ಸಿನಿಮಾ ಪ್ರದರ್ಶನಕ್ಕೆ ಮಾರ್ಗಸೂಚಿ

07/10/2020

ನವದೆಹಲಿ ನ.6 : ಕೇಂದ್ರ ಸರ್ಕಾರದ ಆದೇಶದಂತೆ ಅ.15ರಿಂದ ಸಿನಿಮಾ, ಥಿಯೇಟರ್, ಮಲ್ಟಿಪ್ಲೆಕ್ಸ್’ಗಳು ಪುನರಾರಂಭಗೊಳ್ಳಲು ತುದಿಗಾಲಲ್ಲಿ ನಿಂತಿರುವ ನಡುವಲ್ಲೇ ಈ ಕುರಿತ ಮಾರ್ಗಸೂಚಿಯೊಂದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಸಿನಿಮಾಮ ಮಂದಿರಗಳ ಒಟ್ಟು ಆಸನ ವ್ಯವಸ್ಥೆ ಶೇ.50ರಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶವನ್ನು ನೀಡಲಾಗಿದೆ. ಚಿತ್ರಮಂದಿರಗಳಲ್ಲಿ ಸಚಿವಾಲಯ ಸೂಚಿಸಿರುವ ಕೋವಿಡ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸಚಿವ ಪ್ರಕಾಶ್ ಜವಡೇಕರ್ ಅವರು ಎಚ್ಚರಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಸಿನಿಮಾಮ ಆರಂಭ ಮಾಡುವುದಕ್ಕೂ ಮುನ್ನಾ, ವಿರಾಮದ ವೇಳೆ ಹಾಗೂ ಸಿನಿಮಾ ಪೂರ್ಣಗೊಂಡ ನಂತರ ಕನಿಷ್ಟ ಒಂದು ನಿಮಿಷ-ಅದಕ್ಕಿಂತಲೂ ಹೆಚ್ಚು ಅವಧಿಯಿರುವ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದ್ದಾರೆ.