟು ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಹೆಸರಾಂತ ಬುಡಕಟ್ಟು ಜಾನಪದ ತಜ್ಞ ಡಾ| ಹನಿಯೂರ್ ಚಂದ್ರೇಗೌಡ, ಮತ್ತು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಸಮ್ಮುಖದಲ್ಲಿ ಎನ್.ಯು. ನಾಚಪ್ಪ ಅವರು ಮಂಡಿಸಿದ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಿರ್ಣಯ :
- ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಆದಿಮಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು. ಆ ಮೂಲಕ ಸಂವಿಧಾನದ 340& 342ನೇ ವಿಧಿಯಂತೆ ಎಸ್.ಟಿ. ಪಟ್ಟಿಯಲ್ಲಿ ಸೇರಿಸಿ, ರಾಜಾಶ್ರಯ ನೀಡಬೇಕು.
- ಕೊಡವ ಬುಡಕಟ್ಟು ಕುಲದ ಕುಲಶಾಸ್ತ್ರ ಮತ್ತು ಮಾನವಶಾಸ್ತ್ರ ಅಧ್ಯಯನವು
ಎಮಿಕ್'' ದೃಷ್ಟಿಕೋನದಲ್ಲಿ ನಡೆದಿರಬೇಕು. ಸಿ.ಎನ್.ಸಿ. ಯ ನಿರಂತರ ಪ್ರಯತ್ನದಿಂದ ಕೆ.ಎಸ್.ಟಿ.ಆರ್.ಐ. ಮೈಸೂರು (ಕರ್ನಾಟಕ ರಾಜ್ಯ ಬುಡಕಟ್ಟು ಅಧ್ಯಯನ ಸಂಸ್ಥೆ, ಮೈಸೂರು) ಇವರಿಂದ ನಡೆದಿದ್ದು, ಈಗಾಗಲೇ ಅಂತಿಮ ಘಟ್ಟ ತಲುಪಿರುವ ಕೊಡವ ಕುಲಶಾಸ್ತ್ರ ಅಧ್ಯಯನವು
ಎಮಿಕ್” ದೃಷ್ಟಿಕೋನದ ಅಧ್ಯಯನ ನಡೆದಿದ್ದರೆ ಅದರ ವರದಿಯನ್ನು ಸರ್ಕಾರದ ಮುಂದೆ ಮಂಡಿಸಿ, ಆರ್.ಜಿ.ಐ. (ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯ) ಅನುಮೋದನೆಗೆ ಕಳುಹಿಸಿಕೊಡಿ. ಒಂದು ವೇಳೆಎಮಿಕ್'' ದೃಷ್ಟಿಕೋನದಲ್ಲಿ ನಡೆಯದೆ ಅಧ್ಯಯನವು
ಎಟಿಕ್” ದೃಷ್ಟಿಕೋನದಲ್ಲಿ ಪೂರ್ವಾಗ್ರಹ ಪೀಡಿತವಾಗಿ ನಡೆದಿದ್ದರೆ, ಮತ್ತೊಮ್ಮೆ ತುರ್ತಾಗಿ ನುರಿತ ಉನ್ನತ ಮಟ್ಟದ ಮಾನವಶಾಸ್ತ್ರಜ್ಞರು ಮತ್ತು ಸಮಾಜ ವಿಜ್ಞಾನಿಗಳ ಮಧ್ಯಸ್ಥಿಕೆಯಲ್ಲಿ “ಎಮಿಕ್” ದೃಷ್ಟಿಕೋನದಲ್ಲಿ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನವನ್ನು ಪುನಾರಾರಂಭಿಸುವುದರ ಮೂಲಕ ಪರಿಪೂರ್ಣವಾದ ಮತ್ತು ಸಮಗ್ರವಾದ ವರದಿ ತಯಾರಿಸಿ, ಸರ್ಕಾರದ ಮುಂದೆ ಮಂಡಿಸಿ, ಆರ್.ಜಿ.ಐ. ಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. - ಸಂವಿಧಾನದ 7 ಮೂಲಭೂತ ಹಕ್ಕುಗಳಲ್ಲಿ ಜನರ ಅಶೋತ್ತರಗಳನ್ನು ಪರಿಗಣಿಸಿ, ಸಂವಿಧಾನಿಕ ಪರಿಹಾರ ರೂಪಿಸುವುದು. 7ನೇಯ ಮೂಲಭೂತ ಹಕ್ಕಾಗಿದ್ದು, ಈ ಹಿನ್ನೆಲೆಯಲ್ಲಿ ಕೊಡವ ಕುಲದ ಸುದೀರ್ಘ ಅಶೋತ್ತರವಾದ ಸ್ವಾಯತ್ತತೆ ಮತ್ತು ಎಸ್.ಟಿ. ಪಟ್ಟಿಯಲ್ಲಿ ಕೊಡವರನ್ನು ಸೇರಿಸುವುದು ಕೂಡ ಸಂವಿಧಾನ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಂವಿಧಾನಿಕ ಪರಿಹಾರವಾಗಿದ್ದು, ಈ ಸಂವಿಧಾನಿಕ ಪರಿಹಾರಕ್ಕಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿ ಕಸರತ್ತು ಮುಂದುವರಿಸಬೇಕು.
- ಕಳೆದ 40 ವರ್ಷಗಳಿಂದ ಅಸ್ಸಾಮಿನ 19 ಹಾಲಿ ಎಸ್.ಟಿ. ಪಟ್ಟಿಯಲ್ಲಿರುವ ಬುಡಕಟ್ಟು ವರ್ಗದಿಂದ ತೀವ್ರ ಪ್ರತಿರೋಧ ಎದುರಿಸುತ್ತಾ ಎನ್.ಸಿ.ಎಸ್.ಟಿ. (ನ್ಯಾಷನಲ್ ಟ್ರೈಬಲ್ ಕಮಿಷನ್) ಮತ್ತು ಆರ್.ಜಿ.ಐ. (ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯ) ಯಿಂದ ಸತತ 8 ಬಾರಿ ತಿರಸ್ಕಾರಕ್ಕೊಳಗಾದ ಅಸ್ಸಾಮಿನ 6 ಬುಡಕಟ್ಟು ವರ್ಗಗಳಾದ ಕೋಚ್ ರಾಜ್‍ಬನ್ಸಿ, ಮೊರಾನ್, ಮುಟೋಕ್, ತಾಯಿ ಅಹೋಂ, ಚ್ಯುತಿಯ, ಟೀ ಟ್ರೈಬ್ ಇತ್ಯಾದಿಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಭಾರತ ಸರ್ಕಾರ ಮತ್ತು ಅಸ್ಸಾಂ ಸರ್ಕಾರ ಸಂವಿಧಾನ ತಿದ್ದುಪಡಿ ಕಸರತ್ತಿಗೆ ಮುಂದಾಗಿದ್ದು, ಎನ್.ಸಿ.ಎಸ್.ಟಿ. ಮತ್ತು ಆರ್.ಜಿ.ಐ. ಈ ಸಮ್ಮಂಧ ಒಪ್ಪಿಗೆ ಸೂಚಿಸಿದ್ದು, ಅಸ್ಸಾಮಿನ ಈ ಆರು ಬುಡಕಟ್ಟನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಅನುಸರಿಸಿದ ಮಾನದಂಡವನ್ನೇ ಕೊಡವ ಬುಡಕಟ್ಟು ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಅನುಸರಿಸುವ ಮೂಲಕ ತುರ್ತಾಗಿ ಸಂವಿಧಾನ ತಿದ್ದುಪಡಿ ಪ್ರಕೀಯೆಗೆ ಮುಂದಾಗಬೇಕು ಎಂದು ನಿರ್ಣಯ ಅಂಗೀಕರಿಸಲಾಯಿತು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತಾರ್ಕಿಕ ವಾದವನ್ನು ಮುಂದಿಡುವುದರ ಮೂಲಕ ಕೊಡವರು ತಮ್ಮ ಶಾಸನಬದ್ಧ ಹಕ್ಕೋತ್ತಾಯವಾದ ಎಸ್.ಟಿ. ಟ್ಯಾಗ್ ಮತ್ತು ಜಿಯೋಪೊಲಿಟಿಕಲ್ ಅಟೋನಮಿ (ಭೂ-ರಾಜಕೀಯ ಅಶೋತ್ತರ)ವನ್ನು ವಸ್ತುರೂಪಿತವಾದ ಸಂಪತ್ತಿಗೆ ಶರಣಾಗಿ ತಮ್ಮ ನೈಜ ಸಂವಿಧಾನಿಕ ಹಕ್ಕೋತ್ತಾಯವನ್ನು ರಾಜಿಮಾಡಿಕೊಳ್ಳಲಿ ಎಂಬ ಆಧಾರರಹಿತ ಭ್ರಮೆಯಿಂದ ಹೊರಬರಬೇಕು. ಕೊಡವರ ಸರ್ವೋಚ್ಛ ಅಶೋತ್ತರವಾದ ಎಸ್.ಟಿ. ಟ್ಯಾಗ್ ಮತ್ತು ಭೂ-ರಾಜಕೀಯ ಅಶೋತ್ತರ ಒಂದಕ್ಕೊಂದು ಬಿಡಿಸಲಾಗದ ಸಮ್ಮಂಧವಾಗಿದ್ದು, ಈ ಎರಡು ಉನ್ನತ ಗುರಿಯನ್ನು ಸಾಧಿಸುವಲ್ಲಿಯವರೆಗೆ ಸಿ.ಎನ್.ಸಿ.ಯೊಂದಿಗೆ ಸ್ಥಿರವಾಗಿ ನಿಲ್ಲುವುದಾಗಿ ಸರ್ವಾನುಮತ ನಿರ್ಣಯ ಅಂಗೀಕರಿಸಲಾಯಿತು.
- ಕೊಡವ ಬುಡಕಟ್ಟು ಪ್ರಾಚೀನತೆಯನ್ನು ಸಾಕ್ಷಿಕರಿಸುವ, ಇಂದಿಗೂ ಕೊಡವ ಬುಡಕಟ್ಟಿನ ಜೀವಂತ ಪರಾಮಾರ್ಥಿಕ ಸ್ಥಾನವಾಗಿ ಉಳಿದಿರುವ ಮಂದ್‍ಗಳಲ್ಲಿ (ಊರ್ಮಂದ್-ನಾಡ್‍ಮಂದ್‍ಗಳಲ್ಲಿ) ಸಿ.ಎನ್.ಸಿ. ಯ ಜನಜಾಗೃತಿ ಸಭೆಯನ್ನು ಆಯೋಜಿಸುವುದರ ಮೂಲಕ ಕೊಡವ ಬುಡಕಟ್ಟನ್ನು ಎಸ್.ಟಿ ಪಟ್ಟಿಗೆ ಸೇರಿಸಿ, ರಾಜ್ಯಾಂಗ ಭದ್ರತೆ ಪಡೆಯುವ ಹಕ್ಕೋತ್ತಾಯವನ್ನು ಜನಮಾನಸದಲ್ಲಿ ಭಿತ್ತಿ ಆ ಅಶೋತ್ತರಕ್ಕೆ ಸಮರ್ಪಕ ರೀತಿಯ ಧೀಶಕ್ತಿಯನ್ನು ಪಡೆಯಲು ಮತ್ತು ಸರ್ವರನ್ನು ಭಾಗಿಯಾಗಿಸಲು ನಿರ್ಣಯ ಕೈಗೊಳ್ಳಲಾಯಿತು.
ವಿಚಾರಗೋಷ್ಠಿಯಲ್ಲಿ ಭಾಗಿಯಾದವರೆಲ್ಲರು ಮಾನವ ಸರಪಳಿ ರಚಿಸಿ, ಸೂರ್ಯ-ಚಂದ್ರ, ಭೂದೇವಿ-ಜಲದೇವಿ ಕಾವೇರಿಮಾತೆ, ಮಹಾಗುರು ಇಗ್ಗ್‍ತಪ್ಪ, ಅಗಸ್ತ್ಯೇಶ್ವರ ಮತ್ತು ಗುರು-ಕಾರೋಣರ ಹೆಸರಿನಲ್ಲಿ ಮೇಲಿನ ನಿರ್ಣಯಕ್ಕೆ ಬದ್ಧರಾಗಿ ಸಿ.ಎನ್.ಸಿ. ಯ ಧೀರೊದ್ದಾತ ಆಂದೋಲನದಲ್ಲಿ ಗುರಿಮುಟ್ಟುವ ತನಕ ತಮ್ಮನ್ನು ತಾವು ಅರ್ಪಣೆ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು. ಅಂತಿಮವಾಗಿ ರಾಷ್ಟ್ರಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವಿಷಯ: ಕೊಡವ ಬುಡಕಟ್ಟು ಕುಲಕ್ಕೆ ಎಸ್.ಟಿ ಪಟ್ಟಿಯಲ್ಲಿ ಮಾನ್ಯತೆ ದೊರಕಬೇಕು’, ಆ ಮೂಲಕ ವಿನಾಶದಂಚಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಕುಲದ ಹೆಗ್ಗುರುತು, ಚಾರಿತ್ರಿಕ ನಿರಂತರತೆ, ಜನಪದಿಯ ಸಂಸ್ಕøತಿ, ಸಾಂಪ್ರದಾಯಿಕ ಕಾಯಿದೆ, ಪೂರ್ವಾರ್ಜಿತ ಭೂಮಿ, ಭಾಷೆ ಇತ್ಯಾದಿಗಳಿಗೆ ರಾಜ್ಯಾಂಗ ಖಾತ್ರಿ ನೀಡಬೇಕು.
ಇmiಛಿ ಂಠಿಠಿಡಿoಚಿಛಿh ದೃಷ್ಟಿಕೋನದಲ್ಲಿ ಕೊಡವರ ಬುಡಕಟ್ಟು ಹೆಗ್ಗುರುತು ಅಸ್ತಿತ್ವದ ಮಾನದಂಡವನ್ನು ಅಳೆಯಬೇಕು: ಮಾನವ ಸಂಸ್ಕೃತಿಯನ್ನು ಅಧ್ಯಯನ ಮಾಡುವ “ಎಮಿಕ್” ವಿಧಾನವು ಅಧ್ಯಯನ ಮಾಡುವ ಸಂಸ್ಕೃತಿಯ ಸದಸ್ಯರ ಮೇಲೆ ಕೇಂದ್ರೀಕರಿಸುತ್ತದೆ. ಅವರ ಮಾತುಗಳು, ಗ್ರಹಿಕೆಗಳು ಮತ್ತು ನಂಬಿಕೆಗಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬಳಸುವ ಮಾಹಿತಿಯ ಮುಖ್ಯ ಮೂಲಗಳಾಗಿವೆ.
ಜ್ಞಾಪನಾ ಪತ್ರವನ್ನ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಗೃಹಮಂತ್ರಿ, ಕರ್ನಾಟಕದ ಮುಖ್ಯಮಂತ್ರಿಗಳು, ವಿಧಾನ ಪರಿಷತ್ ಸದಸ್ಯ ಶ್ರೀ ಬಿ.ಕೆ ಹರಿಪ್ರಸಾದ್, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ, ಯುನೆಸ್ಕೊದ ನಿರ್ದೇಶಕರು, ವಿಶ್ವಸಂಸ್ಥೆಯ ಮಾನವ ಅಧಿಕಾರ ಆಯೋಗದ ಹೈ ಕಮಿಷನರ್, ಕೇಂದ್ರ ಬುಡಕಟ್ಟು ಮಂತ್ರಿ ಮತ್ತು ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಡಾ||ಸುಬ್ರಮಣ್ಯನ್ ಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯ, ಶಾಸಕರಾದ ಶ್ರೀ ಅಪ್ಪಚ್ಚು ರಂಜನ್, ಶ್ರೀ ಕೆ.ಜಿ. ಬೋಪಯ್ಯ ಮತ್ತು ವಿಧಾನಪರಿಷತ್ ಸದಸ್ಯ ಶ್ರೀ ಸುನೀಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಶ್ರೀ ಕುಪ್ಪೇಂದ್ರ ರೆಡ್ಡಿ ಅವರಿಗೆ ಕಳುಹಿಸಿ ಕೊಡಲಾಗಿದೆ.
- ಕೊಡವರು ವಿಶೇಷ ಬುಡಕಟ್ಟು ಜನಾಂಗದವರೆಂದು ಮತ್ತು ನಮ್ಮ ಬುಡಕಟ್ಟು ಅನುವಂಶಿಕತೆಯ ಊರ್ಜಿತ್ವ ಮತ್ತು ಪೂರ್ವಜತೆಯನ್ನು ನಮ್ಮ ವಿಶಿಷ್ಟ ಬದುಕು ಮತ್ತು ಜೀವನ ವಿಧಾನವೇ ಸಾಕ್ಷೀಕರಿಸುತ್ತದೆ. ನಾವು ಎಷ್ಟೇ ತಿಪ್ಪರಲಾಗ ಹಾಕಿದರೂ ವಾರಕ್ಕೆ ಎರಡು ಬಾರಿ ಉಪವಾಸ ವೃತ ಕೈಗೊಂಡರೂ ಕೊಡವರು ಪರಿಶುದ್ಧ ಬ್ರಾಹ್ಮಣರಾಗಲು ಸಾಧ್ಯವಿಲ್ಲ. ಸಹ್ಯಾದ್ರಿ ಪರ್ವತ ಶ್ರೇಣಿಯ ದಕ್ಷಿಣ ಪಥದ ಪಶ್ಚಿಮ ಘಟ್ಟದ ಮಲಯಾದ್ರಿ ಪ್ರದೇಶದ ಕೊಡಗಿನ ನಿರ್ಜನ ದಟ್ಟ ಅರಣ್ಯ ಹಾಗು ದುರ್ಗಮ ಪರ್ವತ ಶ್ರೇಣಿ ಮತ್ತು ಗಿರಿ ಕಂದರಗಳ ನಡುವೆ ತೋಡು, ತೊರೆ, ಜಲಪಾತ, ಝರಿಗಳ ಮಧ್ಯೆ, ವನ್ಯ ಮೃಗ, ಪಕ್ಷಿ ಸಂಕುಲ ಹಾಗು ಗಗನ ಚುಂಬಿ ವೃಕ್ಷಗಳ ನಡುವೆ ಉತ್ಪತ್ತಿಯಾಗಿ ಅರಳಿದ ಕೊಡವರು ಜಲಧಾತೆ- ಜೀವನದಿಯಾದ ಕಾವೇರಿ ತಟದಲ್ಲಿ ಉಗಮವಾದ ಪ್ರಾಚೀನÀ ನಾಗರೀಕತೆ. ನಮ್ಮ ಬದುಕು, ಜೀವನ ವಿಧಾನ, ಆಹಾರಗಳಾದ ಗೆಡ್ಡೆ-ಗೆಣಸು, ಚಕ್ಕೆ ಕುರು, ಸೊಪ್ಪು, ಕಣಿಲೆ ಇತ್ಯಾದಿಯಾಗಿದ್ದು, ಪ್ರಾಚೀನ ಆಹಾರ ಪದ್ಧತಿ ಇಂದಿನವರೆಗೆ ಮುಂದುವರೆದಿದ್ದು, ತನ್ನದೇ ಆದ ಸೂಕ್ಷ್ಮವಾದ ಸಾಂಸ್ಕ್ರತಿಕ ಒಳಕೋಶಗಳನ್ನು ಕೊಡವ ಬುಡಕಟ್ಟು ಕುಲ ಹೊಂದಿದ್ದು ಬೇಟೆಯಾಡಿ ನಿರಂತರ ವನ್ಯ ಪ್ರಾಣಿಗಳ ಮಾಂಸ ಭಕ್ಷಣೆ ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಹಂದಿ ಮಾಂಸವೇ ಪ್ರಧಾನ ಪ್ರಸಾದ.
ಸಪ್ತಪದಿ'' ಇಲ್ಲದೆ ಗಾಂಧರ್ವ ವಿಧಿಯ ವಿವಾಹ ಶಾಸ್ತ್ರ, ಮದು ಮಗ ಮತ್ತು ಮದು ಮಗಳು ಬೇರೆ ಬೇರೆ ಕಡೆ ಮುಹೂರ್ತ ಮುಗಿಸಿ ಮೆರವಣಿಗೆಯಲ್ಲಿ ಬರುವ ಪದ್ಧತಿ, ಮಂಗಳ ಸೂತ್ರವಿಲ್ಲದ ಮದುವೆ. ಮದುವೆಯ ಮುನ್ನ ದಿನ ರಾತ್ರಿ ಮದುವಣಗಿತ್ತಿಯ ತಾಯಿ ಮದುವಣಗಿತ್ತಿಗೆ
ಪತ್ತಾಕ್” ಕಟ್ಟುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ವರದಕ್ಷಿಣೆಯ ಪಿಡುಗೇ ಇಲ್ಲದೆ ಪರಸ್ಪರ ಸಮಾನ ಖರ್ಚು-ವೆಚ್ಚದ ಮೂಲಕ ನಡೆಯುವ ಪವಿತ್ರ ಮದುವೆ ಪದ್ಧತಿ ಕೊಡವ ಬುಡಕಟ್ಟು ಕುಲದು ಅತ್ಯಂತ ಪ್ರಗತಿಶೀಲ ನಡಾವಳಿ. ಹುಟ್ಟಿನಿಂದ ಸಾವಿನವರೆಗೆ ಪುರೋಹಿತ ಶಾಹಿಯ ಯಾವುದೇ ಸೋಂಕಿಲ್ಲದ ಮದುವೆಯಲ್ಲಿ ಪುರೋಹಿತ ಶಾಹಿಯ ಪ್ರವೇಶವಿಲ್ಲದೆ ಗುರು-ಹಿರಿಯರು ಕೊರವಕಾರ ಅಂದರೆ ಕುಟುಂಬದ ಮುಂದಾಳು ಮತ್ತು ಅರುವ. (ಅರುವ ಅಂದರೆ ಪ್ರತೀ ಕೊಡವ ಒಕ್ಕಕ್ಕೂ ಅವರ ನೆರವಿಗೆ ಮತ್ತೊಂದು ಕೊಡವ ಒಕ್ಕ ಇರುತ್ತದೆ. ಅಂತಹವರನ್ನು ಅತ್ತಿಂದಿತ್ತ ಇತ್ತಿಂದಿತ್ತ ಅರುವನೆಂದು ಸಂಬೋಧಿಸಲಾಗುತ್ತದೆ.) ಅಂತೆಯೇ ಅದೆಷ್ಟೇ ಉನ್ನತ ಹುದ್ದೆಯಲ್ಲಿರಲಿ, ಅತ್ಯಂತ ದೊಡ್ಡ ವಿಧ್ವಾಂಸನೇ ಆಗಿರಲಿ ಕೊಡವರ ರಾಜಕೀಯ ಪ್ರಜೆÐ ಶೂನ್ಯ. ಇದೂ ಕೂಡಾ ಖಿಡಿibಚಿಟ ಛಿhಚಿಡಿಚಿಛಿಣeಡಿisಣiಛಿs/ಬುಡಕಟ್ಟು ನಡಾವಳಿ. ಏಕೆಂದರೆ ಜಗತ್ತಿನ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ವಚ್ಛಂದವಾಗಿ ಬದುಕುವುದು ಬುಡಕಟ್ಟು ಕುಲದ ಪ್ರಮುಖ ಗುಣಲಕ್ಷಣ. ಆದರೆ ಈ ರಾಜಕೀಯ ಅಜಾÐನಗುಣ ನಮ್ಮ ಹಕ್ಕು ಪ್ರತಿಪಾದಿಸಿ ನಮ್ಮ ಪವಿತ್ರ ಸಂವಿಧಾನದ ಭಾಗವಾಗಿ ಸಬಲೀಕರಣಗೊಳ್ಳಲು ಕೊಡವರಿಗೆ ತೊಡಕಾಗಿದೆ. - ಜಿಂಕೆ ಮತ್ತು ಕಾಡು ಕುರಿಯ ಚರ್ಮವನ್ನು ಎಳೆ ಮಗುವಿನ ತೂಗು ತೊಟ್ಟಿಲಾಗಿ ಕೊಡವರು ಬಳಸುತ್ತಿದ್ದರು. ಇತ್ತೀಚ್ಛಿನವರೆಗೂ ಅಕ್ಕಿ ಬೀಸುವ ಕಲ್ಲಿನಡಿ ಜಿಂಕೆಯ ಚರ್ಮವನ್ನು ಚಾಪೆಯಂತೆ ಹಾಸುತ್ತಿದ್ದರು. ಸುಮಾರು 1600 ರ ವರೆಗೆ ವಿವಿಧ ಪ್ರಾಣಿಗಳ ತುಪ್ಪಳಗಳನ್ನೇ ತಮ್ಮ ಉಡುಗೆ (ಕುಪ್ಯ) ವನ್ನಾಗಿ ಬಳಸುತ್ತಿದ್ದರು. ಹೆಬ್ಬುಲಿಯನ್ನು ಕೊಂದು ಸಾಹಸ ಮತ್ತು ಬುಡಕಟ್ಟು ಪರಂಪರೆಯ ಪ್ರತೀಕವಾಗಿ ಹುಲಿಯನ್ನು ಕೊಂದ ಕೊಡವನನ್ನು ಮದುವಣಿಗನಂತೆ ಸಿಂಗರಿಸಿ ಹುಲಿಯನ್ನು ದೊಡ್ಡ ಚಪ್ಪರದಲ್ಲಿ ಸಿಂಗರಿಸಿ ಹುಲಿಯೊಂದಿಗೆ ನಡೆಯುವ ಮದುವೆ “ನರಿ ಮಂಗಲ” ವೆಂದು ಖ್ಯಾತಿವೆತ್ತಿದೆ.
- ಹಿಂದು ಮ್ಯಾರೇಜ್ ಆಕ್ಟ್ ಪ್ರಕಾರ (ಹಿಂದು ವೈವಾಹಿಕ ಕಾಯ್ದೆ) ಯ ಪ್ರಕಾರ “ಸಪ್ತಪದಿ ಇಲ್ಲದೇ ನಡೆಯುವ ಯಾವುದೇ ಮದುವೆಗಳನ್ನು ಹಿಂದು ಮದುವೆ ಎಂದು ಪರಿಗಣಿಸಲಾಗುವುದಿಲ್ಲ. ಸಪ್ತಪದಿ ಸಂಸ್ಕಾರಕ್ಕೆ ಹೊರತಾದ ವಿಧಿ ವಿಧಾನಗಳನ್ನು ಅನುಸರಿಸುವವರನ್ನು ಹಿಂದುಗಳೆಂದು ಮಾನ್ಯ ಮಾಡಲಾಗುವುದಿಲ್ಲ.
- ಸಾಂಪ್ರದಾಯಿಕ ಮಧ್ಯ ತಯಾರಿಕೆ ಅದರ ಸೇವನೆ. ವ್ಯಕ್ತಿಯ ಮರಣದ ಸಂದರ್ಭ
ಚಾವು ಪಾಟ್'' ಅಂದರೆ ಸತ್ತವನು ಬದುಕಿದ್ದಾಗ ಆತ ಹಾದು ಬಂದ ಜೀವನ ವಿಧಾನವನ್ನು ಲಾವಣಿಯ ರೂಪದಲ್ಲಿ ದುಖಃಭರಿತವಾಗಿ ಹಾಡುವುದು ಮತ್ತು ಆತನ ತಿಥಿ ಕರ್ಮಾಂತರದಂದು ಆತನನ್ನು ಸ್ವರ್ಗಕ್ಕೇರಿಸಲು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುವ
ಮಾದ ಪಾಟ್” ಅತ್ಯದ್ಭುತ ಮಾನವೀಯ ಮೌಲ್ಯಗಳಿಂದ ಕೂಡಿದ ಬುಡಕಟ್ಟು ಸಂಸ್ಕಾರವನ್ನು ಬಿಂಬಿಸುವ ದುಡಿಕೊಟ್ಟ್ ಪಾಟ್ ಮನಮಿಡಿಯುವಂತಿರುತ್ತದೆ. ಹತ್ತು ಮಕ್ಕಳನ್ನು ಹಡೆದ ದಂಪತಿಗಳನ್ನು ಗುರು ಹಿರಿಯರ ಸಮ್ಮುಖ ಸನ್ಮಾನಿಸಿ ಗೌರವಿಸುವಪೈತಾಂಡೆ ನಮ್ಮೆ'',
ಕನ್ನಿಕೋಂಬರೆ, ಕನ್ನಿ ಕಂಬದ ಮಹತ್ವ” ಮತ್ತು ಕುಟುಂಬದ ಹಿರಿಯ / ಕೊರವಕಾರನ ಕೈಯಲ್ಲಿ ಸದಾ ಕಾಲ ಕುಲವನ್ನು ಮುನ್ನಡೆಸುವ ದ್ಯೋತಕವಾಗಿ ಹೊಂದಿರುವ “ಗೆಜ್ಜೆತಂಡ್” ಕೊಡವರ ಬುಡಕಟ್ಟು ಪರಂಪರೆಗೆ ಮತ್ತೊಂದು ಗರಿ. - ಬಾಬರ್ ಭಾರತಕ್ಕೆ 1526 ರಲ್ಲಿ ಆಗಮಿಸಿ ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಂದೂಕು ಪರಿಚಯಿಸುವ ಮುನ್ನ ಈಟಿ, ಭರ್ಜಿ, ಬಿಲ್ಲು, ಬಾಣ, ಒಡಿಕತ್ತಿಗಳೇ ಕೊಡವರ ಆಯುಧ.
ತೋಕ್‍ಪೂ'' ಗೆಡ್ಡೆಯಲ್ಲಿರುವ ವಿಷವನ್ನು ಆಯುಧಗಳಿಗೆ ಸವರಿ ಆ ಮೂಲಕ ಶತ್ರುಗಳೊಂದಿಗೆ ಕಾದಾಡುವ ಹಿನ್ನಲೆ, ವಿಶಿಷ್ಟ ಹುಟ್ಟು ಮತ್ತು ಸಾವು ಪದ್ಧತಿ, ಕೂಪದಿ ಕೂಳ್(ಸಿಮಂತ) ಬಾಣಂತಿ ಆರೈಕೆ, ಭಾಷೆ, ನೃತ್ಯ, ಜನಪದ ಕಾವ್ಯ, ಜೋಗುಳ ಹಾಡು, ಮರಣದ ಹಾಡು, ಲಾವಣಿ, ಪುತ್ತರಿ ಪಾಟ್, ಮಂದ್ ಸುತ್ತ್ ಕುಣಿಯುವ ಪರಂಪರೆ, ಮೂರ್ತಿ ಪೂಜೆ ಇಲ್ಲದೆ ಕೊಡವರ ಸೃಷ್ಟಿ ಕರ್ತ, ಮೊಟ್ಟ ಮೊದಲ ಕೊಡವ/ಆಡಂನನ್ನು ಗುರುವೆಂದು ಮತ್ತು ಪ್ರತೀ ವಕ್ಕದ ಮೂಲ ಪುರುಷನನ್ನು ಕಾರೋಣನೆಂದು ಆರಾಧಿಸುತ್ತಾ, ನೆಲ್ಲಕ್ಕಿಯಡಿಯಲ್ಲಿ ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದರೂ ಅಪವಿತ್ರಗೊಳ್ಳುವ ಹಿನ್ನಲೆಯಲ್ಲಿ ಗರ್ಭಗುಡಿಯಾದ ಕನ್ನಿಕೋಂಬರೆಯಲ್ಲಿ ಶಸ್ತ್ರಾಸ್ತ್ರಗಳನ್ನು ಧಾರ್ಮಿಕ ಸಂಸ್ಕಾರವೆಂದು ಪರಿಗಣಿಸಿ ಪೂಜಿಸುವ ಸೂರ್ಯ-ಚಂದ್ರ ಮತ್ತು ಭೂಮಿ ತಾಯಿ, ಜಲ ದೇವತೆ ಕಾವೇರಿಯನ್ನು (ಕೊಡಗಿಗೆ ಬಂದ ಬೇರೆ ಬೇರೆ ಆಕ್ರಮಣಕಾರರ ಪ್ರಭಾವಳಿಯಿಂದ ಹಲಕೆಲವು ದೇವಸ್ಥಾನಗಳು ಕೊಡಗಿನಲ್ಲಿ ತಲೆಯೆತ್ತಿದವು. ಹಾಲೇರಿ ರಾಜವಂಶ 1633ರಲ್ಲಿ ಕೊಡಗಿಗೆ ಪ್ರವೇಶಿಸಿದ ನಂತರ ಅವರ ಪ್ರಭಾವಳಿಯಲ್ಲಿ ಕೊಡವರು ತಲಕಾವೇರಿಯಲ್ಲಿ ಪಿಂಡ ಪ್ರಧಾನ ಮಾಡಲು ಆರಂಭಿಸಿದರು. ಹಿಂದೆ ಆ ಪದ್ಧತಿ ಇರಲಿಲ್ಲ.) ಭಕ್ತಿ ಭಾವದಿಂದ ಪ್ರಾರ್ಥಿಸುತ್ತಾ ಸ್ವಚ್ಛಂಧವಾಗಿ ಬಾಳಿದ ಕೊಡವರು ಭೇಟೆ, ಯುದ್ಧ ಮತ್ತು ಪಶುಪಾಲನೆ-ಬೇಸಾಯ ನಮ್ಮ ಜೀವನ ಶ್ರದ್ಧೆಯಾಗಿದ್ದು, ಎಲ್ಲಾ ಜನಪದ ಹಾಡುಗಳಲ್ಲಿ ಮತ್ತು ಕಾವ್ಯಗಳಲ್ಲಿ ಈ ಅಂಶಗಳನ್ನೇ ಯಥೇಚ್ಛವಾಗಿ ಬಲಸಲಾಗಿದೆ. ಕೊಡವರು ಏಲಕ್ಕಿಯನ್ನು ಸಹಸ್ರಾರು ವರ್ಷಗಳ ಹಿಂದೆ ಸಂಶೋಧಿಸಿದ ಹಿನ್ನಲೆಯಲ್ಲಿ ಯಾಲಮಾಲೆ-ಪೊವ್ವಮಾಲೆ ಕೊಡಗೆಂದು ಸಂಭೋದಿಸಲಾಗುತ್ತಿದ್ದು ನಮ್ಮ ಎಲ್ಲಾ ಮದುವೆ ಶುಭ ಕಾರ್ಯದಲ್ಲಿ ಇತ್ತೀಚಿನವರೆಗೆ ಹೂವಿನ ಹಾರದ ಬದಲು ಯಾಲಕ್ಕಿ ಮಾಲೆಯನ್ನೇ ಬಳಸಲಾಗುತ್ತಿತ್ತು. ಮದುವಣಗಿತ್ತಿ-ಮದುಮಗನಿಗೆ, ಮದುಮಗ-ಮದುವಣಗಿತ್ತಿಗೆ ಏಲಕ್ಕಿ ಮಾಲೆಯನ್ನೇ ಅತ್ತಿಂದಿತ್ತ-ಇತ್ತಿಂದತ್ತ ವಿನಿಮಯ ಮಾಡುವ ಪದ್ಧತಿ ರೂಢಿಯಲ್ಲಿತ್ತು. ತೊಟ್ಟಿಲ ಮಗುವಿಗೆ ಜೋಗುಳ ಹಾಡುವಾಗ ಆ ಎಳೆ ಮಗುವನ್ನು ಕುರಿತು ನಿನ್ನ ಅಣ್ಣ ನಿನಗೆ ತಿನ್ನಲು ಅರಣ್ಯದಿಂದ
ಚಿಟ್ಟೆ ಪಕ್ಷಿ”ಯನ್ನು ಭೇಟೆಯಾಡಿ ತರುತ್ತಾನೆಂದು ಹೇಳುವ ಆ ಲಾವಣಿಯೇ ನಮ್ಮ ಬುಡಕಟ್ಟು ಪರಂಪರೆಗೆ ಮತ್ತಷ್ಟು ಪುಷ್ಠಿ ನೀಡಲಿದೆಯಲ್ಲದೆ, ಪುತ್ತರಿ ನಮ್ಮೆಯಂದು ನಾವು ಸ್ವಾಧಿಸುವ ಪುತ್ತರಿ ಕಳಂಜಿ (ಗೆಣಸು) ನಮ್ಮ ಬುಡಕಟ್ಟು ಪರಂಪರೆಯ ಪ್ರಾಚೀನತೆಯನ್ನು ಸಾಕ್ಷೀಕರಿಸುತ್ತದೆ. ಕೊಡವರು ಬಿದಿರು, ಬೆತ್ತ, ಕರಕುಶಲ ಕಲೆಯ ಪರಿಣಿತರಾಗಿದ್ದಾರೆ ಕೊಡವರು ನಾಟಿ ಔಷಧಿ ಪಂಡಿತರು ಪ್ರತೀ ಕೊಡವರ ಮನೆಯಲ್ಲಿ ದೊರಕುತ್ತಾರೆ. ವಿವಿಧ ಕಲಾ ಪ್ರಕಾರಗಳ ಕುಶಲಿಗರು ಕೊಡವರಲ್ಲಿ ದೊರೆಯುತ್ತಾರೆ. ಬುಡಕಟ್ಟು ನಡವಳಿಕೆಗೆ ಸಾಕ್ಷಿಯಾಗಿ ಅನೇಕ ಪಾಳೆಗಾರರು ಮತ್ತು ಆಕ್ರಮಣಕಾರರುಗಳ ಸೈನ್ಯದಲ್ಲಿ ಸೇವಕರಾಗಿಯೂ ಮತ್ತು ಬಾಡಿಗೆಬಂಟರಾಗಿಯೂ (ಒeಡಿಛಿiಟಿಚಿಡಿಥಿ) ಕೊಡವರು ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಭಾರತೀಯ ಸೇನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ಕೊಡವರು ಸಮೃದ್ಧ ಜಾನಪದ ಗಣಿ ಮತ್ತು ಶ್ರೀಮಂತ ಸಾಂಸ್ಕøತಿಕ ನಿಧಿಯಾಗಿದ್ದಾರೆ. - ಕೊಡವರ ಬದುಕಿನ ಅವಿಭಾಜ್ಯ ಅಂಗವಾದ ಯುದ್ಧ, ಬೇಟೆ ಮತ್ತು ವ್ಯವಸಾಯ-ಪಶುಸಂಗೋಪನೆಗೆ ಪೂರಕವಾಗಿಯೇ ಅವರ ಹಬ್ಬ ಹರಿದಿನಗಳು ಆಚರಿಸುತ್ತಾ ಬರಲಾಗಿದೆ. ಉದಾಹರಣೆಗೆ: 1) ಪುತ್ತರಿ ನಮ್ಮೆ 15 ದಿವಸ ವೈವಿಧ್ಯಮಯವಾಗಿ ಆಚರಿಸುವ ಸುಗ್ಗಿ. 2) ಕೈಲ್ ಪೋವುದ್-ಕೊಡವ ಆಯುಧ ಪೂಜೆ 3) ಕಾವೇರಿ ಚಂಗ್ರಾಂದಿ-ಜಲದೇವತೆಯ ಆರಾಧನೆ 4) ಪತ್ತೊಲಧಿ/ಮದುವೆಯಾಗಿ ಬೇರೆ ಮನೆಗೆ ತೆರಳಿದ ಹೆಣ್ಣುಮಕ್ಕಳು ಆ ದಿನ ವಿಶೇಷವಾಗಿ ಬಂದು ಸೇರುತ್ತಾರೆ. 5) ಕಾರೋಣಂಗ್ ಕೊಡ್ಪ-ಹಿರಿಯರಿಗೆ ನೈವೇದ್ಯ 6) ಕಕ್ಕಡ ಪದ್ನೆಟ್ 7) ಎಡಮ್ಯಾರ್-ಕೊಡವ ಹೊಸ ವರ್ಷ. ಈ ಎಲ್ಲಾ ಹಬ್ಬಗಳಲ್ಲೂ ಮತ್ತು ಗ್ರಹಪ್ರವೇಶ ಸಂದರ್ಭದಲ್ಲೂ ಹಂದಿಮಾಂಸದ ಅಡುಗೆಯ ಪ್ರಸಾದವೇ ಶ್ರೇಷ್ಠ ಹಾಗೂ ಬಾನಿಗೆ ಗುಂಡು ಹಾರಿಸುವ ಮೂಲಕ ಆಯುಧಗಳ ಅನಾವರಣಗೊಳ್ಳುತ್ತದೆ.
ಕೊಡವರ ಬುಡಕಟ್ಟು ವಂಶವಾಹಿನಿ ನಿರಂತರವಾಗಿ ಅನಾವರಣಗೊಳ್ಳುತ್ತಾ ಬಂದಿದೆ. ಲಾರ್ಡ್ ವೆಲ್ಲೆಸ್ಲಿ ಜಾರಿಗೆ ತಂದ ಸಹಾಯಕ ಸೈನ್ಯ ಪದ್ದತಿಯಲ್ಲೂ ಆಳರಸರು ತಮ್ಮ ಕೈಕೆಳಗಿನ ಕೊಡವ ಅಧೀನ ಪ್ರಜೆಗಳನ್ನ ಯುದ್ಧಕ್ಕೆ ಬಾಡಿಗೆಗೆ ನೀಡುತ್ತಿದ್ದರು. ಅದಕ್ಕೂ ಮುನ್ನ 1746 ರಿಂದ 1774 ರ ವರೆಗೆ ಭಾರತದಲ್ಲಿದ್ದ ಬ್ರಿಟಿಷ್ ಸಮರವೀರ ಲಾರ್ಡ್ ರಾಬರ್ಟ್ ಕ್ಲೈವ್ ಸೈನ್ಯದಲ್ಲೂ ಕೂಡ (ಬಂಗಾಳದಲ್ಲಿ ಕೊಡವರ ಒಂದು ಸೇನಾ ತುಕಡಿ ನೆಲೆನಿಂತಿತ್ತು) ಕೊಡವ ಬುಡಕಟ್ಟು ಯೋಧರು ಭಾಗವಹಿಸುವ ಮೂಲಕ ತಮ್ಮ ಸೇನಾ ಕೌಶಲ್ಯ ಮೆರೆದಿರುತ್ತಾರೆ. (ಉಲ್ಲೇಖ ಮೇರು ಸಾಹಿತಿ ಡಾ. ಐ.ಎಂ ಮುತ್ತಣ್ಣರವರ ಕೃತಿ) ನಿರಕ್ಷರ ಕುಕ್ಷಿಗಳಾದ ಕೊಡವರು ಅಂದು ಅಂದರೆ 1834 ರಲ್ಲಿ ಬ್ರಿಟಿಷರು ಕೊಡಗಿಗೆ ಅಧಿಕೃತ ಪ್ರವೇಶವಾಗುವ ಮೊದಲು ಬ್ರಿಟಿಷರ ಸಂಪರ್ಕ ಕೊಡವರಿಗೆ ಇರಲಿಲ್ಲ. ಆದರೆ ಅವರ ಸೇನೆಯಲ್ಲಿ ಗುಲಾಮರಾಗಿಯೋ ಬಾಡಿಗೆ ಭಂಟರಾಗಿಯೋ ಕೊಡಗಿನ ಆಳರಸರು ಬ್ರಿಟಿಷರೊಂದಿಗೆ ಬೇರೆ ಬೇರೆ ಸಂದರ್ಭದಲ್ಲಿ ನಡೆಸಿಕೊಂಡ ಒಪ್ಪಂದದ ಪ್ರಕಾರ ದುಡಿಮೆಗಾರರಾಗಿ ಕಳುಹಿಸಲ್ಪಟ್ಟು / ಸಾಗಿಸಲ್ಪಟ್ಟು ದುಡಿದಿದ್ದಾರೆ. ಉದಾ. ವಿವಿಧ ಕಸಬುಗಳ ಕುಶಲಿಗರನ್ನು ಹೇಗೆ ಗುಲಾಮರನ್ನಾಗಿಯೂ ಮತ್ತು ಬಾಡಿಗೆ ಸೇವಕರನ್ನಾಗಿಯೂ ಅಂದಿನ ಕಾಲದಲ್ಲಿ ದುಡಿಸಿಕೊಳ್ಳಲಾಗುತ್ತಿತ್ತೋ ಅವರಿಗೆ ಯಾವುದೇ ಕೂಲಿ ಯಾ ಸಂಬಳವಿರಲಿಲ್ಲ. ಬ್ರಿಟಿಷರ ಅವಧಿಯಲ್ಲಿ ಇದು ಮತ್ತು ಮುಂದುವರೆದುಇಂಡೆಚರ್ಡ್ ಲೇಬರ್ ಪಾಲಿಸಿ''ಯೆಂದು ಜಾರಿಗೆ ತಂದು ವಿಶ್ವದಾದ್ಯಂತ ತಮ್ಮ ವಸಹಾತುಗಳಲ್ಲಿ ಹೀಗೆ ಮೂಕ ಪ್ರಾಣಿಗಳಂತೆ ಕೈ ಕೆಳಗಿನ ಪ್ರಜೆಗಳನ್ನು ದುಡಿಸಿಕೊಳ್ಳಲಾಗುತ್ತಿತ್ತು. ಅದೇ ರೀತಿ ಸಮರ ಕಲೆಯಲ್ಲಿ ಕುಶಲಿಗರಾದ ಮತ್ತು ಆ ಯುದ್ಧ ಕಲೆಯಲ್ಲದೇ ಬೇರೇನು ಅರಿತಿಲ್ಲದ ಕೊಡವರನ್ನು ಗುಲಾಮರನ್ನಾಗಿಯೂ ಮತ್ತು ಬಾಡಿಗೆ ಭಂಟರನ್ನಾಗಿಯೂ ದುಡಿಸಿಕೊಳ್ಳಲಾಗುತ್ತಿತ್ತು. ಇದೆಲ್ಲವೂ ನಮ್ಮ ಬುಡಕಟ್ಟು ಮೇಲ್ಮೈ ಲಕ್ಷಣಗಳನ್ನು ಅನಾವರಣಗೊಳಿಸುತ್ತದೆ. ಟಿಪ್ಪುವಿನ ದುರಾಕ್ರಮಣದ ಸಂದರ್ಭ
ದೇವಾಟ್ ಪರಂಬ್” ನರಮೇಧ ದುರಂತದಲ್ಲಿ ಅಳಿದುಹೋದದ್ದು (ಕೊಡವರ ಶ್ರೇಷ್ಠ ಮಟ್ಟದ ಇತಿಹಾಸಕಾರ, ಸಂಶೋಧಕ ಮತ್ತು ವಿದ್ವಾಂಸ ಡಾIIಐ.ಎಂ.ಮುತ್ತಣ್ಣನವರು ಈ ಮಾನವ ದುರಂತವನ್ನು ತಮ್ಮ ಮೇರುಕೃತಿಟಿಪ್ಪು ಎಕ್ಸರೇಡ್''ನಲ್ಲಿ ಅನಾವರಣಗೊಳಿಸಿದ್ದಾರೆ) ಒಂದುಕಡೆಯಾದರೆ ಮತ್ತೊಂದು ಕಡೆ 200 ವರ್ಷಗಳ ಕಾಲ ಕೊಡಗನ್ನು ಆಳಿದ ಹೊರಗಿನ
ಕೆಳದಿ” ಮನೆತನದ ಆಳರಸರ ಕಕ್ಷೆಯಡಿ ಅಕ್ಷಃರಸ ಕೊಡವರು ಗುಲಾಮರಾಗಿ (ಜ್ಞಾನಪೀಠ ಪ್ರಶಸ್ತಿ ವಿಜೇತ ಡಾIIಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಮೇರುಕೃತಿಚಿಕ್ಕವೀರ ರಾಜೇಂದ್ರ'' ಕಾದಂಬರಿಯಲ್ಲಿ
ಕೆಳದಿ” ರಾಜಾಧಿಪತ್ಯವು 2 ಶತಮಾನಗಳ ಕಾಲ ಕೊಡವರ ಮೇಲೆ ನಡೆಸಿದ ನಿರಂತರ ಕೊಲೆಪಾತಕ ಮತ್ತು ಅತ್ಯಾಚಾರವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ) ನರಳಿದ್ದಾರೆ. ಪೋಷಕರು ಮತ್ತು ರಕ್ಷಕರ ಸ್ಥಾನದಲ್ಲಿರಬೇಕಾಗಿದ್ದ ಈ ಆಳರಸರು ಕೊಡವರನ್ನು ಸತತವಾಗಿ ಗೋಳೊಯ್ದು ಕೊಲೆಪಾತಕ ನಡೆಸಿದ್ದು ಒಂದುಕಡೆಯಾದರೆ ಮತ್ತೊಂದು ಕಡೆಯಿಂದ ಕೊಡವ ಹೆಣ್ಣುಮಕ್ಕಳನ್ನು ತಮ್ಮ ಜನಾನಕ್ಕೆ ಎಳೆದು ತಂದು ನಿರಂತರವಾಗಿ ಅತ್ಯಾಚಾರಕ್ಕೆ ಗುರಿಮಾಡಲಾಯಿತು.
ಕೊಡಗಿನ ಕಡಂಗಗಳು ಕೊಡವರ ರಕ್ತ ಬೆವರಿನ ಹೃದಯ ವಿದ್ರಾವಕ ಕಥೆಗಳನ್ನ ಹೇಳುತ್ತವೆ. ಆ ಕಾಲದಲ್ಲಿ ಇಂದಿನ ಎಡವಕ್ರರ ದುಷ್ಟಸಂತತಿಯಾದ ರೊಹಿಂಗ್ಯಗಳಾಗಲೀ, ಬೆಂಗಾಲಿಗಳಾಗಲೀ ಅಥವಾ ಅಸ್ಸಾಮಿಗಳಾಗಲೀ ಕೊಡಗಿನಲ್ಲಿ ದುಡಿಯುತ್ತಿರಲಿಲ್ಲ. ಕೊಡವರೇ ಸ್ವತಃ ಗಾಣದ ಎತ್ತುಗಳಂತೆ ದೀರ್ಘ ಶೋಷಣೆಯ ಮೂಕ ಸಂಕಟ ಅನುಭವಿಸುತ್ತಾ ಗುಲಾಮರಾಗಿ ದುಡಿಮೆಗಾರರಾಗಿ ಕೆಲಸ ಮಾಡುತ್ತಿದ್ದರು. (ಯಾವ ಕೊಡವರನ್ನು ಅತೀ ಹೀನಾಯವಾಗಿಯೂ, ಕ್ರೌರ್ಯದಿಂದಲೂ ಕಾಣುತ್ತಾ ಮತ್ತು ಗುಲಾಮರಾಗಿಯೂ ದುಡಿಸಿಕೊಳ್ಳುತ್ತಿದ್ದ ಆಕ್ರಮಣಕಾರ ಟಿಪ್ಪು ಮತ್ತು ಹೊರಪ್ರದೇಶದಿಂದ ಕೊಡಗಿಗೆ ಒಕ್ಕರಿಸಿದಕೆಳದಿ'' ರಾಜಾಧಿಪತ್ಯ ಪ್ರೇತಾತ್ಮಗಳು ಇಂದು ಈ ಎಡವಕ್ರರೂ, ದುರ್ಬುದ್ಧಿ ಜೀವಿಗಳು ಮತ್ತು ಸಿ.ಪಿ.ಎಮ್.ಎಲ್ ದೇಶದ್ರೋಹಿಗಳಿಗೆ ಮಹಾನ್ ಮಾನವತಾವಾದಿಗಳಾಗಿಯೂ, ಸ್ತ್ರೀಕುಲೋದ್ಧಾರಕರಾಗಿಯೂ, ಶಿಶುನಾಳ ಷರೀಫರಾಗಿಯೂ, ಸಂತ ಕಬೀರರಾಗಿಯೂ, ಜಗಜ್ಯೋತಿ ಬಸವಣ್ಣನವರಾಗಿಯೂ ಕಾಣುತ್ತಿರುವುದು ಕಾಲದ ವಿಪರ್ಯಾಸ) ಉದಾಹರಣೆಗೆ ತಮ್ಮ ಕುಟುಂಬದ ಸರಹದ್ದನ್ನು ರÀಕ್ಷಿಸಿಕೊಳ್ಳಲು ಮತ್ತು ಪರಸ್ಪರ ಲೂಟಿ, ಕೊಳ್ಳೆ, ಆಕ್ರಮಣಗಳನ್ನು ತಡೆಯಲು 20 ಅಡಿ ಅಗಲ 40 ಅಡಿ ಆಳದ ಕಡಂಗಗಳನ್ನು ಕೊಡವರು ಅನಾದಿಕಾಲದಲ್ಲಿ ತೋಡಿದ್ದರು. ತದನಂತರ ಗ್ರಾಮ ಮತ್ತು ನಾಡುಗಳ ಸರಹದ್ದುಗಳನ್ನು ಗುರುತಿಸಿ ಉಳಿಸಿಕೊಳ್ಳಲು ಕಡಂಗಗಳನ್ನು ತೋಡಿದ್ದರು. ಇದೂ ಕೂಡಾ ಒಂದು ಗ್ರಾಮದ ಯಾ ನಾಡಿನ ಗುಂಪು ಇನ್ನೊಂದು ಗ್ರಾಮ ಯಾ ನಾಡನ್ನು ಕೊಳ್ಳೆ, ಲೂಟಿ ಮಾಡದಂತೆ ತಡೆಯುವಲ್ಲಿ ಸಹಾಯಕವಾಗಿತ್ತು. ಕೊಡವರ ಈ ಕೌಶಲ್ಯ ಮತ್ತು ಪರಿಶ್ರಮವನ್ನು ಅರಿತು ಹೊರಪ್ರದೇಶದ ವಿಸ್ತರಣಾವಾದಿಗಳು ಮತ್ತು ಆಕ್ರಮಣಾಕಾರಿ ರಾಜ-ಮಹಾರಾಜರು ಕೊಡಗನ್ನು ಆಳುವ ಸಂದರ್ಭ ಕುಟುಂಬದ ಮುಖ್ಯಸ್ಥ, ಗ್ರಾಮದ ಮುಖ್ಯಸ್ಥ ಮತ್ತು ನಾಡಿನ ಮುಖ್ಯಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಕೊಡವರನ್ನು ಕಡಂಗ ತೋಡಲು ಗುಲಾಮ ದುಡಿಮೆಗಾರರಾಗಿ ಬಳಸಿಕೊಳ್ಳುತ್ತಿದ್ದರು. ಉದಾಹರಣೆಗೆ ಒಬ್ಬ ಕೊಡವ ಮದುವೆಯಾಗಿ ಆತನಿಗೆ ಒಂದು ಮಗು ಜನಿಸಿದ ಕೂಡಲೇ ಆ ಮಗುವಿನ ನಾಮಕರಣ ಮಾಡಿದ ನಂತರ ಆ ಕೊಡವ ಕಡಂಗ ತೋಡಲು ತೆರಳುತ್ತಿದ್ದ. ಹೀಗೆ ತೆರಳಿದ ಕೊಡವ ಹಿಂತಿರುಗುತ್ತಿದ್ದುದು 2 ದಶಕಗಳ ನಂತರ ಅಂದರೆ ಆ ಮಗುವಿನ ವಿವಾಹದ ಸಂದರ್ಭಕ್ಕೆ ಆಗಮಿಸುತ್ತಿದ್ದ. ಮತ್ತೆ ಆ ವಿವಾಹಿತ ಮಗನಿಗೆ ಮಗು ಜನಿಸಿದ ನಂತರ ಆತನೂ ಕೂಡಾ ಕಡಂಗ ತೋಡಲು ತೆರಳುತ್ತಿದ್ದ. ಉದಾಹರಣೆಗೆ ರಾಜರ ಆಸ್ಥಾನದಲ್ಲಿ ರಾಜನ ಆದೇಶದಂತೆ
ಇಟ್ಟಿ-ಬಿಟ್ಟಿ” ಚಾಕರಿ ಮಾಡುತ್ತಿದ್ದರು. ಇದು ಪಕ್ಕಾ ಗುಲಾಮಗಿರಿಯಾಗಿತ್ತು.
ಕೊಡವ ಬುಡಕಟ್ಟು ಕುಲದ ಸಂರಚನೆಯು ವಕ್ಕ/ಖಾಂದಾನ್‍ಗಳಿಂದ ಕೂಡಿದ್ದು ಮಾನವ ಶಾಸ್ತ್ರದ ವ್ಯಾಖ್ಯಾನದಂತೆ ಇದುಬ್ಯಾಂಡ್'' ಸಂರಚನೆಯಾಗಿದ್ದು ಇದರ ಮುಖ್ಯಸ್ಥನು ಕುಲಶಾಸ್ತ್ರೀಯ ಮಾನದಂಡದ ಪ್ರಕಾರ
ಚೀಫ್ ಡಂ” ಎಂದು ನಿರ್ವಿವಾದವಾಗಿ ಕರೆಯಬಹುದು. ಹೀಗೆ ಕುಟುಂಬದ ಹಿರಿಯನು ಪಟ್ಟೆದಾರ ಮತ್ತು ಕೊರವಕಾರನೆಂದು ಗುರುತಿಸಲ್ಪಟ್ಟಿದ್ದು ಗ್ರಾಮಗಳ, ನಾಡುಗಳ ಮತ್ತು ಸಮಷ್ಠಿಯಾಗಿ ಕೊಡವ ನೆಲ ಯಾನೆ ಕೊಡಗು ದೇಶ ಮುಖ್ಯಸ್ಥರನ್ನು ಊರು ತಕ್ಕ, ನಾಡು ತಕ್ಕ ಮತ್ತು ದೇಶತಕ್ಕರೆಂದು ಕರೆಯಲಾಗುತ್ತಿತ್ತು. ಕೊಡವರಿಗೆ ಅವರದ್ದೇ ಆದ ಅಲಿಖಿತ ಸಂವಿಧಾನವು ಅಸ್ತಿತ್ವದಲ್ಲಿತ್ತು ಊರಿನ ಪಾಳೇಗಾರರು, ನಾಡಿನ ಮಾಂಡಲೀಕರು ಇರುತ್ತಿದ್ದರು. ಇವರ ಕೈಕೆಳಗೆ ಸಣ್ಣ ಸಣ್ಣ ಸೇನಾತುಕಡಿಗಳಿದ್ದು ಇಂದಿನ ಅಪಘಾನಿಸ್ತಾನದಲ್ಲಿ ಅಸ್ತಿತ್ವದಲ್ಲಿರುವವಾರ್ ಲಾರ್ಡಿಸಮ್'' ಕೊಡವ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಈ
ವಾರ್ ಲಾರ್ಡ್”ಗಳನ್ನು ಹೊರಗಿನ ರಾಜರು ಒಪ್ಪಂದದ ಮೇರೆ ಸೇನಾತುಕಡಿಗಳನ್ನು ಯುದ್ಧಕ್ಕೆ ಬಳಿಸಿಕೊಳ್ಳುತ್ತಿದ್ದರು. ಹೀಗೆ ಯುದ್ಧಕ್ಕೆ ಬಳಸಲ್ಪಟ್ಟ ಕೊಡವ ಬುಡಕಟ್ಟು ಯೋಧರು ಯಾವುದೇ ಭತ್ಯೆಯ ಸಂಬಳವಿಲ್ಲದೆ ಗುಲಾಮರಂತೆ ಯುದ್ಧದಲ್ಲಿ ದುಡಿಯುತ್ತಿದ್ದರು. ಇದು ಹೀಗೆ ಮುಂದುವರೆದು 1914 ರಿಂದ 1919 ರವರೆಗೆ ನಡೆದ ಒಂದನೇ ಜಾಗತಿಕ ಮಹಾಯುದ್ಧ ಮತ್ತು 1939 ರಿಂದ 1945 ರವರೆಗೆ ನಡೆದ ಎರಡನೇ ಜಾಗತಿಕ ಮಹಾಯುದ್ಧದವರೆಗೆ ಈ ಗುಲಾಮಿ ಪ್ರವೃತ್ತಿಯ ಸೇನಾ ಕಸುಬುಗಳಲ್ಲಿ ಕೊಡವರು ಭಾಗಿಯಾಗಿದ್ದರು. (ಈ ಎರಡೂ ಯುದ್ಧಗಳಲ್ಲಿ ಕೇವಲ ಮಾರ್ಷಲ್ ರೇಸ್ ಅಂದರೆ ಯೋಧ ಬುಡಕಟ್ಟು ಸಮುದಾಯವನ್ನು ಮಾತ್ರ ಯುದ್ಧಕ್ಕೆ ಬಳಸಲಾಗುತ್ತಿತ್ತು. ಅದರಂತೆ ಅನೇಕರು ತಮ್ಮ ಕುಲಧರ್ಮದಂತೆ ಮನಪೂರ್ವಕವಾಗಿ ಭಾಗಿಯಾದರೆ ಅದೆಷ್ಟೋ ಕೊಡವ ಯೋಧರನ್ನು ಮನೆಗಳಿಗೆ ನುಗ್ಗಿ ಬಲವಂತದಿಂದ ಎಳೆದುಕೊಂಡು ಹೋದ ಘಟನೆಗಳು ನಡೆದಿವೆಯಲ್ಲದೆ ತಲೆತಪ್ಪಿಸಿಕೊಂಡು ಓಡುವವರನ್ನು ಅಟ್ಟಾಡಿಸಿಕೊಂಡು ಹಿಡಿದು ಬಲವಂತದಿಂದ ಈ ಎರಡು ಯುದ್ಧಗಳಲ್ಲಿ ಬಳಸಿಕೊಳ್ಳಲಾಗಿದೆ.) ಎರಡನೇ ಮಹಾಯುದ್ಧಕ್ಕೆ ಇತಿಶ್ರೀ ಹಾಡುವುದರ ಮೂಲಕ ಕ್ರೌರ್ಯದ ಜಗತ್ತಿನಿಂದ ಅಪ್ಪಟ ಮಾನವತೆಯ ಜಗತ್ತಿಗೆ ತೆರೆದುಕೊಳ್ಳುವ ಉದ್ದೇಶದಿಂದ ನಿರುಪಯುಕ್ತವಾಗಿದ್ದಲೀಗ್ ಆಫ್ ನೇಷನ್''ಅನ್ನು ಬರಕಾಸ್ತು ಮಾಡುವುದರ ಮುಖಾಂತರ 1945 ರಲ್ಲಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಕೊಡವರ ಬದುಕಿನಲ್ಲಿ ಹೊಸ ಬೆಳಕು ಮೂಡಲಾರಂಭಿಸಿತು. ವಿಶ್ವ ಸಂಸ್ಥೆ
ನವ ಜಾಗತಿಕ ನಾಗರಿಕ ನಿಯಮ”ವÀನ್ನು ಜಾರಿಗೊಳಿಸುವ ಮೂಲಕ ಇಡೀ ಜಗತ್ತು ಗುಲಾಮಗಿರಿಯಿಂದ ಹೊರಬರಬೇಕೆಂಬ ಒಡಂಬಡಿಕೆಗೆ ಸಹಿ ಹಾಕುವುದರೊಂದಿಗೆ ಜಗತ್ತಿನ ಪ್ರತಿಯೊಬ್ಬನ ವೈಯಕ್ತಿಕ ಹಕ್ಕು, ಭಾಷಾ-ಸಾಂಸ್ಕತಿಕ ಹಕ್ಕು, ರಾಜಕೀಯ ಸ್ವಯಂ-ನಿರ್ಣಯ ಹಕ್ಕು ಮತ್ತು ಜನ್ಮ ಭೂಮಿಯ ಹಕ್ಕು ಮಾನ್ಯ ಮಾಡುವ ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಇದನ್ನು ಅಂತರರಾಷ್ಟ್ರೀಯ ಮಾನವ ಹಕ್ಕೆಂದು ಪರಿಗಣಿಸಲಾಯಿತು. ಈ ಐತಿಹಾಸಿಕ ಡಿಕ್ಲರೇಷನ್‍ನನ್ನು ಅಮೇರಿಕದ ಡಂಬರ್ಟ್‍ಟನ್ ಓಕ್ಸ್‍ನಲ್ಲಿ ಸಮಾವೇಶಗೊಂಡ 5 ಜನ ಜಾಗತಿಕ ಮುತ್ಸದಿಗಳಾದ ಸರ್ವಶ್ರೀ ಅಮೇರಿಕದ ರೂಸ್‍ವೆಲ್ಟ್, ಫ್ರಾನ್ಸ್‍ನ ಚಾಲ್ರ್ಸ್-ಡಿ-ಗಾಲೆ, ಇಂಗ್ಲೆಂಡಿನ ವಿನ್ಸೆಂಟ್ ಚರ್ಚಿಲ್, ಚೈನಾದ ಚಿಯಾಂಗ್-ಕೈ-ಷೇಕ್ ಮತ್ತು ರಷ್ಯಾದ ಸ್ಟಾಲಿನ್ ಕೈಗೊಳ್ಳುವುದರ ಮೂಲಕ ಹೊಸ ಜಾಗತಿಕ ಶಕೆ ಯೊಂದಕ್ಕೆ ಮುನ್ನುಡಿ ಬರೆದರು. ಅದರ ಪ್ರಕಾರ ಯುದ್ಧದಲ್ಲಿ ಭಾಗಿಯಾದ ಎಲ್ಲಾ ಸೈನಿಕರಿಗೆ ಮತ್ತು ಅವರ ವಿಧವೆಯರಿಗೆ ಸಂಬಳ-ಭತ್ಯೆ ಹಾಗೂ ಇನ್ನೂ ಸೈನ್ಯದಲ್ಲಿ ದುಡಿಯಲು ಚೈತನ್ಯವಿರುವ ಎಳೆ ಪ್ರಾಯದ ಯೋಧರ ಉದ್ಯೋಗ ಮುಂದುವರಿಕೆಯ ಖಾತ್ರಿ ನೀಡಲಾಯಿತು. ಆ ಸಂಬಳ-ಭತ್ಯೆ ಪ್ರಕಾರ ಕೊಡವರು ತಮ್ಮ ಪೂರ್ವಾರ್ಜಿತ ಕರೆಕಾಡುಗಳನ್ನು ಅಭಿವೃದ್ಧಿಪಡಿಸಿದರು ಮತ್ತು ತಮ್ಮ ಮಕ್ಕಳಿಗೆ ಆಧುನಿಕ ವಿದ್ಯಾಭ್ಯಾಸ ನೀಡಿದರು. ಆದರೆ ನಮ್ಮ ಹೀನ-ದೀನ, ಬುಡಕಟ್ಟು ಪರಂಪರೆಯನ್ನು ಈ ಆಧುನಿಕ ವಿದ್ಯೆಯ ಕಾರಣಕ್ಕಾಗಿ ಆಡಳಿತಾಂಗ ಮರೆಮಾಚುವಂತಿಲ್ಲ. - ಕೊಡವರ ಪಾರಮಾರ್ಥಿಕ ಸ್ಥಾನವಾದ ಐನ್‍ಮನೆ, (ಹಿಂದೆಲ್ಲಾ ಗುಡಿಸಲು ತದನಂತರ ಹುಲ್ಲಿನ ದೊಡ್ಡ ಮನೆ) ಆ ಐನ್‍ಮನೆಯೊಳಗಿನ
ನೆಲ್ಲಕ್ಕಿ ನಡುಬಾಡೆ'' ಕಾರೋಣನ ನೆಲೆಯಾದರೆ
ಕನ್ನಿಕೊಂಬರೆ” ಗುರುವಿನ ನೆಲೆಯಾಗಿದೆ.ಕೈಮಡ
ಗತಿಸಿಹೋದ ಕುಟುಂಬದ ಪ್ರತೀ ಸದಸ್ಯನ ನೆಲೆಯಾಗಿದೆ. ಊರ್ಮಂದ್, ನಾಡ್‍ಮಂದ್ ಮತ್ತು ದೇಶ್‍ಮಂದ್ ಈ ಮಂದ್‍ಗಳು ನ್ಯಾಯಪೀಠ, ಸಮರ ಕಲಾ ಅಭ್ಯಾಸ/ತಾಲೀಮ್ ನಡೆಸುವ,ನೃತ್ಯ/(ಪುತ್ತರಿಕೋಲ್, ಉಮ್ಮತಾಟ್,ಕತ್ತಿಯಾಟ್,ಪೀಲಿಯಾಟ್,ಬೊಳಕಾಟ್) ಮತ್ತು 42 ಬಗೆಯ ಬೇರೆ ಬೇರೆ ಕೊಡವ ಬುಡಕಟ್ಟು ಕ್ರೀಡೆಯನ್ನು ಪ್ರದರ್ಶಿಸುವÀ ಬಹುಮುಖ ರಂಗಮಂದಿರವಾಗಿದೆ. ಕೊಡವರು ತಮ್ಮದೇ ಆದ ಬುಡಕಟ್ಟು ಪಂಚಾಂಗ ಮತ್ತು ಅಲಿಖಿತವಾದ ನಡವಳಿಯನ್ನು ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಕುಟುಂಬದ ಗುರುಹಿರಿಯರ ಸಮ್ಮುಖದಲ್ಲಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೀಪ ಉರಿಸಿ ಅಲ್ಲಿ ಆಡುವ ಮಾತು ಸೂರ್ಯ-ಚಂದ್ರರಷ್ಟೇ ಸತ್ಯವಾಗಿರುತ್ತದೆ ”ತಪ್ಪಡಕ” ಕಟ್ಟುವ ಪದ್ಧತಿ- ಉದಾಹರಣೆಗೆ: 1 ಕೋಟಿ ರೂ ಹಣವನ್ನು ಸಾಲ ರೂಪದಲ್ಲಿ ಪಡೆದರೂ ಅದಕ್ಕೆ ಲಿಖಿತ ಕರಾರು ಇರುವುದಿಲ್ಲ. ಮಾತು-ಭಾಷೆ ಭರವಸೆ ಮತ್ತು ನಂಬಿಕೆಗಳೇ ಅಂತಿಮ. ಇಂತಹ ಒಂದು ಅಪರೂಪದ ಅಪೂರ್ವವಾದ ಬುಡಕಟ್ಟು ವರ್ಗ ಕೊಡವರಾಗಿದ್ದಾರೆ. ಕೊಡವರಲ್ಲಿ ಉಪಜಾತಿ-ಒಳಪಂಗಡಗಳಿಲ್ಲ. ಇತ್ತೀಚಿನ ವರೆಗೂಮುಯ್ಯಾಳ್-ಕೂಡಾಳ್'' ಸಹಕಾರಿ ಕೃಷಿ ಪದ್ಧತಿಯನ್ನು ಮುಂದುವರೆಸಿಕೊಂಡು ಬರಲಾಗುತ್ತಿತ್ತು. ಅತ್ತಿಂದಿತ್ತ-ಇತ್ತಿಂದತ್ತ ಪರಸ್ಪರ ಗದ್ದೆ ಕೆಲಸ ಹಿಂದಿನ ಕುಮರಿ ಬೇಸಾಯಗಳನ್ನು ಮಾಡುತ್ತಿದ್ದರು. ಹೊರಗಿನ ಪಾಲೇರಿದಾಗ ರಾಜ ಮತ್ತು ಬ್ರಿಟಿಷರ ಅವಧಿಯಲ್ಲಿ ಪ್ರಭಾವಿತರಾದ 0.1% ಕೊಡವರು ಪಾಲೇರಿದಾಗ ರಾಜ ಮತ್ತು ಬ್ರಿಟಿಷರ ಅವಧಿಯಲ್ಲಿ ಈ ಎರಡೂ ಆಡಳಿತಗಾರರ ಉಪಯೋಗ ಮತ್ತು ಉದ್ಧಾರಕ್ಕಾಗಿ ಬಂದ ಇತರ ಪ್ರದೇಶದ (ಅದರಲ್ಲೂ ಪ್ರಧಾನವಾಗಿ ಮಲಭಾರಿನಿಂದ ಬಂದ 18 ವಾದಿಗಳನ್ನು) ಜನರನ್ನು ತಮ್ಮ ಕೃಷಿ ಕಾರ್ಯದ ಅವಲಂಬನೆಗೆ ಬಳಸಿಕೊಂಡರೇ ವಿನಹ ಉಳಿದ ತ್ರಾಣವಿಲ್ಲದ ಕೊಡವರು ಅವರೇ ದುಡಿಯುತ್ತಾ ತಮ್ಮ ಸಹಾಕಾರಿ ಪದ್ಧತಿಯಾದ
ಮುಯ್ಯಾಳ್-ಕೂಡಾಳ್” ಪದ್ಧತಿಯನ್ನು ಇಂದಿಗೂ ಉಳಿಸಿಕೊಂಡು ಮುಂದುವರೆಸಿದ್ದಾರೆ. ಆದರೆ 0.5% ಇಟiಣe ಕೊಡವರು 99.05% ಕೊಡವರಿಂದ ವಿಮುಖರಾಗಿದ್ದಾರೆ. ಆದರೆ ಸರ್ಕಾರಿ ಯಂತ್ರ, ಬುದ್ಧಿ ಜೀವಿ ವಲಯ, ಪತ್ರಿಕಾ/ಮಾಧ್ಯಮ ವಲಯ ಮತ್ತು ಅತ್ಯುನ್ನತ ಅಧಿಕಾರ ಕೇಂದ್ರಗಳಲ್ಲಿ ಪ್ರಭಾವಿತರಾಗಿ ಕೊಡವರು ಅಂದರೆ ಹೀಗೆ’, ಎಂದು ಬಿಂಬಿಸಿ ಉಳಿದ 99.05% ಕೊಡವರಿಗೆ ಏನೇನು ದೊರಕದಂತೆ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಈ ಸುಂದರ ಪವಿತ್ರ ಸಂವಿಧಾನದ ಭಾಗವಾಗದಂತೆ ನೋಡಿಕೊಳ್ಳಲಾಗಿದೆ. ಮೇಲೆ ತೋರಿಸಿದ ಆಡಳಿತ ರಂಗ ಮತ್ತು ಅಂಗಗಳು ಇವರ ಮಾತನ್ನೇ ಅಂತಿಮವೆಂದು ನಂಬಿ 99.05% ಅಜ್ಞಾತ – ಅಗೋಚರ ಕೊಡವರಿಗೆ ಅನ್ಯಾಯ ಮತ್ತು ವಂಚನೆಯನ್ನು ಎಸಗುವುದನ್ನು ಮುಂದುವರೆಸುತ್ತಾ ಬರಲಾಗಿದೆ. (ಕುಟುಂಬದ ಯಾ ಗ್ರಾಮದ ಒಂದಿಬ್ಬರ ಬಳಿ ಇರುವ ಆ ಮದುವೆಯ ಆಭರಣಗಳಾದಪತ್ತಾಕ್'',
ತೊಡಙ”,ಅರೆಚಙÉ??ಲೆ'',
ಕಟ್ಟಿಬಳೆ”, “ಜೋಮಾಲೆ”ಗಳನ್ನು ಕುಟುಂಬದ ಮತ್ತು ಗ್ರಾಮದ ಸರ್ವರೂ ಅತ್ತಿಂದಿತ್ತ ಬಳಸಿಕೊಳ್ಳುತ್ತಿದ್ದರು.) - ಒಂದು ಕಾಲದಲ್ಲಿ ಸುಮಾರು 1,500 ಬುಡಕಟ್ಟು ಒಕ್ಕಗಳು/ಖಾಂದಾನ್‍ಗಳು ಅಸ್ತಿತ್ವದಲ್ಲಿದ್ದವು ಆದರೆ ಹೊರಗಿನ ಕ್ರೂರಿ ಆಡಳಿತಗಾರರು ಮತ್ತು ದುರಳ ಆಕ್ರಮಣಕಾರರ ನಿರಂತರ ಅತ್ಯಾಚಾರ ಮತ್ತು ಮಾರಣ ಹೋಮಕ್ಕೆ ಸಿಲುಕಿ ಅರ್ಧಕ್ಕರ್ಧ ಕುಟುಂಬಗಳು ನಶಿಸಿ ಹೋಗಿ ಇಂದು ಕೇವಲ 842 ಒಕ್ಕಗಳು/ಖಾಂದಾನ್‍ಗಳು ಬಾಕಿ ಉಳಿದಿವೆ. ಕೊಡಗಿನಲ್ಲಿ ಸುಮಾರು 60,000 ಕೊಡವ ಮತದಾರರಿದ್ದು, ಕೇವಲ 1 ಲಕ್ಷಕ್ಕೆ ಒಳಪಟ್ಟು ಜನಸಂಖ್ಯೆ ಕೊಡಗಿನಲ್ಲಿದ್ದರೆ ಕೊಡಗಿನಿಂದ ಹೊರಗೆ ಇಡೀ ಜಗತ್ತಿನಾದ್ಯಂತ ಒಟ್ಟು 75 ಸಾವಿರ ಜನಸಂಖ್ಯೆಯನ್ನು ಮೀರಲಾರರು. ಹೀಗೆ ಕೊಡಗು ಸೇರಿ ವಿಶ್ವದಾದ್ಯಂತ ಕೇವಲ 2 ಲಕ್ಷದೊಳಗೆ ಇರುವ ನಗಣ್ಯ ಜನಸಂಖ್ಯೆಯ ಕೊಡವರನ್ನ Sಖಿ ಪಟ್ಟಿಯಡಿಯಲ್ಲಿ ಸಂರಕ್ಷಿಸುವುದು ಸಂವಿಧಾನಿಕ ಋಣಭಾರವಾಗಿದೆ. ಸಂವಿಧಾನದ 51ಎ (ಎಫ್) ವಿಧಿಯು ವಿಶಾಲ ರಾಜ್ಯ ಮತ್ತು ಬಹುಸಂಖ್ಯಾತರು ಒಟ್ಟಿಗೆ ಸೇರಿ ತಮ್ಮ ಅಧೀನದಲ್ಲಿರುವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂರಕ್ಷಿಸಬೇಕೆಂಬ ನಿಯಮವಿದೆ. ಅಂತೆಯೇ ವಿಶ್ವ ರಾಷ್ಟ್ರ ಸಂಸ್ಥೆಯು ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಈ ಸಂಬಂಧ ಕಾಲ ಕಾಲಕ್ಕೆ ಹೊರಡಿಸಲಾಗುವ ಒಡಂಬಡಿಕೆಗಳು ಮತ್ತು ಅಂತರಾಷ್ಟ್ರೀಯ ಮಾನವ ಅಧಿಕಾರ ನಿಬಂಧನೆಗಳ ಮೂಲಕ ನಿರ್ದೇಶನ ನೀಡುತ್ತಲೇ ಬಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇತ್ತೀಚಿಗೆ ಸುಮಾರು 80 ಲಕ್ಷ ಜನಸಂಖ್ಯೆ ಇರುವ ವಾಲ್ಮೀಕಿ ನಾಯಕರ ಪಂಗಡವಾದ (ಸೈನಾನಿಮಸ್) ತಳವಾರ ಮತ್ತು ಪರಿವಾರ ಸಮುದಾಯವನ್ನು Sಖಿ ಪಟ್ಟಿಗೆ ಸೇರಿಸಿದೆ. ಅತ್ಯಂತ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಕುಲವಾದ ಕೊಡವರನ್ನ Sಖಿ ಪಟ್ಟಿಗೆ ಸೇರಿಸಿದರೆ ಈ ದೇಶ ಮತ್ತು ಸರ್ಕಾರಕ್ಕೂ ಹೊರೆಯಾಗಲಾರದು ಮತ್ತು ಯಾರ ಹಕ್ಕೂ ಕಸಿದುಕೊಳ್ಳಲಾಗದು. ಇದು ವಾಸ್ತವ ಬದಲಾಗಿ ನಮ್ಮ ಸಂವಿಧಾನ ಮತ್ತಷ್ಟು ಸಂಮೃದ್ಧ ಮತ್ತು ಶ್ರೀಮಂತಗೊಳ್ಳಲಿದೆ.
- ಕಾಶ್ಮೀರಿ ಪಂಡಿತರು ಹೇಗೆ ಕಾಶ್ಮೀರದ ಆದಿಮ ಸಂಜಾತರೋ ಅದೇ ರೀತಿ ಕೊಡವರು ಕೊಡಗಿಗೆ ಆದಿಮ ಸಂಜಾತರು ಕೊಡಗಲ್ಲದೆ ಕೊಡಗಿನ ಹೊರಗೆ ಕೊಡವರ ತಾಯಿ ಬೇರಿಲ್ಲ. ಆದರೆ ಕೊಡಗಿನಲ್ಲಿ ಬೇರೆ ಬೇರೆ ಹಂತಗಳಲ್ಲಿ ಬಂದು ನೆಲೆಸಿರುವ ಜನರು ಮತ್ತು ಬುಡಕಟ್ಟುಗಳಿಗೆ ಕೊಡಗಿನ ಹೊರಗೆ ಅವರ ತಾಯಿ ಬೇರುಗಳಿವೆ. ಇದೊಂದು ಮಹತ್ವಪೂರ್ಣ ಅಂಶ. ಆದ್ದರಿಂದ ಕೊಡವರ ಸಾಂಪ್ರದಾಯಿಕ ನೆಲೆಯಾದ ಕೊಡಗಿನಲ್ಲಿ ಅವರ ಸರ್ವಾಂಗೀಣ ವಿಕಾಸ ಮತ್ತು ಏಳಿಗೆಗೆ Sಖಿ ಟ್ಯಾಗ್ ಅಡಿಯಲ್ಲಿ ರಾಜ್ಯಾಂಗ ಖಾತ್ರಿ ದೊರಕಬೇಕು. (ಕೊಡಗಿಗೆ 1633 ರ ಪಾಲೇರಿ ಅರಸರ ಪ್ರವೇಶದ ಸಂದರ್ಭ, 1834 ರ ಬ್ರಿಟಿಷರ ಪ್ರವೇಶದ ಸಂದರ್ಭ, 1947 ರಲ್ಲಿ ಸ್ವಾತಂತ್ರ್ಯ ಲಭ್ಯವಾದ ಸಂದರ್ಭ ಮತ್ತು 1956ರಲ್ಲಿ ಕೊಡಗು ಪ್ರತ್ಯೇಕ “ಸಿ”ರಾಜ್ಯ ವಿಲೀನದ ನಂತರದ ಸಂದರ್ಭ ಹೀಗೆ 4 ಹಂತಗಳಲ್ಲಿ ಹೊರಪ್ರದೇಶದಿಂದ ಬೇರೆ ಬೇರೆ ಜನ ಬಂದು ನೆಲೆಕಂಡುಕೊಂಡು ಬದುಕು ಕಟ್ಟಿಕೊಂಡಿದ್ದಾರೆ.)
- ಬ್ರಿಟಿಷರ ಎಲ್ಲಾ ಅಧಿಕೃತ ದಾಖಲೆಗಳು ಅದರಲ್ಲೂ ಮೆಮೋಯರ್ಸ್‍ಗಳು, ದೇಶಕೋಶ/ಗಝೇಟಿಯರ್ ರಾಜ್ಯ ದಾಖಲೆ, ವಿಶ್ವ ಕೋಶ/ ಹಾಗು 1881 ರಿಂದ 1931ರವರೆಗೆ ನಡೆಸಿದ ಎಲ್ಲಾ ಜನಗಣತಿಗಳಲ್ಲಿ ಕೊಡವರು ಕೊಡಗಿನ ಕೊಡವ ನಾಡಿನ ಆದಿಮಸಂಜಾತ ಬುಡಕಟ್ಟು ಜನಾಂಗವೆಂದೇ ದಾಖಲಿಸಲ್ಪಟ್ಟಿದೆ.
- ಸ್ವತಂತ್ರ ಭಾರತ ಸರ್ಕಾರ ಗುರುತಿಸಿರುವ ಇಂಡಿಯಾದಲ್ಲಿನ 645 ಬುಡಕಟ್ಟು ಪಂಗಡಗಳಲ್ಲಿ ಕೊಡವರು ಸೇರುತ್ತಾರೆ. ಆದರೆ ಇಂದಿಗೂ Sಖಿ ಪಟ್ಟಿಗೆ ಸೇರದೆ ಕೊಡವರು ಶೆಡ್ಯೂಲೇತರ ಬುಡಕಟ್ಟು ಸಮುದಾಯವಾಗಿಯೇ ಮುಂದುವರೆದಿದ್ದಾರೆ
- 1950ರ ಸಂವಿಧಾನ ರಚನೆಯ ಸಂದರ್ಭ ತದನಂತರ ಅದಕ್ಕೆ ಪೂರಕವಾಗಿ 1951 ರ ಜನಗಣತಿಯ ಸಂದರ್ಭ ಪಂಡಿತ್ ಜವಾಹರ ಲಾಲ್ ನೆಹರೂರವರು ಹಾಗು 1956 ರಲ್ಲಿ ಕೊಡಗು
ಸಿ'' ರಾಜ್ಯ ಕರ್ನಾಟಕಕ್ಕೆ ಸೇರ್ಪಡೆಗೊಳ್ಳುವ ಸಂದರ್ಭ ಪರಿಹಾರ ಉಪಶಮನವಾಗಿ ಕೊಡವರಿಗೆ ಎಸ್.ಟಿ ಟ್ಯಾಗ್ ಮಾನ್ಯತೆ ನೀಡಲು ಶ್ರೀ.ನಿಜಲಿಂಗಪ್ಪ ಮುಂದಾಗಿದ್ದರು. ಆದರೆ ಅದಾಗಲೇ ಕೊಡಗಿನ ಉದ್ಧಾರ ಮತ್ತು ಕೊಡವರ ಭವಿಷ್ಯತನ್ನು ರೂಪಿಸುವ ಶಕ್ತಿ ಕೇಂದ್ರವಾಗಿ ಮತ್ತು ಪ್ರಧಾನ ರಾಜಕೀಯ ದಿಗ್ಗಜನಾಗಿ ಹೊರಹೊಮ್ಮಿದ ಸಿ.ಎಂ.ಪೂಣಚ್ಚನವರು ಭಾರತದ ರಾಜ್ಯಾಂಗ ಘಟನಾ ಸಭೆಗೆ ಆಯ್ಕೆಯಾಗಿ ದೆಹಲಿಯಲ್ಲಿ ಕೊಡಗನ್ನು ಪ್ರತಿನಿಧಿಸಿದ್ದರಲ್ಲದೆ ಕೊಡಗಿನ ಪ್ರಪ್ರಥಮ ಮುಖ್ಯ ಮಂತ್ರಿಯಾಗಿ ಅಧಿಕಾರ ಅಲಂಕರಿಸಿದ್ದರು ಆ ಮೂಲಕ ಭಾರತದ ರಾಜಕೀಯ ಪಡಸಾಲೆಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದು ಅವರ ಮಾತಿಗೆ ಮನ್ನಣೆ ಇದ್ದ ಕಾರಣ ಕೊಡವರ ಪಾಲಿಗೆ ವರವಾಗಿ ಬಂದಿದ್ದ ಎಸ್.ಟಿ ಟ್ಯಾಗ್‍ನ್ನು ನಿರಾಕರಿಸಿದ್ದರು. ಜನತಂತ್ರ ವ್ಯವಸ್ಥೆಯಲ್ಲಿ ಅವರ ಮಾತೇ ಅಂತಿಮವಾಯಿತು. ಕೊಡವರ ಪಾಲಿಗೆ ಇದೊಂದು ಘನಘೋರ ಉತ್ಪಾತವಾಯಿತು. ತದನಂತರ ಕೊಡಗಿನವರೇ ಆದ ಕೊಡವೇತರ ರಾಜಕೀಯ ದಿಗ್ಗಜ ಶ್ರೀ ಗುಂಡೂರಾವ್ ರವರು 1970 ರ ದಶಕದಲ್ಲಿ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕದಿಂದಾಗಿ ಆ ಉದ್ದೇಶ ಈಡೇರಲಿಲ್ಲ. ಕೊಡವರ ಭವಿತವ್ಯವನ್ನು ಕೇವಲ 0.5% ಸ್ಥಿತಿವಂತ
ಕುಕ್ಲಕ್ ಕ್ಲಾನ್” ಗಳನ್ನು ನೋಡಿಕೊಂಡು ಅವರ ಮೂಗಿನ ನೇರದಲ್ಲಿ ಅಳೆಯಲಾಗಿದೆ. ಸ್ವತಂತ್ರ ಭಾರತದಲ್ಲಿ ಇಂತಹವರಿಂದ ಪ್ರೇರಿತವಾದ ಕೊಡವ ವಿರೋಧಿ ರಾಜಕೀಯ ನಾಯಕರ ಆಜಾÐವರ್ತಿಗಳಾದ ವಿದ್ವಾಂಸರು ಕೊಡವರನ್ನುಇmiಛಿ ಂಠಿಠಿಡಿoಛಿh ನಲ್ಲಿ ನೋಡದೆ ಇಣiಛಿ ಂಠಿಠಿಡಿoಛಿh ನಲ್ಲಿ ನೋಡುತ್ತಾ ಅನ್ಯಾಯವೆಸಗುತ್ತಾ ಬಂದಿದ್ದಾರೆ. - ಕೊಡವ ನ್ಯಾಷನಲ್ ಕೌನ್ಸಿಲ್ ಕಳೆದ 30 ವರ್ಷಗಳಿಂದ ಶಾಂತಿಯುತವಾಗಿ ಕೊಡವರ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಕೊಡವ ಬುಡಕಟ್ಟು ಕುಲವನ್ನು Sಖಿ ಪಟ್ಟಿಗೆ ಸೇರಿಸಬೇಕೆಂದು ನಿರಂತರವಾಗಿ ಹೋರಾಟ ನಡೆಸುತ್ತಾ ಈ ಸಂಬಂಧ ಹಲವು ವಿಚಾರ ಗೋಷ್ಟಿ, ಸತ್ಯಾಗ್ರಹ, ಮಾನವ ಸರಪಳಿ ಕಾರ್ಯಕ್ರಮವನ್ನು ಕೊಡಗು, ಮೈಸೂರು, ಬೆಂಗಳೂರು ಮತ್ತು ದೆಹಲಿಗಳಲ್ಲಿ ನಡೆಸುತ್ತಾ ಸರ್ಕಾರ ಮತ್ತು ರಾಷ್ಟ್ರದ ಮುಂದೆ ನಮ್ಮ ವೇದನೆ-ಸಂವೇದನೆಗಳನ್ನು ಅನಾವರಣಗೊಳಿಸುತ್ತಾ ಬಂದ ಹಿನ್ನಲೆಯಲ್ಲಿ ಹಿಂದಿನ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಈ ಅಂಶವನ್ನು ಗಣನೆಗೆ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಮತ್ತು ತದನಂತರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಉತ್ಸುಕತೆಯಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಪತ್ರ ನೀಡಿದ ಹಿನ್ನಲೆಯಲ್ಲಿ ಕೊಡವರ ಬುಡಕಟ್ಟು ಅಂಶವನ್ನು ಸಾಕ್ಷೀಕರಿಸುವ ಸಲುವಾಗಿ ಮಾಜಿ ಪ್ರಧಾನಿ ರಾಜಕೀಯ ದಿಗ್ಗಜ ಹಿರಿಯ ಮುತ್ಸದಿ ಶ್ರೀ ಹೆಚ್.ಡಿ.ದೇವೇಗೌಡರ ಅಪರಿಮಿತ ಕಾಳಜಿಯಿಂದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಲೋಕೂರು ಸಮಿತಿಯ ಮಾನದಂಡದ ಪ್ರಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ನೀಡುವಂತೆ 2018 ರಲ್ಲಿ ಆದೇಶ ಮಾಡಿ ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಗೆ ಜವಾಬ್ದಾರಿ ವಹಿಸಿತ್ತು. ಆದರೆ ಪೂರ್ವಾಗ್ರಹ ಪೀಡಿತವಾದ ಸದರಿ ಸಂಸ್ಥೆಯ ಹಾಲಿ ನಿರ್ದೇಶಕರು 2019ರಲ್ಲಿ ಅಧ್ಯಯನ ಆರಂಭಿಸುವಾಗ ಲೋಕೂರು ಸಮಿತಿಯ ವರದಿ ಅನ್ವಯ ಮಾನವ ಶಾಸ್ತ್ರ ದೃಷ್ಟಿಕೋನದಲ್ಲಿ ಪ್ರಶ್ನಾವಳಿ ಶೀರ್ಷಿಕೆಯನ್ನು ರಚಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತನಗಿಷ್ಟ ಬಂದಂತೆ ಸಾಮಾಜಿಕ-ಆರ್ಥಿಕ ಅಧ್ಯಯನ ಪ್ರಶ್ನಾವಳಿ ಮಾದರಿಯನ್ನು ರಚಿಸಿ ಆ ಮೂಲಕ ಅಧ್ಯಯನ ಕಾರ್ಯ ಮುಂದುವರೆದಿದ್ದು ಇದರಿಂದ ನಮಗೆ/ಕೊಡವರಿಗೆ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ನಮಗೆ ಉಳಿದಿಲ್ಲ.
- ಗೌರವಾನ್ವಿತ ಸಂವಿಧಾನ ತಜ್ಞರು ಮತ್ತು ಈ ರಾಷ್ಟ್ರದ, ರಾಜ್ಯದ ವಿಭಿನ್ನ ಜನಾಂಗಗಳ ಸಾಮಾಜಿಕ ಸ್ಥಿತಿಗತಿಗಳ ತೀಕ್ಷ್ಣ ಒಳನೋಟ ಹೊಂದಿರುವ ಅಪಾರ ಪಾಂಡಿತ್ಯದ ಗಣಿಯಾದ ಜಸ್ಟೀಸ್ ಶ್ರೀ ನಾಗಮೋಹನ್ ದಾಸ್‍ರವರ ಮುಂದಾಳತ್ವದ ನಾಗಮೋಹನ್ ದಾಸ್ ಆಯೋಗವು ಕೊಡವರ ಆಶೋತ್ತರ ಮತ್ತು ಆಕ್ರೋಶವನ್ನು ನೈಜ ಮಾನವ ಶಾಸ್ತ್ರ ಮತ್ತು ಕುಲಶಾಸ್ತ್ರ ದೃಷ್ಟಿಕೋನದಲ್ಲಿ ಅವಲೋಕಿಸಿ ಕೊಡವರನ್ನು Sಖಿ ಪಟ್ಟಿಗೆ ಸೇರಿಸುವ ಮೂಲಕ ಆಪತ್ತಿನಲ್ಲಿರುವ-ಅಳಿವಿನಂಚಿನಲ್ಲಿರುವ ಅತ್ಯಂತ ನಗಣ್ಯ ಸಮುದಾಯದ ಕೊಡವರನ್ನು ಸಂವಿಧಾನಿಕವಾಗಿ ಸಂರಕ್ಷಿಸಬೇಕೆಂದು ಅತ್ಯಂತ ಕಳಕಳಿಯಿಂದ ಕೋರಿಕೊಳ್ಳಲಾಗಿದೆ.
- ಅದಾಗಿಯೂ 1946 ರಿಂದ 1950ರವರೆಗೆ ಅಂದರೆ ಸಂವಿಧಾನ ರಚನೆಯಾಗುವವರೆಗೆ ಜನ ಮಾನಸದಲ್ಲಿ ಮತ್ತು ಅಧಿಕಾರ ಕೇಂದ್ರದಲ್ಲಿ ಪ್ರಭಾವಿಗಳಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಸಾಕಷ್ಟು ಪ್ರಯತ್ನ ಪಟ್ಟು ಕೆಲ ಹಿರಿ ತಲೆ ಕೊಡವರಿಗೆ ಮನವರಿಕೆ ಮಾಡಿ ಕೊಡವರು ಎಸ್.ಟಿ ಪಟ್ಟಿಗೆ ಸೇರಿದರೆ ಮಾತ್ರ ಸ್ವತಂತ್ರ ಭಾರತದ ಪ್ರಜಾತಂತ್ರದಡಿಯಲ್ಲಿ ವೇಗವಾಗಿ ಉದ್ಧಾರವಾಗಬಹುದೆಂದು ಮತ್ತು ಆ ಎಸ್.ಟಿ ಟ್ಯಾಗ್‍ನ ಮಹತ್ವವನ್ನು ಅರಿವಿಕೆ ಮಾಡಲು ಹೆಣಗಾಡಿದರು ಅದನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದಾಗ ಸಭೆಯ ಮಧ್ಯೆದಲ್ಲೇ ಖೇದಗೊಂಡು ಖಿನ್ನ ಮನಸ್ಕರಾಗಿ ಕಾರ್ಯಪ್ಪನವರು ನಿರ್ಗಮಿಸಿದರೆಂಬುದು ವಾಸ್ತವ ಸತ್ಯ ಈ ಸತ್ಯಾಂಶ ಬಹಳ ಜನರಿಗೆ ತಿಳಿದಿರುವುದಿಲ್ಲ.
- “ಪ್ರತಿ ಒಕ್ಕ/ಖಾಂದಾನ್‍ಗಳು ಹೊಂದಿರುವ ಟೈಟಲ್‍ಡೀಡ್/ಖಾತೆ/ಹಕ್ಕುಪತ್ರಗಳಿಲ್ಲದ ಪಹಣಿ ರಹಿತ ಮತ್ತು ಯಾವುದೇ ಅಧಿಕೃತ ಹಕ್ಕುಪತ್ರ ದಾಖಲಾತಿಯಿಲ್ಲದ ನಮ್ಮ ಪೂರ್ವಾರ್ಜಿತ ಆಸ್ತಿಗಳನ್ನು ಸರ್ಕಾರಿ ಉಪಯೋಗಕೋಸ್ಕರ ಮನಬಂದಂತೆ ಒಡೆತನ ಕಸಿಯುವ (exಠಿಡಿoಠಿಡಿiಚಿಣe) ಸೂಕ್ತವಲ್ಲದ ಕಾಯಿದೆಗಳ ಮೂಲಕ ವಶಕ್ಕೆ ಪಡೆದುಕೊಳ್ಳಲು ಒಳಸಂಚು ರೂಪಿಸಲಾಗಿದೆ.” ಹಿಂದಿನ 2 ಸಂದರ್ಭಗಳಾದ ಕರ್ನಾಟಕ ಭೂಸುಧಾರಣಾ ಕಾಯಿದೆ 1961 ಮತ್ತು ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ 1964 ನಲ್ಲೂ ಕೊಡವರ ಪೂರ್ವಾರ್ಜಿತ ಭೂಮಿ ಕಸಿದುಕೊಳ್ಳಲು ಸಂಚು ನಡೆಸಲಾಗಿತ್ತು. ಇದೀಗ ಈ ಸರ್ಕಾರ 2020 ಜೂನ್ ತಿಂಗಳಲ್ಲಿ ನೂತನವಾಗಿ ತಂದ ಭೂಸುಧಾರಣಾ ತಿದ್ದುಪಡಿಯಿಂದ ಕೊಡವರ ಭೂಮಿ ಸುರಕ್ಷಿತವಾಗಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಕೃಷಿಯೇತರರು ಯಥೇಚ್ಛ ಭೂಮಿಯನ್ನು ಖರೀದಿ ಮಾಡಬಹುದೆಂಬ ಈ ನಿಯಮದ ದುರ್ಲಾಭ ಪಡೆದು ಕಾಳಸಂತೆ ಕೋರರು, ಅನಿವಾಸಿ ಭಾರತೀಯರು, ಬಹು ರಾಷ್ಟ್ರೀಯ ಕಂಪನಿಗಳು, ಹವಾಲ ದಂಧೆಕೋರರು ಮತ್ತು ದೊಡ್ಡ ದೊಡ್ಡ ಉದ್ಯಮ ಪತಿಗಳು ಆಕರ್ಷಕ ಬೆಲೆ ನೀಡುವ ಮೂಲಕ ಕೊಡವರ ಭೂಮಿಯನ್ನು ಮನಬಂದಂತೆ ಖರೀದಿಸಿ ಕಬ್ಜ ಮಾಡಿ ನಮ್ಮನ್ನು ನಮ್ಮ ನೆಲದಲ್ಲಿಯೇ ಮತ್ತಷ್ಟು ನಿರ್ಗತಿಕರನ್ನಾಗಿ ಮಾಡುವ ಅಪಾಯವಿದೆ. (ಪ್ರತಿಭಟನೆಗಳು ಜೋರಾದಾಗಲೆಲ್ಲ ಒಂದೆರಡು ಮುಖಂಡರಿಗೆ ಪ್ರಸಾದ ನೀಡಿ ಪ್ರತಿರೋಧ ಮುಂದುವರೆಯದಂತೆ ನೋಡಿಕೊಳ್ಳಲಾಗಿದೆ). ಇಂತಹ ದುರವ್ಯವಸ್ಥೆಯಿಂದ ನಮ್ಮ ನಾಡು, ಸಂಸ್ಕøತಿ, ನೆಲ-ಜಲ,ಭೂ- ರಾಜಕೀಯ ಸ್ವಾಯತ್ತತೆಯನ್ನು ಸಂವಿಧಾನಿಕವಾಗಿ ರಕ್ಷಿಸಲು ಕೊಡವ ಬುಡಕಟ್ಟು ಕುಲವನ್ನು Sಖಿ ಪಟ್ಟಿಗೆ ಸೇರಿಸುವ ಮೂಲಕ ಅತೀ ಸಣ್ಣ ಸಮುದಾಯವನ್ನು ರಕ್ಷಿಸುವ ಹೊಣೆಗಾರಿಕೆ ಸಂವಿಧಾನದ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಅಂಗಸಂಸ್ಥೆಗಳ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ.
1956 ರವರೆಗೆ ತಮ್ಮದೇ ಆದ ಸುಖಿ, ಸಮೃದ್ಧ ರಾಜ್ಯವನ್ನು ಹೊಂದಿದ್ದ ಕೊಡವರು ನಾನಾ ಭಾಷೆ ಭರವಸೆ, ಭದ್ರತೆ ಮತ್ತು ಸಬಲೀಕರಣದ ಆಶೆ ಆಮಿಷಗಳನ್ನು ಮತ್ತು ಪ್ರಮಾಣಗಳನ್ನು ಮಾಡಿ ಕೊಡವರ ಜನ್ಮ ಭೂಮಿ ಕೊಡಗು `ಸಿ’ ರಾಜ್ಯ ಕರ್ನಾಟಕದೊಂದಿಗೆ ಸೇರ್ಪಡೆಗೊಳಿಸಲಾಯಿತು. ಇದೀಗ ಆ ವಿಶಾಲ ಕರ್ನಾಟಕ ರಾಜ್ಯದಲ್ಲಿ ಕೊಡವರನ್ನು ಸಂವಿಧಾನಾತ್ಮಕವಾಗಿ ಸಬಲೀಕರಣಗೊಳಿಸುವುದು ಅರ್ಥಾತ್ ನೂರರಲ್ಲಿ ಒಂದು ಸಣ್ಣ ಪಾಲನ್ನು ಕೊಡುವುದು ಕರ್ನಾಟಕ ರಾಜ್ಯಕ್ಕೆ, ಕರ್ನಾಟಕದ ಜನರಿಗೆ ಮತ್ತು ಅಧಿಕಾರ ಶಾಹಿಗೆ ಅದು ಹೊರೆಯಾಗಿ ಕಾಣಬಾರದು. ಕೊಡವರು ನೆಮ್ಮದಿ ಮತ್ತು ಭದ್ರೆತಯ ಜೀವನವನ್ನು ಕರ್ನಾಟಕದಲ್ಲಿ ಅನುಭವಿಸುತ್ತಿದ್ದಾರೆ ಎಂಬ ಭಾವನೆಯನ್ನು ಸೃಷ್ಠಿ ಮಾಡಬೇಕು. ಅದರ ಬದಲು ಕೊಡವರು ಪರದೇಶಿ ನಿರಾಶ್ರಿತರು, ಅನ್ಯರು ನಮ್ಮವರಲ್ಲವೆಂದು ಅವರಿಗೆ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸಾಮಾಜಿಕ ನ್ಯಾಯ ನೀಡುವ ಬದಲು ಈ ಪರಕೀಯ ಕೊಡವರಿಗೆ ತಾರತಮ್ಯ ಮಾಡಿ ಅರಣ್ಯ ನ್ಯಾಯ ನೀಡೋಣವೆಂಬ ಪೂರ್ವಾಗ್ರಹದ ದ್ರೋಹ ಚಿಂತನೆಯನ್ನು ಕೈಬಿಡಬೇಕು. ಕೊಡವರನ್ನು ನಮ್ಮವರೆಂದು Iಟಿಛಿಟusive ಭಾವದಿಂದ ಕಾಣಬೇಕಾಗಿದೆ. ಕೊಡವರಿಗೆ ಅಧಿಕಾರಯುತವಾಗಿ ಸಂವಿಧಾನಾತ್ಮಕವಾದಂತಹ ಬುಡಕಟ್ಟು ಸ್ಥಾನ ಮಾನ ಸಿಗಬೇಕಾಗಿದೆ, ಅದು ದೊರಕುವಂತೆ ಆಡಳಿತಾಂಗ ನೋಡಿಕೊಳ್ಳಬೇಕಾಗಿದೆ. ಕೊಡವರು ತಮ್ಮ ಅಪಾರ ಪರಿಶ್ರಮ ಮತ್ತು ಸ್ವಪ್ರಯತ್ನದಿಂದ ಮೇಲೇರಿದ ನಿದರ್ಶನಗಳನ್ನು ಮುಂದಿಟ್ಟುಕೊಂಡು ಸ್ಟೇಟ್, ವೆಲ್‍ಫೇರ್ ಸ್ಟೇಟ್ ಮತ್ತು ರಿಪಬ್ಲಿಕ್ ಪರಿಕಲ್ಪನೆಗಳ ಸಬಲೀಕರಣ ವ್ಯವಸ್ಥೆಯ ವ್ಯಾಪ್ತಿಯಿಂದ ಅವರನ್ನು ಹೊರಗಿಡಬಾರದು. ಆ ರೀತಿ ಮಾಡುವುದು ಜನದ್ರೋಹ, ರಾಜದ್ರೋಹ ಮತ್ತು ರಾಷ್ಟ್ರದ್ರೋಹಕ್ಕೆ ಸಮ ಏಕೆಂದರೆ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನದ ತಳಪಾಯದಲ್ಲಿ ನಮ್ಮ ಅತ್ಯಂತ ಬೃಹತ್ ಪ್ರಜಾತಂತ್ರ ರಾಷ್ಟ್ರ ಸ್ಥಿರವಾಗಿ ನಿಂತಿದ್ದು ಈ ಸಂವಿಧಾನ ಮತ್ತು ರಾಷ್ಟ್ರ ಕೊಡವರೂ ಸೇರಿದಂತೆ ಸರ್ವ ಜನರನ್ನು ರಕ್ಷಿಸಿ ಪೋಷಿಸಿ ಬೆಳೆಸಲಿರುವ ಆಧಾರ ಸ್ಥಂಭ ಮತ್ತು ದಾರಿದೀಪವಾಗಿದ್ದು ಈ ಸಂವಿಧಾನದ ಎಸ್.ಟಿ. ಪಟ್ಟಿಯಲ್ಲಿ ಕೊಡವರನ್ನು ಸೇರಿಸಿ ಸಬಲೀಕರಣಗೊಳಿಸುವುದು ರಾಷ್ಟ್ರದ ಅಖಂಡತೆ ಮತ್ತು ಏಕತೆಗೆ ಮತ್ತೊಂದು ಗರಿ ನೀಡಿದಂತೆ. ಒಂದು ವೇಳೆ ಕೊಡವರಿಗೆ ಎಸ್.ಟಿ. ಮಾನ್ಯತೆ ನಿರಾಕರಣೆಗೆ ಪಿತೂರಿ ನಡೆದಲ್ಲಿ ಅದು ಸಂವಿಧಾನ ದ್ರೋಹವೂ ಹೌದು ಮತ್ತು ರಾಷ್ಟ್ರ ದ್ರೋಹವೂ ಹೌದು.
ವಿಷಯ ಸೂಚಿ: ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ರವರನ್ನು ಯಾವ ರೀತಿ ಹೊಗಳಿ ಹೊನ್ನಶೂಲಕ್ಕೇರಿಸಿ ದಲಿತರಿಗೆ ಪಂಗನಾಮ ಹಾಕಿದ ಪರಿಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರವರನ್ನು ಹೊಗಳುವ ಮೂಲಕ ಕೊಡವರನ್ನು ವಂಚಿಸುವ ನಯ ವಂಚಕತನದ ಪರಮಾವಧಿಯಾಗಿ ಇಂದಿನ ರಾಜಕೀಯ ಹೇಳಿಕೆಗಳು-ಬೆಳವಣಿಗೆಗಳು ಕಾಣುತ್ತಿವೆ. ಈ ಎಲ್ಲಾ ಹಿನ್ನಲೆಯಲ್ಲಿ ಕೊಡವರನ್ನ ಎಸ್.ಟಿ ಪಟ್ಟಿಗೆ ಸೇರಿಸುವ ಮೂಲಕ ಅವರ ಅಧಿಕೃತ ದಾಖಲೆಗಳಿಲ್ಲದ ಪೂರ್ವಾಜಿತ ಆಸ್ತಿ, ಚಾರಿತ್ರಿಕ ನಿರಂತರತೆಗೆ ಕಾನೂನಾತ್ಮಕ ರಕ್ಷಣೆ, ಭಾಷೆ, ಸಂಸ್ಕøತಿ, ರಾಜಕೀಯ ಸಬಲೀಕರಣ, ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ರಾಜ್ಯಾಂಗ ಖಾತ್ರಿಗೆ ಒಳಪಡಿಸಬೇಕು. ಅದಕ್ಕಾಗಿ ಇದೀಗ ಸಿ.ಎನ್.ಸಿ/ಕೊಡವ ನ್ಯಾಷನಲ್ ಕೌನ್ಸಿಲ್ ಹಕ್ಕೋತ್ತಾಯದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕರ್ನಾಟಕದÀ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ (ಕೆ.ಎಸ್.ಟಿ.ಆರ್.ಐ) ನಡೆಯುತ್ತಿರುವ ಕೊಡವರ ಕುಲಶಾಸ್ತ್ರ ಅಧ್ಯಯನವು ಲೋಕೂರು ಕಮಿಟಿಯ ಮಾನದಂಡಗಳ ಆಧಾರದಲ್ಲಿ ಯಾವುದೇ ಪೂರ್ವಾಗ್ರಹ ಇಲ್ಲದೆ ನಡೆಯಬೇಕು ಇಲ್ಲಾ ಇದರಲ್ಲಿ ಎಡವಿದರೆ ಮರು ಅಧ್ಯಯನ ನಡೆಸಬೇಕು. ಇಲ್ಲ, ನೇರವಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ರೂಪಿಸಲಾದ ಎಲ್ಲಾ ದಾಖಲೆಗಳ ನಿಖರತೆಯ ಆಧಾರದಲ್ಲಿ ಯಾವುದೇ ಅಧ್ಯಯನವಿಲ್ಲದೇ ಕೊಡವರನ್ನುಎಸ್ ಟಿ ಪಟ್ಟಿಗೆ ಸೇರಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ನಾಚಪ್ಪ ಹೇಳಿದ್ದಾರೆ.