ಸೋಮವಾರಪೇಟೆ ಅಬಕಾಸ್ ಅಕಾಡೆಮಿ : ರಾಷ್ಟ್ರಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

October 13, 2020

ಸೋಮವಾರಪೇಟೆ ಅ.13 : ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಕರೆ ನೀಡಿದ್ದಾರೆ.
ಪಟ್ಟಣದ ಅಬಕಾಸ್ ಅಕಾಡೆಮಿ ವತಿಯಿಂದ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಂದಿನ ಪುಟಾಣಿ ಮಕ್ಕಳು ಬಹಳ ಜಾಣಾರಾಗಿದ್ದು, ಯಾವುದೇ ವಿಚಾರವಾದರೂ ತಕ್ಷಣವೇ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಆದ್ದರಿಂದ ಅಂತಹ ಮಕ್ಕಳ ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಿದರೆ ಶೈಕ್ಷಣಿಕ ಅಭ್ಯುದಯ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಅಬಕಾಸ್ ಶಿಕ್ಷಣವು ಮಕ್ಕಳ ಬುದ್ದಿ ಮತ್ತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಕೊರೋನಾ ಸಂಕಷ್ಟ ಕಾಲದಲ್ಲೂ ಶಿಕ್ಷಣವೂ ಅನ್‍ಲೈನ್ ಮುಲಕವೇ ಆಗುತ್ತಿದೆ ಅದರೊಂದಿಗೆ ಇಂತಹ ಸ್ಪರ್ಧೆಗಳೂ ಆನ್‍ಲೈನ್ ಮೂಲಕ ನಡೆಸಿರುವುದು ಶ್ಲಾಘನೀಯವೆಂದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಅಬಕಾಸ್ ಅಕಾಡೆಮಿಯ ಮುಖ್ಯಸ್ಥೆ ಸುಕನ್ಯ ಹೆಗ್ಡೆ ಉಪಸ್ಥತರಿದ್ದರು. ಈ ಸಂಧರ್ಭ ಚೆನೈನ ಅಮತಾ ಟೀಚರ್ಸ್ ಅಸೋಸಿಯೇಶನ್ ರವರು ಗಾಂಧಿಜಯಂತಿ ಅಂಗವಾಗಿ ಅನ್‍ಲೈನ್ ಮೂಲಕ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಮಕ್ಕಳು ಭಾಗವಹಿಸಿದ್ದು ಸೋಮವಾರಪೇಟೆಯ ಅಬಕಾಸ್ ಅಕಾಡೆಮಿಯ 14 ವಿದ್ಯಾರ್ಥಿಗಳು ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯೊಂದಿಗೆ ಸಂಸ್ಥೆಗೆ ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಂಧರ್ಭ ಈ ವಿಜೇತರಿಗೆ ಬಹುಮಾನ ವಿತರಿಸಲಾಯಿತು.