ಚಡಾವಿನಲ್ಲಿ ಡಾ.ಅಂಬೇಡ್ಕರ್ ಫ್ಲೆಕ್ಸ್ ಅನಾವರಣ

October 5, 2020

ಮಡಿಕೇರಿ ಅ. 5 : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧರಿತ ಧಾರವಾಹಿ “ಮಹಾನಾಯಕ” ಇದರ ಫ್ಲೆಕ್ಸ್ ಅನಾವರಣ ಕಾರ್ಯಕ್ರಮ ಚೆಡಾವಿನಲ್ಲಿ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಪಾಜೆ ಗ್ರಾ.ಪಂ ವ್ಯಾಪ್ತಿಯ ಚಡಾವು ಘಟಕದ ವತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಫ್ಲೆಕ್ಸ್ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, “ಬಾಬ ಸಾಹೇಬ್ ಅಂಬೇಡ್ಕರ್ ಎಲ್ಲಾ ಸಮೂದಾಯಕ್ಕು ಮಾದರಿ, ಅವರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ. ಅವರ ಆಶಯದಂತೆ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಘಟನೆಯು ಸತತವಾಗಿ ಮೂರು ದಶಕಗಳಿಂದ ಒತ್ತು ನೀಡುತ್ತಿದ್ದು, ಶಿಕ್ಷಣದಿಂದ ಮಾತ್ರ ದಲಿತ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.
ಬಾಬ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧರಿತ ಧಾರವಾಹಿಯನ್ನು ಮನೆಯವರೆಲ್ಲರೂ ಕೂತು ನೋಡಬೇಕು ಆ ಮೂಲಕ ಮಹಾನ್ ಚೇತನರನ್ನು ಅರಿಯುವ, ಅವರ ಆಶಯಗಳನ್ನು ತಿಳಿದುಕೊಳ್ಳುವ ಸದವಕಾಶ ಇದಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ‘ಮಹಾ ನಾಯಕ’ ಧಾರವಾಹಿ ನೋಡುವಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದರು.
ನಂತರ ಸಭಾ ಕಾರ್ಯಕ್ರಮದಲ್ಲಿ ಗ್ರಾಮೀಣ ಮಟ್ಟದಲ್ಲಿ ದಲಿತರನ್ನು ಒಗ್ಗೂಡಿಸುವ ಹಾಗೂ ಸಮಿತಿಯ ಬಲವರ್ಧನೆಗೆ ಶ್ರಮಿಸುವ ಕಾರ್ಯದ ಕುರಿತು ಚರ್ಚಿಸಿದರು.
ಕಾರ್ಯಕ್ರಮದಲ್ಲಿ ದ.ಸಂ.ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್, ಸಂಪಾಜೆ ಹೋಬಳಿ ಚೆಡಾವಿನ ದ.ಸಂ ಸಮಿತಿಯ ಅಧ್ಯಕ್ಷ ಶಶಿಕುಮಾರ್, ಗೌರವ ಅಧ್ಯಕ್ಷ ಚೋಮ, ಕಾರ್ಯದರ್ಶಿ ಹೆಚ್.ಬಿ. ಸಂತೋಷ್‍ಕುಮಾರ್, ಪಿ.ಕೆ. ಇಸ್ಮಾಯಿಲ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

error: Content is protected !!