ಜೇಸಿ ವಾರ್ಷಿಕ ಸಮ್ಮೇಳನ : ಸೋಮವಾರಪೇಟೆ ಜೇಸಿ ತಂಡಕ್ಕೆ ಏಳು ಪ್ರಶಸ್ತಿ

15/10/2020

ಸೋಮವಾರಪೇಟೆ ಅ. 15 : ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಈಚೆಗೆ ನಡೆದ ಜೇಸಿ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಸೋಮವಾರಪೇಟೆ ಜೇಸಿ ಸಂಸ್ಥೆ ವಿವಿಧ ವಿಭಾಗದಲ್ಲಿ ಏಳು ಪ್ರಶಸ್ತಿಗಳನ್ನು ಪಡೆದಿದೆ.
ಕಾರ್ಯಕ್ರಮ ವಿಭಾಗ, ತರಬೇತಿ ವಿಭಾಗ, ವ್ಯವಹಾರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ವಲಯ 14ರ 38 ಘಟಕಗಳಲ್ಲಿ ಆರ್ಹತೆ ವಿಭಾಗದಲ್ಲಿ 5ನೇ ಸ್ಥಾನ ಪಡೆಯಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್ ತಿಳಿಸಿದ್ದಾರೆ.
ವಲಯ 14ರ ಅಧ್ಯಕ್ಷೆ ಸಮತಾ ಮಿಸ್ಕಿತ್ ಬಹುಮಾನ ವಿತರಿಸಿದರು. ಸಮ್ಮೇಳನದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪುರುಷೋತ್ತಮ್, ವಲಯಾಧಿಕಾರಿ ಮಾಯಗಿರೀಶ್, ಮುಂದಿನ ಸಾಲಿನ ಅಧ್ಯಕ್ಷರುಗಳಾದ ಗುರುಪ್ರಸಾದ್, ಗಿರೀಶ್ ಭಾಗವಹಿಸಿದ್ದರು.