ನಾಲ್ವರು ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ

07/10/2020

ಜೈಪುರ್ ಅ.7 : ರಾಜಸ್ಥಾನದಲ್ಲಿ 2019 ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ನಾಲ್ವರಿಗೆ ಮಂಗಳವಾರ ಅಳ್ವಾರ್ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ
ಇದೇ ಪ್ರಕರಣದಲ್ಲಿ ಘಟನೆಯ ವಿಡಿಯೋ ತುಣುಕನ್ನು ಚಿತ್ರೀಕರಿಸಿದ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯಡಿ ಒಬ್ಬ ಅಪರಾಧಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು.
ಕಳೆದ ವರ್ಷ ಏ.26 ರಂದು ತಾನಗಾಜಿ ಅಳ್ವಾರ್ ಬೈಪಾಸ್‍ನ ಖಾಲಿ ನಿವೇಶನದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪತಿಯ ಸಮ್ಮುಖದಲ್ಲೇ ನಾಲ್ವರು ಸೇರಿ ಸಾಮೂಹಿಕ ಅತ್ಯಾಚರ ಮಾಡಿದ್ದರು.
ಹನ್ಸ್‍ರಾಜ್ ಗುರ್ಜರ್, ಅಶೋಕ್ ಗುಜರ್, ಛೋಟೇಲಾಲ್ ಗುರ್ಜರ್ ಮತ್ತು ಇಂದ್ರಜ್ ಗುರ್ಜರ್ ಅವರುಗಳಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.