ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಆನ್‍ಲೈನ್ ಶಿಬಿರ : ಕೊಡಗಿನ ಮೂವರು ಕಲಾವಿದರ ಪ್ರತಿಭಾ ಪ್ರದರ್ಶನ
08/10/2020

ಸೋಮವಾರಪೇಟೆ ಅ. 3 : ಕರ್ನಾಟಕ ಲಲಿತಕಲಾ ಅಕಾಡೆಮಿ ಯುವ ಪ್ರತಿಭೆಗಳಿಗೆ ಹೊಸ ಅವಕಾಶ ಒದಗಿಸುವ ದೃಷ್ಟಿಯಿಂದ ಆನ್‍ಲೈನ್ ಶಿಬಿರವನ್ನು ಆಯೋಜಿಸಿತ್ತು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಯ್ದ 60 ಕಲಾವಿದರು ಕಲಾ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಇದರಲ್ಲಿ ಕೊಡಗಿನ ಮೂವರು ಕಲಾವಿದರಾದ ಸಂದೀಪ್‍ಕುಮಾರ್, ಎ.ಎನ್. ರೂಪೇಶ್ ಮತ್ತು ಟಿ.ಬಿ. ಪ್ರಸನ್ನಕುಮರ್ ಆಯ್ಕೆಗೊಂಡು ಆನ್‍ಲೈನ್ ಮೂಲಕ ಪ್ರತಿಭಾ ಪ್ರದರ್ಶನ ನೀಡಿದ್ದಾರೆ. ಮೂವರು ಮನೆಯಲ್ಲಿಯೇ ಚಿತ್ರ ಬಿಡಿಸಿ ಲಲಿತಕಲಾ ಅಕಾಡೆಮಿಗೆ ನೀಡಿದ್ದಾರೆ. ಅಲ್ಲದೆ, ಚಿತ್ರ ಬರವಣಿಗೆಗೆ ಸಂಬಂಧಿಸಿದ ವಿಡಿಯೋ ಅನ್ನು ಅಕಾಡೆಮಿಗೆ ಕಳುಹಿಸಿದ್ದಾರೆ.
