ಕೂದಲಿನ ಬೆಳವಣಿಗೆಗೆ ಈರುಳ್ಳಿ ಸಹಕಾರಿ

ನಮ್ಮ ಸೌಂದರ್ಯದ ವರ್ಧನೆಯ ಸಂಕೇತಗಳಲ್ಲಿ ಕೂದಲು ಕೂಡ ಒಂದು ಭಾಗ. ತಲೆಯ ತುಂಬಾ ಕೂದಲಿದ್ದರೆ ನಮಗೆ ಬೇಕಾದ ವಿನ್ಯಾಸದಂತೆ ಬದಲಾಯಿಸಬಹುದು. ಹಾಗಾಗಿ ತಲೆ ಕೂದಲು ಉದುರದಂತೆ, ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಹತ್ತು ಜನ ಒಳ್ಳೆಯ ಕೂದಲುಳ್ಳವರ ಮಧ್ಯೆ ತಲೆಯಲ್ಲಿ ಕೂದಲುಗಳೆ ಇಲ್ಲದೆ ಒಬ್ಬ ಇದ್ದರೆ ಬಹಳ ಬೇಸರವೆನಿಸುತ್ತದೆ.
ಈರುಳ್ಳಿ ದೇಹದ ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿ ಕೆಲಸ ಮಾಡುತ್ತದೆ. ತನ್ನ ತಂಪಾದ ಗುಣ ಲಕ್ಷಣದಿಂದ ಕೇವಲ ದೇಹದ ಒಳಗೆ ಅಂಗಾಂಶಗಳನ್ನು ತಂಪಾಗಿಡುವುದಲ್ಲದೆ ದೇಹದ ಹೊರಗಿನ ಚರ್ಮ ಮತ್ತು ಕೂದಲಿಗೆ ತನ್ನ ಚಮತ್ಕಾರದಿಂದ ಉತ್ತಮ ಆರೋಗ್ಯವನ್ನು ದಯ ಪಾಲಿಸುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಉತ್ತಮವಾಗಿ ಮತ್ತು ಸೊಂಪಾಗಿ ತಲೆ ಕೂದಲಿನ ಬೆಳವಣಿಗೆಗೆ ಈರುಳ್ಳಿ ಸಹಕಾರಿ.
ತಯಾರು ಮಾಡುವ ವಿಧಾನ : ಮೊದಲು ಈರುಳ್ಳಿಯನ್ನು ಸಿಪ್ಪೆ ತೆಗೆದು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ನ ಹದ ಬರುವವರೆಗೂ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ಮಿಕ್ಸರ್ ಜಾರ್ ನಿಂದ ಹೊರಗೆ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
ಒಂದು ಸ್ಯಾಚುರೇಟೆಡ್ ಕಾಟನ್ ಪ್ಯಾಡ್ ನ ಸಹಾಯದಿಂದ ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ತಲೆಯ ತುಂಬೆಲ್ಲ ಚೆನ್ನಾಗಿ ಹಚ್ಚಿ. ನಿಮ್ಮ ಸಂಪೂರ್ಣ ತಲೆ ಈರುಳ್ಳಿ ರಸದಿಂದ ತುಂಬಿದ ಮೇಲೆ ಒಂದೆರಡು ನಿಮಿಷಗಳ ಕಾಲ ನಿಮ್ಮ ಕೈ ಬೆರಳುಗಳ ಸಹಾಯದಿಂದ ಚೆನ್ನಾಗಿ ಮಸಾಜ್ ಮಾಡಿ.
ನಂತರ ಸುಮಾರು 15 ನಿಮಿಷದಿಂದ ಒಂದು ಗಂಟೆಯ ಕಾಲ ಈರುಳ್ಳಿ ಜ್ಯೂಸ್ ನಿಮ್ಮ ತಲೆಯ ಕೂದಲಿನ ಮೇಲೆ ಹಾಗೆ ಇದ್ದು ಗಾಳಿಯಲ್ಲಿ ಒಣಗಲು ಬಿಡಿ. ಒಂದು ಗಂಟೆಯ ನಂತರ ನಿಮ್ಮ ಕೂದಲನ್ನು ಶಾಂಪೂ ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಿ.
