ವಿದ್ಯುತ್ ಸ್ಪರ್ಷದಿಂದ ಗಂಡಾನೆ ಬಲಿ

07/10/2020

ಚಾಮರಾಜನಗರ ಅ.6 : ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕುರುಬರ ಹುಂಡಿಯಲ್ಲಿ ಟೊಮ್ಯಾಟೊ ಬೆಳೆ ರಕ್ಷಣೆಗೆ ಹಾಯಿಸಿದ್ದ ಅಕ್ರಮ ವಿದ್ಯುತ್‍ಗೆ ಗಂಡಾನೆ ಬಲಿಯಾಗಿದೆ.
ಗ್ರಾಮದ ದಾಸನಾಯ್ಕ ಎಂಬುವರ ಜಮೀನಿನಲ್ಲಿ ಅಂದಾಜು 16 ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಜಮೀನು ಮಾಲೀಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸತತ ಮಳೆಗೆ ಆನೆ ಕಂದಕ ಮುಚ್ಚಿ ಹೋಗಿರುವುದರಿಂದ ಆನೆಗಳು ದಾಳಿ ಮಾಡಿವೆ ಎನ್ನಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೇಗೂರು ಪೆÇಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಸೆಸ್ಕ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.