ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷರಾಗಿ ಬಿ.ಎಂ ರಮೇಶ್ ಆಯ್ಕೆ

08/10/2020

ವಿರಾಜಪೇಟೆ: ಅ.08: ವಿರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಓಬಿಸಿ ಮೋರ್ಚಾದ ಅಧ್ಯಕ್ಷರಾಗಿ ಬಿ.ಎಂ ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ. ಕಿರಣ್, ಉಪಾಧ್ಯಕ್ಷರಾಗಿ ಟಿ.ಬಿ. ಉಮೇಶ್ ಆಯ್ಕೆಯಾಗಿದ್ದಾರೆ.
ಆರ್ಜಿ ಗ್ರಾಮ ಪಂಚಾಯಿತಿಯ ಪೆರಂಬಾಡಿ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಆರ್ಜಿ ಪಂಚಾಯಿತಿ ವ್ಯಾಪ್ತಿಯ ಶಕ್ತಿ ಕೇಂದ್ರದ ಅಧ್ಯಕ್ಷ ಪಾಲಚಂಡ ವಿಠಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಉಪಾಧ್ಯಕ್ಷರಾಗಿ ಶ್ರೀಜಾ, ಸಹಕಾರ್ಯದರ್ಶಿಗಳಾಗಿ ಹರಿದಾಸ್ ಮತ್ತು ಶಿವಕುಮಾರ್, ಖಜಾಂಚಿ ಕೆ.ಸಿ.ಶಶಿ, ಸದಸ್ಯರುಗಳಾಗಿ ಸುನಿಲ್, ಶಶಿ, ಕೇಶವ್, ಕಿಶೋರ್, ವಿನೀತ್, ಅಜಿತ್, ಅಕ್ಷೀತ್, ಮಹೇಶ್ ಕುಮಾರ್, ಬಾಲಚಂದ್ರ, ಗಣೇಶ್, ಟಿ.ಜಿ.ಮನು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವೇದಿಕೆ ಮೇಲೆ ತಾಲ್ಲೂಕು ಪಂಚಾಯಿತಿ ಸದಸ್ಯ, ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶೀಗಳಾದ ಬಿ.ಎಂ. ಗಣೇಶ್, ವಿರಾಜಪೇಟೆ ತಾಲ್ಲೂಕು ಒಬಿಸಿ ಮೋರ್ಚಾದ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಚಂದ್ರನ್, ಶಕ್ತಿ ಕೇಂದ್ರದ ಅಧ್ಯಕ್ಷ ಅಚ್ಚಪಂಡ ಹರೀಶ್, ಬಿ. ಬಿ ನಾಗರಾಜ್,ತಾಲ್ಲೂಕು ಸಮಿತಿ ಸದಸ್ಯ ಬಿ.ಜಿ.ಸಾಯಿನಾಥ್ ನಾಯಕ್, ಕೆ. ಕೆ ಅನಿಲ್, ಮನು ರೈ ಮೊದಲಾದವರು ಉಪಸ್ಥಿತರಿದ್ದರು.