ರಸ್ತೆ ಗುಂಡಿ ಮುಚ್ಚಿದ ಚೇರಂಬಾಣೆ ಆಟೋ ಚಾಲಕರು

04/10/2020

ಮಡಿಕೇರಿ ಅ.4 : ಕೊಳಗದಾಳು, ಬೆಟ್ಟತ್ತೂರು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಚೇರಂಬಾಣೆ ಆಟೋ ಚಾಲಕರ ಸಂಘ ಶ್ರಮದಾನದ ಮೂಲಕ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿತು.
ಈ ಸಂದರ್ಭ ಮಾತನಾಡಿದ ಚಾಲಕರು ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸಂದರ್ಭ ಕೊಳಗದಾಳು, ಬೆಟ್ಟತ್ತೂರು ರಸ್ತೆಗೂ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಶೇಖರ್, ಪ್ರದೀಪ್, ಅಕ್ಬರ್, ಮುಕ್ಕಾಟಿ ಗಿರೀಶ್, ಮಜೀದ್ ಸಿ.ಎಂ.ಮಹೇಶ, ಜೀವನ್ ಸೇರಿದಂತೆ ಎಲ್ಲಾ ಆಟೋ ಚಾಲಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.