ಬೆಂಗಳೂರಿನಲ್ಲಿ ಐಸಿಸ್ ಉಗ್ರರ ಬಂಧನ

09/10/2020

ಬೆಂಗಳೂರು ಅ.9 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದರ್ (40) ಹಾಗೂ ಬೆಂಗಳೂರಿನ ಫ್ರೆಜರ್ ಟೌನ್ ವಾಸಿ ಇರ್ಫಾನ್ ನಾಸಿರ್ (33) ಎನ್ನುವ ಇಬ್ಬರನ್ನು ಎನ್‍ಐಎ ಬಂಧಿಸಿದೆ. ಇದರಲ್ಲಿ ಬೆಂಗಳೂರಿನ ಇರ್ಫಾನ್ ಅಕ್ಕಿ ವ್ಯಾಪಾರ ನಡೆಸಿದ್ದರೆ ಬ್ದುಲ್ ಖಾದರ್ ಚೆನ್ನೈನ ಬ್ಯಾಂಕ್ ಒಂದರಲ್ಲಿ ಉದ್ಯೋಗದಲ್ಲಿದ್ದ.
ಇಬ್ಬರ ಮನೆಗಳಿಂದ ಕೆಲವಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸುವ ಸಂಚಿನ ಹಿನ್ನೆಲೆ ಅವರ ಬಂಧನವಾಗಿದ್ದು ತನಿಖೆಯಿಂದ ಇನ್ನಷ್ಟು ವಿವರ ಹೊರಬರಲಿದೆ” ಅಧಿಕಾರಿಯೊಬ್ಬರು ಹೇಳಿದ್ದಾರೆ.