ತೆರಿಗೆ ಪಾವತಿಸಿ ದಂಡ ವಿಧಿಸುವುದನ್ನು ತಪ್ಪಿಸಿ : ನಗರಾಭಿವೃದ್ಧಿ ಕೋಶ ಮನವಿ

07/10/2020

ಮಡಿಕೇರಿ ಸೆ.7 : ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ತೆರಿಗೆದಾರರಿಗೆ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ದಂಡ ರಹಿತ ತೆರಿಗೆ ಪಾವತಿಸಲು ಅವಕಾಶವಿದೆ ಎಂದು ತಿಳಿಸಿರುವ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜು ಅವರು ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗೆ ಬರಬೇಕಾದ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, ನೀರಿನ ತೆರಿಗೆ, ಮಳಿಗೆಗಳ ಬಾಡಿಗೆ, ವ್ಯಾಪಾರ ಪರವಾನಿಗೆ ಹಾಗೂ ಜಾಹೀರಾತು ಫಲಕದ ಶುಲ್ಕ ವಸೂಲಾತಿಯಲ್ಲಿ ಪ್ರಗತಿ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ತೆರಿಗೆದಾರರು ನಿಗಧಿತ ಸಮಯದೊಳಗೆ ತೆರಿಗೆ ಪಾವತಿಸಬೇಕು.

ನಂತರ ಪಾವತಿಸಿದಲ್ಲಿ ದಂಡ ಅನ್ವಯವಾಗುತ್ತದೆ ಎಂದು ತಿಳಿಸಿರುವ ಅವರು, ತೆರಿಗೆ ಪಾವತಿಸಿ ಅಭಿವೃದ್ಧಿಗೆ ಸಹಕರಿಸುವಂತೆ ತೆರಿಗೆದಾರರಿಗೆ ಮನವಿ ಮಾಡಿದ್ದಾರೆ.