ಬೀಡಾಡಿ ದನಗಳ ಹಾವಳಿ : ಸೂಕ್ತ ಕ್ರಮಕ್ಕೆ ಐಗೂರು ಗ್ರಾಮಸ್ಥರ ಒತ್ತಾಯ

08/10/2020

ಸೋಮವಾರಪೇಟೆ ಅ. 9 : ಐಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿ ಗ್ರಾಮಸ್ಥರು ಪಿಡಿಒಗೆ ಮನವಿ ಸಲ್ಲಿಸಿದರು.
ಬೀಡಾಡಿ ದನಗಳು ಕೃಷಿ ಫಸಲನ್ನು ಹಾನಿಪಡಿಸುತ್ತಿವೆ. ರಾತ್ರಿಯಾಗುತ್ತಿದ್ದಂತೆ ಕಾಫಿ ತೋಟ, ಭತ್ತದ ಗದ್ದೆಗಳಿಗೆ ನುಗುತ್ತಿವೆ.. ದನಗಳನ್ನು ಸ್ಥಳದಿಂದ ಓಡಿಸಲು ಪ್ರಯತ್ನಿಸಿದರೆ, ನಮ್ಮ ಮೇಲೆಯೇ ದಾಳಿ ಮಾಡುತ್ತಿವೆ. ಗ್ರಾಮ ಪಂಚಾಯಿತಿಯವರು ಬೀಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಪಿಡಿಒ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಕೃಷಿಕರಾದ ಡಿ.ಎಸ್. ಚಂಗಪ್ಪ, ಡಿ.ಡಿ. ರಮೇಶ, ಕೆ.ಪಿ. ದಿನೇಶ್, ಪೂವಯ್ಯ, ಅಯ್ಯಪ್ಪ, ಡಿ.ಎಸ್. ಅಪ್ಪಯ್ಯ, ಎಂ.ಎಸ್. ತ್ರಿವರ್ಣ, ಎಂ.ಸಿ. ಸಂಜಯ್. ಡಿ.ಎಲ್. ಶಿವಣ್ಣ, ಡಿ.ಡಿ. ಬೆಳ್ಳಿಯಪ್ಪ, ಡಿ.ಕೆ. ಮೊಗಪ್ಪ ಇದ್ದರು.