ಶ್ರೀಪದ್ಮನಾಭಸ್ವಾಮಿ ದೇವಸ್ಥಾನ ಬಂದ್

October 10, 2020

ತಿರುವನಂತಪುರಂ ಅ.10 : ಕೇರಳದ ತಿರುವನಂತಪುರಂನ ಶ್ರೀಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಅ.15 ರವರೆಗೆ ದೇವಸ್ಥಾನ ಬಂದ್ ಮಾಡಲಾಗಿದೆ.
ದೇವಾಲಯದ ಅಧಿಕಾರಿಗಳ ಪ್ರಕಾರ, ದೈನಂದಿನ ಪೂಜೆಯನ್ನು ತಂತ್ರಿಗಳು ನಡೆಸುತ್ತಾರೆ. ಆದರೆ ಅಕ್ಟೋಬರ್ 15 ರವರೆಗೆ ದೇವಾಲಯ ಪ್ರವೇಶಿಸಲು ಭಕ್ತರಿಗೆ ಅನುಮತಿ ಇಲ್ಲ. ಲಾಕ್ ಡೌನ್ ನಂತರ ಆಗಸ್ಟ್ 27ರಿಂದ ದೇವಾಲಯವನ್ನು ಮತ್ತೆ ತೆರೆಯಲಾಗಿದ್ದು, ಒಂದು ಬಾರಿಗೆ 35 ಭಕ್ತರು ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಮತ್ತು ಒಂದು ದಿನದಲ್ಲಿ ಒಟ್ಟು 665 ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು.
ದೇವಾಲಯ ಮತ್ತೆ ತೆರೆದ ನಂತರ ದೇವಸ್ಥಾನದ ಹಲವು ಸಿಬ್ಬಂದಿ ಮತ್ತು ಅರ್ಚಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈಗ ದೇವಸ್ಥಾವನ್ನು ಮತ್ತೆ ಕೆಲವು ದಿನಗಳವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ.