ದಸರಾ ಆಚರಣೆ ಸರಳವಾಗಿರಲಿ : ಸಚಿವ ಡಾ.ಸುಧಾಕರ್ ಸಲಹೆ
06/10/2020

ಮಡಿಕೇರಿ ಅ.6 : ಕೋವಿಡ್-19 ಹಿನ್ನೆಲೆ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಬೇಕು, ಆಡಂಬರದ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡಬೇಕು. ಮರಣ ಪ್ರಮಾಣ ಕಡಿಮೆ ಮಾಡಬೇಕು. ಕೋವಿಡ್ ನಿಯಂತ್ರಣ ಸಂಬಂಧ 144 ಸೆಕ್ಷನ್ ಜಾರಿ ಮಾಡುವ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತರಲಾಗುವುದು. ಹೋಂ ಐಸೋಲೇಷನ್‍ನಲ್ಲಿರುವವರನ್ನು ಗಮನಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ನಿಗಾವಹಿಸಬೇಕಿದೆ. ಪಾಸಿಟಿವ್ ಬಂದ ಸಂದರ್ಭದಲ್ಲಿ ಪ್ರತ್ಯೇಕವಾಗಿರಿಸುವಂತಾಗಬೇಕು. ಪಾಸಿಟಿವ್ ಬಂದ 48 ಗಂಟೆಯೊಳಗೆ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲು ಕ್ರಮ, ಐಸಿ ಕಾರ್ಯಕ್ರಮಗಳನ್ನು ಬಲಪಡಿಸಲು ಕ್ರಮ, ಮಾಸ್ಕ್ ಸರಿಯಾಗಿ ಧರಿಸದಿರುವವರಿಗೆ 500 ರೂ. ದಂಡ ಎಂದರು.