ಸೇನಾ ಕಟ್ಟಡ ನೆಲಸಮಕ್ಕೆ ಆದೇಶ
15/10/2020

ನವದೆಹಲಿ ಅ.15 : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ರಾಜಸ್ತಾನದ ಬಿಕನೇರ್ ಜಿಲ್ಲೆಯ ಕಾನಸರ್ ಸೇನಾ ವಲಯದಲ್ಲಿನ 125 ಕೋಟಿ ರೂ. ವೆಚ್ಚದ ಕಟ್ಟಡವನ್ನು ನೆಲಸಮಗೊಳಿಸಲು ಸರ್ಕಾರ ಆದೇಶ ನೀಡಿದೆ.
ಪ್ರಕರಣದ ತನಿಖೆ ವೇಳೆ ಕಳಪೆ ಕಾಮಗಾರಿ ದೃಢಪಟ್ಟಿದ್ದರಿಂದ ಅದು ಮದ್ದುಗುಂಡುಗಳನ್ನು ಸಂಗ್ರಹಿಸಲು ಮತ್ತು ಉದ್ಯೋಗಕ್ಕೆ ಅಸುರಕ್ಷಿತವೆಂದು ಕಂಡುಬಂದ ನಂತರ ಕಟ್ಟಡವನ್ನು ಧ್ವಂಸಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.
ಅದು ಆರ್ಥಿಕ ರಿಪೇರಿ ಮತ್ತು ಪುನರ್ವಸತಿಗೆ ಸೂಕ್ತವಲ್ಲ ಎಂದು ಕಂಡುಬಂದಿದ್ದರಿಂದ ಈ ಆದೇಶ ನೀಡಲಾಗಿದೆ.
ಇದರಿಂದ ಕಟ್ಟಡಕ್ಕೆ ವೆಚ್ಚ ಮಾಡಿದ 125 ಕೋಟಿ ರೂ. ವ್ಯರ್ಥವಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
