ಮೂರ್ನಾಡು ಬಂಟರ ಸಂಘದ ಅಧ್ಯಕ್ಷರಾಗಿ ಬಿ.ಕೆ ಚಂದ್ರಶೇಖರ್ ರೈ, ಮಹಿಳಾ ಅಧ್ಯಕ್ಷರಾಗಿ ಜಯಂತಿ ರೈ ಆಯ್ಕೆ

October 8, 2020

ಮಡಿಕೇರಿ ಅ. 8 : ಬಂಟರ ಸಂಘದ ಮೂರ್ನಾಡು ಘಟಕದ ನೂತನ ಅಧ್ಯಕ್ಷರಾಗಿ ಬಿ.ಕೆ ಚಂದ್ರಶೇಖರ್ ರೈ ಹಾಗೂ ಮಹಿಳಾ ಅಧ್ಯಕ್ಷರಾಗಿ ಜಯಂತಿ ಲವ ರೈ ಆಯ್ಕೆಯಾಗಿದ್ದಾರೆ.
ಮೂರ್ನಾಡು ಸಮುದಾಯ ಭವನದಲ್ಲಿ ನಿರ್ಗಮಿತ ಅಧ್ಯಕ್ಷ ಗಿರೀಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು.
ಕಾರ್ಯದರ್ಶಿಯಾಗಿ ಅಶ್ವತ್ಥ ರೈ, ಮಹಿಳಾ ಕಾರ್ಯದರ್ಶಿಯಾಗಿ ಹೇಮಾವತಿ ರೈ, ಸಹ ಕಾರ್ಯದರ್ಶಿಯಾಗಿ ಸತೀಶ ರೈ, ಖಜಾಂಚಿಯಾಗಿ ರವೀಂದ್ರ ರೈ, ಗೌರವ ಅಧ್ಯಕ್ಷರಾಗಿ ಅಶೋಕ ಶೆಟ್ಟಿ ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ ನಾರಾಯಣ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ್ ರೈ, ಮಹಿಳಾ ಅಧ್ಯಕ್ಷರಾದ ವಾಣಿಶಬರಿಶ ರೈ, ತಾಲ್ಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಿಣಿ ರೈ, ಮಾಜಿ ಅಧ್ಯಕ್ಷರಾದÀ ಬಾಬಾ ಅರುಣ ರೈ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯನ್ನು ಪ್ರತೀಕ್ಷ ಹಾಗೂ ಲತಾಕ್ಷ ಪ್ರಾರ್ಥಿಸಿದರು. ಚಂದ್ರಶೇಖರ ರೈ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಜಯಂತಿ ಲವ ರೈ ಮಂಡಿಸಿದರು. ಅಶ್ವತ್ಥ ರೈ ನಿರೂಪಿಸಿ, ಜಯರಾಂ ರೈ ವಂದಿಸಿದರು.

error: Content is protected !!