ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷರಾಗಿ ಸಿ.ಕೆ.ನೀಲಮ್ ಆಯ್ಕೆ

October 9, 2020

ಮಡಿಕೇರಿ ಅ.9 : ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಸಿ.ಕೆ.ನೀಲಮ್ ಆಯ್ಕೆಯಾಗಿದ್ದಾರೆ.
ಶಕ್ತಿ ಕೇಂದ್ರದ ಅಧ್ಯಕ್ಷ ಚೆಪ್ಪುಡಿರ ವಿವೇಕ್ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆ ತಾಲ್ಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲ್ಚಿರ ಕವಿತಾ ಬೋಜಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಪಿ.ಡಿ.ಸುಮಿತ್ರ, ಸಿ.ಡಿ.ರೇವತಿ, ಕಾರ್ಯದರ್ಶಿಯಾಗಿ ಸಿ.ಬಿ.ಅನಿತ, ಸಂಘಟನಾ ಕಾರ್ಯದರ್ಶಿಗಳಾಗಿ ಹೆಚ್.ಎಸ್.ಭವ್ಯ, ಸಿ.ಕೆ.ದರ್ಶಿನಿ, ಹಿರಿಯ ಸಲಹೆಗಾರರಾಗಿ ಕೆ.ಜಿ.ಬೋಜಮ್ಮ, ಸದಸ್ಯರುಗಳಾಗಿ ಕೆ.ಎಸ್.ರತ್ನ, ಕೆ.ಎಂ.ಭವಾನಿ, ಪಿ.ಎಂ.ಪುಷ್ಪಲತಾ ಹಾಗೂ ಕೆ.ಜಿ.ವಿದ್ಯಾ ಆಯ್ಕೆಯಾದರು.
ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನೂರೆರ ರತಿ ಅಚ್ಚಪ್ಪ, ಜಂಟಿ ಕಾರ್ಯದರ್ಶಿ ಶಿಲ್ಪಾಅಪ್ಪಣ್ಣ, ಖಜಾಂಚಿ ಮೂಕಳೆರ ಕಾವ್ಯ ಮಧು, ಸದಸ್ಯರಾದ ಮಲ್ಲೆಂಗಡ ರೀನಾ ಶಮಿ, ಪೊನ್ನಂಪೇಟೆ ಮಹಾಶಕ್ತಿ ಕೇಂದ್ರದ ಪ್ರಮುಖ್ ಅಲೆಮಾಡ ಸುಧೀರ್ ಹಾಗೂ ಕಿರುಗೂರು ಶಕ್ತಿ ಕೇಂದ್ರದ ಸಹ ಪ್ರಮುಖ್ ಕಟ್ಟಿಮಾಡ ರಾಜಪ್ಪ ಉಪಸ್ಥಿತರಿದ್ದರು.

error: Content is protected !!