ಬಿಜೆಪಿ ಹಿರಿಯ ಮುಖಂಡ ಪಟ್ಟೆಮನೆ .ಕೆ. ಶೇಷಪ್ಪ ನಿಧನಕ್ಕೆ ಸುಂಟಿಕೊಪ್ಪದಲ್ಲಿ ಸಂತಾಪ

October 15, 2020

ಸುಂಟಿಕೊಪ್ಪ,ಅ.15: ಸೋಮವಾರಪೇಟೆ ತಾಲೂಕು ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷರು ಪಕ್ಷದ ಹಿರಿಯ ಮುಖಂಡರಾದ ಪಟ್ಟೆಮನೆ .ಕೆ.ಶೇಷಪ್ಪ ಅವರ ನಿಧನಕ್ಕೆ ಸುಂಟಿಕೊಪ್ಪ ಹೋಬಳಿ ಬಿಜೆಪಿ ಪಕ್ಷದ ವತಿಯಿಂದ ಸಂತಾಪ ಸಭೆಯನ್ನು ಏರ್ಪಡಿಸಲಾಯಿತು.
ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಬಿಜೆಪಿ ಪಕ್ಷವು ಸ್ಥಾಪಕ ದಿನದಿಂದಲ್ಲೂ ಪಕ್ಷವನ್ನು ಕಟ್ಟಿಬೆಳೆಸುವಲ್ಲಿ ಅವಿರತವಾಗಿ ಶ್ರಮಿಸಿದ್ದ ಶೇಷಪ್ಪ ಅವರು ಪಕ್ಷದ ಕಿರಿಯರಿಗೆ ದಾರಿದೀಪವಗಿದ್ದರು. ಅವರ ಆಕಾಲಿಕ ನಿಧನ ಪಕ್ಷಕ್ಕೆ ತುಂಬಾಲಾರದ ನಷ್ಟವಾಗಿದೆ, ಪಕ್ಷದಲ್ಲಿ ಅಲ್ಲದೆ ಸಹಕಾರ ಕ್ಷೇತ್ರದಲ್ಲೂ ಅವರ ಕೊಡುಗೆ ಅಪಾರವಾಗಿದ್ದು, ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬೆಳವಣಿಗೆಗೆ ಅವರು ಕಾರಣಿಭೂತರಾಗಿದ್ದರು ಅವರು ಆಜಾತ ಶತ್ರುವಾಗಿ ಪಕ್ಷದವರೊಂದಿಗೆ ಅನ್ಯೋನತೆಯಿಂದ ಬೆರೆಯುತ್ತಿದ್ದರು ಎಂದು ಅವರ ಗುಣಗಾನ ಮಾಡಿದರು.
ಶ್ರೀ ರಾಮಮಂದಿರ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಕೊಡಗು ಜಿಲ್ಲಾ ಮಾಜಿ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿ ಶೇಷಪ್ಪ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಬೂತ್ ಪ್ರಮುಖರಾದ ಬಿ.ಕೆ.ಪ್ರಶಾಂತ್(ಕೋಕ) ಕಾರ್ಯದರ್ಶಿ ನಾಗೇಶ್ ಪೂಜಾರಿ, ಕೆ.ಕೆ.ವಾಸು ದೇವ್, ನಗರ ಬಿ.ಜೆ.ಪಿ. ನಿಕಟಪೂರ್ವ ಅಧ್ಯಕ್ಷ ಪಿ.ಆರ್.ಸುನೀಲ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷರಾದ ವಿಘ್ನೇಶ್, ಹಿಂದುಳಿದ ವರ್ಗದ ಅಧ್ಯಕ್ಷರಾದ ಸಿ.ಸಿ. ಸುನೀಲ್, ಮಾಜಿ ಪಂಚಾಯಿತಿ ಅಧ್ಯಕ್ಷೆ ಬಿ.ಐ.ಭವಾನಿ, ಮಾಜಿ ಉಪಾಧ್ಯಕ್ಷ ಬಿ.ಎಸ್. ಸದಾಶಿವ ರೈ, ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ಮೇದಪ್ಪ, ಸುಂಟಿಕೊಪ್ಪ ಬಿಜೆಪಿ ಹಿರಿಯ ಮುಖಂಡರಾದ ಸಗದೇವ್, ಬಿ.ಎಸ್.ಈರಪ್ಪ, ಬಿ.ಕೆ.ವಿಶ್ವನಾಥ ರೈ ಧನುಕಾವೇರಪ್ಪ, ಮಾಗಿಲು ರವಿ, ಸಿ.ಸಿ.ಎಲ್.ಶಶಿ, ಬಿ.ವಿಶ್ವನಾಥ ಪೂಜಾರಿ, ಬೋಪ್ಪಣ್ಣ, ಶರವಣ 7ನೇ ಮೈಲು ಕನ್ನೀಸ್, ಇತರು ಹಾಜರಿದ್ದರು.