ಸಿಬಿಐ ದಾಳಿ ರಾಜಕೀಯ ಷಡ್ಯಂತ್ರ : ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸ್ಕರ್ ಆರೋಪ

05/10/2020

ಮಡಿಕೇರಿ ಅ. 5 : ಬಿಜೆಪಿ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆದಿರುವ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆದಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಸಿದ್ದಾಪುರ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಆಸ್ಕರ್ ಆರೋಪಿಸಿದ್ದಾರೆ.

ಡಿ.ಕೆ ಸುರೇಶ್ ಮತ್ತು ಸಿದ್ದರಾಮಯ್ಯನವರ ರಾಜಕೀಯ ಪ್ರಗತಿ ನೋಡಿ, ಉಪಚುನಾವಣೆಯಲ್ಲಿ ಸಂಪೂರ್ಣ ಸೋಲಾಗಬಹುದು ಎಂಬ ಭ್ರಮೆಯಿಂದ ದಾಳಿ ನಡೆಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದರು. ಮುಖ್ಯಮಂತ್ರಿಗಳ ಮಗ ಮೊಮ್ಮಗ ಇಬ್ಬರ ಹಣಲೂಟಿಯ ಬಗ್ಗೆ ಹಾಗೂ ಕೊರೊನಾ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಚಾರ ಸೇರಿದಂತೆ ಹಲವು ಹಗರಣಗಳನ್ನು ಬಯಲಿಗೆಳೆದು ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಕ್ಕೆ ಯಡಿಯೂರಪ್ಪ ಮತ್ತು ಶಾ’ ಅವರ ಒಳಸಂಚಿನಿಂದ ಸಿಬಿಐ ದಾಳಿಮಾಡಿದ್ದು, ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ನಾಯಕರುಗಳ ಮೇಲೆ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಸರಿಯಾದ ಕ್ರಮವಲ್ಲ ಎಂದರು.
ಬಿಜೆಪಿಯ ದುರಾಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ತೀವ್ರ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.