ಅ.12 ರಂದು ಭಾರತ, ಚೀನಾ ಮಾತುಕತೆ

05/10/2020

ನವದೆಹಲಿ ಅ.4 : ಪೂರ್ವ ಲಡಾಕ್ ಗಡಿಯಲ್ಲಿ ಮುಂದುವರಿದಿರುವ ಸೇನೆ ನಿಲುಗಡೆ, ಉದ್ವಿಗ್ನ ವಾತಾವರಣವನ್ನು ತಗ್ಗಿಸಲು 7ನೇ ಸುತ್ತಿನ ಭಾರತ-ಚೀನಾ ದೇಶಗಳ ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆ ಇದೇ 12ರಂದು ಏರ್ಪಡಲಿದೆ.
ಎರಡೂ ದೇಶಗಳ ಮಧ್ಯೆ ಮುಂದುವರಿದಿರುವ ಸೇನೆ ನಿಲುಗಡೆ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಪೂರ್ವ ಲಡಾಕ್ ವಲಯದಲ್ಲಿ ಕಮಾಂಡರ್ ಮಟ್ಟದ ಮಾತುಕತೆ ಅ.12ರಂದು ನಡೆಯಲಿದೆ. ಇದುವರೆಗೆ ಎರಡೂ ದೇಶಗಳು ಮಧ್ಯೆ 6 ಸುತ್ತಿನ ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗಾಲ್ವಾನ್ ಕಣಿವೆ ತನಗೆ ಸೇರಿದ್ದು ಎಂಬುದು ಚೀನಾದ ಪ್ರತಿಪಾದನೆಯಾಗಿದೆ. ಆದರೆ ಭಾರತ ಅದನ್ನು ತಿರಸ್ಕರಿಸಿದೆ. ಗಾಲ್ವಾನ್ ಕಣಿವೆಯ ಮೇಲಿನ ಹಕ್ಕು ಈ ಹಿಂದೆ ತನ್ನದೇ ಆದ ಸ್ಥಾನಕ್ಕೆ ಅನುಗುಣವಾಗಿರಲಿಲ್ಲ ಎಂದು ಭಾರತ ಹೇಳುತ್ತದೆ, ಚೀನಾದ ಕಡೆಯಿಂದ ಉಲ್ಲಂಘನೆಯ ಪ್ರಯತ್ನಗಳು ಸತತವಾಗಿ ನಡೆಯುತ್ತಿದೆ ಅದಕ್ಕೆ ಇದುವರೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.