ಸಿಬಿಐ ದಾಳಿಗೆ ಶಾಹೀದ್ ತೆಕ್ಕಿಲ್ ಖಂಡನೆ

05/10/2020

ಮಡಿಕೇರಿ ಅ.5 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯು ಕೇಂದ್ರ ಮತ್ತು ರಾಜ್ಯ ಸರಕಾರದ ಹತಾಶ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬಲಿಷ್ಠವಾಗುತ್ತಿದ್ದು, ಶಿರಾ ಮತ್ತು ಆರ್.ಆರ್.ನಗರ ಉಪ ಚುಣಾವಣೆಯ ಸೋಲಿನ ಭೀತಿಯಿಂದ ಈ ದಾಳಿ ನಡೆದಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರದ ತುಘಲಕ್ ದರ್ಬಾರ್ ಆಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣ, ರಾಜ್ಯ ಸರಕಾರ ಕೊರೋನ ಸಂದರ್ಭದಲ್ಲಿ ವಿಪಿ ಕಿಟ್, ವೆಂಟಿಲೇಟರ್ ಮುಂತಾದ ಸಾಮಾಗ್ರಿ ಖರೀದಿಯಲ್ಲಿ ಕೋಟ್ಯಾಂತರ ಭ್ರಷ್ಟಾಚಾರ, ಡ್ರಗ್ಸ್ ದಂಧೆ ಮುಂತಾದ ಹಗರಣವನ್ನು ಮುಚ್ಚಿ ಹಾಕಲು ಹಾಗೂ ಜನರ ದಿಕ್ಕು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿದ ಹುನ್ನಾರವೇ ಸಿಬಿಐ ದಾಳಿ ಎಂದು ಆರೋಪಿಸಿರುವ ಶಾಹೀದ್ ಕಾಂಗ್ರೆಸ್ ಪಕ್ಷದ ಬೆಳವಣಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದ್ದಾರೆ.