ರುಚಿಕರವಾದ ಪನ್ನೀರ್ ಮ್ಯಾಗಿ ಮಾಡುವ ವಿಧಾನ

October 10, 2020

ಬೇಕಾಗುವ ಸಾಮಗ್ರಿಗಳು : ಮ್ಯಾಗಿ ಪ್ಯಾಕೆಟ್ – 2, ಈರುಳ್ಳಿ – 2, ದುಂಡು ಮೆಣಸಿನ ಕಾಯಿ 1 (ಕತ್ತರಿಸಿದ್ದು), ಟೊಮೆಟೊ – 1, (ಕತ್ತರಿಸಿದ್ದು), ಕ್ಯಾರೆಟ್ 1(ಕತ್ತರಿಸಿದ್ದು), ಸ್ವಲ್ಪ ಪನ್ನೀರ್, ಹಸಿಮೆಣಸಿನಕಾಯಿ 2 (ಕತ್ತರಿಸಿದ್ದು), ಬೆಳ್ಳುಳ್ಳಿ ಎಸಳು 3-4, ಜೀರಿಗೆ ಅರ್ಧ ಚಮಚ, ಪುದೀನಾ ಪುಡಿ 1 ಚಮಚ, ಎಣ್ಣೆ 2 ಚಮಚ, ನೀರು 2 ಕಪ್, ರುಚಿಗೆ ತಕ್ಕ ಉಪ್ಪು.

ತಯಾರಿಸುವ ವಿಧಾನ:

ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ ನಂತರ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಬೇಕು, ನಂತರ ದುಂಡು ಮೆಣಸಿನ ಕಾಯಿ ಹಾಗೂ ಕ್ಯಾರೆಟ್ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು, ಈಗ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಪನ್ನೀರ್ ಹಾಕಿ ಸ್ವಲ್ಪ ಹೊತ್ತು ಹುರಿದು ನಂತರ ಎರಡು ಕಪ್ ನೀರು ಹಾಕಬೇಕು.

ನೀರು ಕುದಿ ಬರುವಾಗ ಅದಕ್ಕೆ ಮ್ಯಾಗಿಯ ಮಸಾಲೆ ಪುಡಿ ಹಾಗೂ ಪುದೀನಾ ಪುಡಿ ಹಾಕಿ ಚಿಟಿಕೆಯಷ್ಟು ಉಪ್ಪು ಹಾಕಿ ನೀರು ಕುದಿ ಬಂದ ಮೇಲೆ ಮ್ಯಾಗಿ ಹಾಕಿ ಬೇಯಿಸಿ ಉರಿಯಿಂದ ತೆಗೆದು ಬಿಸಿ-ಬಿಸಿ ಇರುವಾಗ ತಿಂದರೆ ತುಂಬಾ ರುಚಿಕರವಾಗಿರುತ್ತದೆ.

error: Content is protected !!