ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ಎಂ. ಲೋಕೇಶ್ ಆಯ್ಕೆ

08/10/2020

ಸೋಮವಾರಪೇಟೆ,ಅ.7: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಅಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.
ದೇವಾಲಯದ ಧರ್ಮದರ್ಶಿ ಮಂಡಳಿಯ ನೂತನ ಅಧ್ಯಕ್ಷರಾಗಿ ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿಯಾಗಿ ಕೆ.ಎಸ್. ಸುಂದರ್, ಉಪಾಧ್ಯಕ್ಷರಾಗಿ ಜಿ.ಡಿ. ಬಸವರಾಜು, ಸಹ ಕಾರ್ಯದರ್ಶಿಯಾಗಿ ಎಸ್.ಆರ್. ಉತ್ತಯ್ಯ, ಖಜಾಂಚಿಯಾಗಿ ಕೆ.ಕೆ. ಮುತ್ತಣ್ಣ ಅವರುಗಳನ್ನು ಆಯ್ಕೆ ಮಾಡಲಾಯಿತು.