ರಾಷ್ಟ್ರಪತಿ ಪದಕ ವಿಜೇತ ಡಿವೈಎಸ್‍ಪಿ ಶೈಲೇಂದ್ರ ಗೆ ಸನ್ಮಾನ

06/10/2020

ಸೋಮವಾರಪೇಟೆ ಅ. 6 : ರಾಷ್ಟ್ರಪತಿ ಪದಕ ಪುರಸ್ಕøತ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‍ಪಿ ಹೆಚ್.ಎಂ. ಶೈಲೇಂದ್ರ ಅವರನ್ನು ತಾಲೂಕು ಒಕ್ಕಲಿಗರ ಸಂಘ ಹಾಗೂ ಪ್ರಗತಿಪರ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಒಕ್ಕಲಿಗರ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹಾಗೂ ವೇದಿಕೆಯ ಅಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಗೌರವಿಸಿದರು.
ನಂತರ ಮಾತನಾಡಿದ ಎ.ಆರ್.ಮುತ್ತಣ್ಣ, ಡಿ.ವೈಎಸ್.ಪಿ ಅವರ ಅಪ್ಪಟ ಗ್ರಾಮಿಣ ಪ್ರತಿಭೆಯಾಗಿದ್ದಾರೆ. ಸೋಮವಾರಪೇಟೆ ಸಮೀಪದ ಹರಗ ಗ್ರಾಮದವರಾದ ಶೈಲೇಂದ್ರ ಅವರು, ಸೋಮವಾರಪೇಟೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದಾರೆ. ಈಗ ತಮ್ಮೂರಿನಲ್ಲೇ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದೆ. ಅನೇಕ ಗಂಭೀರ ಪ್ರಕರಣಗಳನ್ನು ಭೇದಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸೇವೆಗೆ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ಜಿ.ಮೇದಪ್ಪ, ಗಣಪತಿ, ಕೆ.ಪಿ.ಚಂದ್ರಕಲಾ ಇದ್ದರು.