ಸೋಮವಾರಪೇಟೆಯಲ್ಲಿ 10.560 ಲೀಟರ್ ಮದ್ಯ ನಾಶ

October 8, 2020

ಸೋಮವಾರಪೇಟೆ ಅ. 8 : ಸೋಮವಾರಪೇಟೆ ಕಳ್ಳಭಟ್ಟಿ ತಯಾರಕರಿಂದ ವಶಪಡಿಸಿಕೊಂಡ ಸಾರಾಯಿ ಹಾಗೂ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ.
ತಾಲ್ಲೂಕಿನಲ್ಲಿ ಸುಮಾರು 76 ಪ್ರಕರಣಗಳಲ್ಲಿ ವಶ ಪಡಿಸಿಕೊಂಡ 123.720 ಲೀಟರ್ ಮದ್ಯ ಹಾಗೂ 10.560 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸೋಮವಾರಪೇಟೆ ವಲಯ ಕಛೇರಿ ಆವರಣದಲ್ಲಿ ನಾಶ ಪಡಿಸಲಾಯಿತು. ಈ ಸಂದರ್ಭ ಅಬಕಾರಿ ಇಲಾಖೆಯ ಪ್ರಭಾರ ಉಪ ಅಧೀಕ್ಷಕಿ ಆರ್.ಎಂ.ಚೈತ್ರಾ, ಪಾನೀಯ ನಿಗಮದ ವ್ಯವಸ್ಥಾಪಕ ವಿಠಲ್ ಕದಂ, ಅಬ್ಕಾರಿ ನಿರೀಕ್ಷಕ ಸಂಪತ್ ಕುಮಾರ್, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

error: Content is protected !!