ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ : ಶಿಕ್ಷಕರು ಸಮಾಜದ ಮಾರ್ಗದರ್ಶಕರಿದ್ದಂತೆ : ಶಾಸಕ ಎಂ.ಪಿ. ಅಪ್ಪಚ್ಚುರಂಜನ್

06/10/2020

ಸೋಮವಾರಪೇಟೆ ಅ. 1 : ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಶಿಕ್ಷಕ ವರ್ಗ ಸಮಾಜದ ಮಾರ್ಗದರ್ಶಕರಿದ್ದಂತೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಮ್ಮ ಕರ್ತವ್ಯದಲ್ಲಿ ಸಾರ್ಥಕತೆ ಪಡೆಯುವ ಅವಕಾಶ ಶಿಕ್ಷಕರಲ್ಲಿ ಹೆಚ್ಚಿದೆ ಎಂದರಲ್ಲದೆ, ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದರೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ಪರಿವರ್ತಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ ವರ್ಗದ ಮೇಲಿದೆ ಎಂದರು.
ಕೊರೊನಾ ವೈರಸ್ ಹಿನ್ನೆಲೆ ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಜಾಗ್ರತೆ ವಹಿಸಬೇಕು. ಮೂಗು-ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಜಪಾನ್‍ನಲ್ಲಿ ಸರ್ಕಾರದ ಸೂಚನೆಗಳನ್ನು ಅಲ್ಲಿನ ನಾಗರಿಕರು ಚಾಚೂ ತಪ್ಪದೇ ಪಾಲಿಸಿದ್ದರಿಂದ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಿದೆ. ಈ ಹಿನ್ನೆಲೆ ಕೊರೊನಾ ಸಂಬಂಧಿತ ಸರ್ಕಾರ ನೀಡುವ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕು ಎಂದರು.
ಸೋಮವಾರಪೇಟೆಯಲ್ಲಿ ಗುರುಭವನ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿದರೆ ಶಾಸಕರ ನಿಧಿಯಡಿ 10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಇದೇ ಸಂದರ್ಭ ಭರವಸೆ ನೀಡಿದರು.
ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಸರೋಜಮ್ಮ, ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ತಂಗಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚೇತನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಂತಿ ಬೋಪಯ್ಯ, ಶಿಕ್ಷಕರ ಸಂಘದ ಮೈಸೂರು ವಲಯ ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಹೆಚ್.ಕೆ. ಕುಮಾರ್, ಸದಾಶಿವ ಪಲ್ಲೇದ್, ಜಿಮ್ಮಿ ಸಿಕ್ವೇರಾ, ನೌಕರರ ಪತ್ತಿನ ಸಂಘದ ಅಧ್ಯಕ್ಷ ಸೋಮಪ್ಪ, ಬಿ.ಸಿ. ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿಕ್ಷಕಿ ನವೀನಾ ಪ್ರಾರ್ಥಿಸಿ, ಕವಿತಾ ಮತ್ತು ತಂಡದವರು ನಾಡಗೀತೆ, ಸೌಭಾಗ್ಯ ಮತ್ತು ತಂಡದವರು ರೈತಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರೊಂದಿಗೆ ವಿವಿಧ ಶಾಲೆಗಳಲ್ಲಿ ಬೋಧಕೇತರ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಸ್.ವಿ. ವಿಶ್ವನಾಥ, ರಾಮಚಂದ್ರಮೂರ್ತಿ, ಎಚ್.ಕೆ. ಸುಂದರ, ಎಚ್.ಎಸ್. ರಾಜಮುಡಿ, ಜೂಲಿಯಾನ ಲೋಬೊ, ಬಿ.ಎಸ್. ಶಾರದ. ವಿ.ಆರ್. ರುಕ್ಮಿಣಿ, ಎ. ಅಲಿಸಮ್ಮ, ಎಚ್.ವಿ. ಜಯಮ್ಮ, ಕೆ.ಎಂ. ಪಾರ್ವತಿ, ಜಯರಾಮ, ಟಿ.ಕೆ. ಮೀನಾಕ್ಷಿ, ಎನ್.ಎನ್. ಶಿವಣ್ಣ, ಕೆ. ಹರಿಣಾಕ್ಷಿ, ಜಾನಕಿ, ಕೆ.ಬಿ. ಪ್ರಕಾಶ್, ಎಚ್.ಎಲ್. ಪದ್ಮಾವತಿ ಅವರುಗಳನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಪಿ.ಸಿ. ಲೀಲಾವತಿ, ಬಿ.ಟಿ. ರತ್ನಾವತಿ, ಎಚ್.ಎಂ. ರುದ್ರೇಶ್, ಎಂ.ಟಿ. ಪರಮೇಶ್ವರಪ್ಪ, ಕೆ.ಆರ್. ಮಾರ್ಗರೇಟ್, ಎಂ. ರಂಗಸ್ವಾಮಿ, ಕೆ.ಎಸ್. ಜಾನಕಮ್ಮ, ಎನ್.ಎಸ್. ಪದ್ಮನಾಭ, ಬಿ.ಜಿ. ರವಿ, ಬೋಧಕೇತರ ಸಿಬ್ಬಂದಿಗಳಾದ ದಾಸ, ಕೆ.ಎಂ. ಪಾರ್ವತಮ್ಮ, ತಿಪ್ಪೇಸ್ವಾಮಿ, ಮರಣ ಹೊಂದಿದ ಶಿಕ್ಷಕರ ಪರವಾಗಿ ನಾಗವೇಣಿ, ಡೀನಾ ರೋಡ್ರೀಗಸ್, ಹೇಮಲತಾ ರವರ ಪೋಷಕರಿಗೆ ಸನ್ಮಾನಿಸಲಾಯಿತು.
ಶಿಕ್ಷಕರ ಸಂಘದ ವಿಶೇಷ ಸನ್ಮಾನಿತರಾದ ಅನುದಾನಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಟಿ. ದಾಮೋದರ, ಎಚ್.ಎಸ್. ಮುದ್ದಪ್ಪ, ಎ.ಆರ್. ಮುತ್ತಣ್ಣ, ಐಸಿಟಿ ರಾಷ್ಟ್ರ ಪ್ರಶಸ್ತಿ ವಿಜೇತ ಕೆ. ವಿಕ್ರಾಂತ್ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಡಿ.ಎಂ. ರೇವತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಬ್ರಾಹಿಂ, ಬಿ.ಟಿ. ವಿಶ್ವನಾಥ, ಎ.ಎಂ. ಆನಂದ, ಕೆ.ಎನ್. ರಮೇಶ್, ಕುಂತಿ ಬೋಪಯ್ಯ, ಎಲ್.ಎಂ. ಪ್ರೇಮ, ಸಾವಿತ್ರಿ ಬಾಪುಲೆ ಪ್ರಶಸ್ತಿ ಪಡೆದ ಜಿ.ಕೆ. ಜಲಜಾಕ್ಷಿ, ಎಚ್.ಕೆ. ಸುಶೀಲ, ಪಿಎಚ್‍ಡಿ ಪದವಿ ಪಡೆದ ಅಂಬವ್ವ ಲಗಟಗೇರಾ, ಸದಾಶಿವ ಎಸ್ ಪಲ್ಲೇದ್, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಲೀಲಾವತಿ, ವರ್ಲಿ ಕಲೆಯಲ್ಲಿ ಶಾಲೆ ಮತ್ತು ಕಚೇರಿಗಳ ಗೋಡೆಗಳನ್ನು ಅಲಂಕರಿಸಿದ ಉ.ರಾ. ನಾಗೇಶ್, ಬಸವರಾಜ ಬಡಿಗೇರ್, ಮಾನೆ ರಾಜು, ಪರಶುರಾಮಣ್ಣ, ಎಂ.ಯು. ಮಮತ ರಶ್ಮಿ ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳಾದ ತೊರೆನೂರಿನ ಸರ್ಕಾರಿ ಪ್ರೌಢಶಾಲೆ, ಬಸವನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಗರಳ್ಳಿ ಶಾಂತಿನಿಕೇತನ ಶಾಲೆ, ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆ, ಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ ಶಾಲೆ, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ, ಸಾಂದೀಪನಿ ಆಂಗ್ಲಮಾದ್ಯಮ ಶಾಲೆ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಎಚ್.ಎಸ್. ಋತ್ವಿಕಾ, ಆಸ್ಟನ್ ಗೋನ್ಸಾಲ್ವಿಸ್, ಸಿಬಿಎಸ್‍ಸಿಯಲ್ಲಿ ಎಚ್.ವೈ. ದಿಶಾ, ಮೋನಿಕಾ ಸಲ್ಡಾನಾ, ಸಿಡಬ್ಲ್ಯೂಎಸ್‍ಎನ್ ನಲ್ಲಿ ಕೆ.ಎಸ್. ಸುಹೈಬ್, ಕೆ.ಆರ್. ಅಮಿತ್, ಎ.ಆರ್. ಹೇಮಂತ್‍ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು. ಪಿಯುಸಿಯ ವಿಜ್ಞಾನ ವಿಭಾಗದ ಡಿ.ಎಂ. ಅನಂತಮೂರ್ತಿ, ಎಸ್.ಎಂ. ಯತೀಶ್, ಕಲಾ ವಿಭಾಗದ ಎನ್.ಎಸ್. ಲಕ್ಷ್ಮೀ, ಟಿ.ಬಿ. ಪ್ರಕೃತಿ ಹಾಗೂ ವಾಣಿಜ್ಯ ವಿಭಾಗದ ಸುಧನ್ವಾ ಕಶ್ಯಪ್ ಹಾಗೂ ಎಂ.ಡಿ. ಸೂರ್ಯಕಿರಣ್ ಅವರುಗಳನ್ನು ಸನ್ಮಾನಿಸಿಲಾಯಿತು.