ಮಾಸ್ಕ್ ಧರಿಸದಿದ್ದರೆ ದಂಡ ಖಚಿತ : ಕೊಡಗು ಎಸ್ ಪಿ ಕ್ಷಮಾ ಮಿಶ್ರ ಎಚ್ಚರಿಕೆ

October 7, 2020

ಮಡಿಕೇರಿ ಅ. 7 : ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಖಗವಸು ( ಮಾಸ್ಕ್) ಧರಿಸುವುದನ್ನು ಕಡ್ಡಾಯಗೊಳಿಸಿ ಮುಖಗವಸು ಧರಿಸದೇ ಇರುವವರ ವಿರುದ್ಧ ರೂ.500 ದಂಡ ವಿಧಿಸುವಂತೆ ಕರ್ನಾಟಕ ಸರಕಾರ ಆದೇಶಿಸಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಹ ಆದೇಶವನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವುದು ಎಂದು ಎಸ್ ಪಿ ಕ್ಷಮಾ ಮಿಶ್ರ ತಿಳಿಸಿದ್ದಾರೆ.

ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡು, ಕಡ್ಡಾಯವಾಗಿ ಮುಖಗವಸು (ಮಾಸ್ಕ್ ) ಧರಿಸಲು (ಮೂಗು ಮತ್ತು ಬಾಯಿ ಮುಚ್ಚುವ ರೀತಿ) ಸೂಚಿಸಲಾಗಿದೆ. ಮುಖಗವಸು (ಮಾಸ್ಕ್) ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದರೆ ರೂ.500/- ದಂಡ ವಿಧಿಸಲಾಗುವುದು. ಸಾರ್ವಜನಿಕರು ಕೋವಿಡ್-19 ಸಂಬಂಧಿಸಿದ ಸರ್ಕಾರದ ಸೂಚನೆ/ಆದೇಶಗಳನ್ನು ಪಾಲಿಸಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸಹಕರಿಸಲು ಕೋರಿದೆ.

error: Content is protected !!