ಅತ್ಯಾಚಾರಕ್ಕೆ ಖಂಡನೆ : ಮೂರ್ನಾಡಿನಲ್ಲಿ ಮುಂಬತ್ತಿ ಪ್ರತಿಭಟನೆ

04/10/2020

ಮಡಿಕೇರಿ ಅ.4 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೂರ್ನಾಡಿನಲ್ಲಿ ಸಮಾನ ಮನಸ್ಕರ ವೇದಿಕೆ ಮುಂಬತ್ತಿ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ವೇದಿಕೆಯ ಪ್ರಮುಖರು ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಶಿರ್ ಮಾತನಾಡಿ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆದಾಗ ಜಾತಿ, ಮತ, ಧರ್ಮ, ಪಕ್ಷ ಬೇಧವನ್ನು ಮರೆತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವಿದೆ ಎಂದರು. ಆಡಳಿತ ವ್ಯವಸ್ಥೆಗಳು ಮಹಿಳೆಯರಿಗೆ ರಕ್ಷಣೆ ನೀಡಲು ವಿಫವಾದಾಗ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಆರೋಪಿಸಿದರು.
ಜೆಡಿಎಸ್ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಪ್ರಮುಖರಾದ ಸೈಫ್ ಅಲಿ, ಖಾಲಿದ್ ಹಾಕತ್ತೂರು, ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಹಮೀದ್, ಗ್ರಾ.ಪಂ ಮಾಜಿ ಸದಸ್ಯ ಸಾದಿಕ್, ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬು, ಅನಿಲ್ ಟ್ಯಾಂಗೋ, ಅಬ್ದುಲ್ ರೆಹಮಾನ್ ಕೊಂಡಂಗೇರಿ, ದಿನೇಶ್ ಪೆಗ್ಗುಲಿ, ರಂಜಿತ್, ಆರಿಫ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.