ಗೌಡಳ್ಳಿಯಲ್ಲಿ ದಿ. ವಿ.ಟಿ.ವೀರಪ್ಪ ಜನ್ಮದಿನಾಚರಣೆ

07/10/2020


ಸೋಮವಾರಪೇಟೆ ಅ. 7 : ಗೌಡಳ್ಳಿ ಪ್ರಾಥಮಿಕ ಶಾಲೆ, ಕೃಷಿ ಪತ್ತಿನ ಸಹಕಾರ ಸಂಘ, ಗೌಡಳ್ಳಿ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷರು ಹಾಗೂ ದಾನಿಗಳಾದ ದಿ.ವಿ.ಟಿ.ವೀರಪ್ಪ ಅವರ 105 ಜನ್ಮದಿನಾಚರಣೆಯನ್ನು ಗೌಡಳ್ಳಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಮೊಮ್ಮಗ ವರ್ಷಿತ್, ವೀರಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ಮರಿಸಿದರು.

ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ವಿವಿಧ ಸಂಸ್ಥೆಗಳ ಪ್ರಮುಖರು ಇದ್ದರು.