ಸಿನೆಮಾ ಥಿಯೇಟರ್‍ಗಳು ಆರಂಭ

15/10/2020

ಬೆಂಗಳೂರು ಅ.15 : ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಮುಚ್ಚಿದ್ದ ಸಿನೆಮಾ ಥಿಯೇಟರ್ ಗಳು ಕೊನೆಗೂ ಅ.15ಕ್ಕೆ ತೆರೆಯುತ್ತಿವೆ.
ಲಾಕ್ ಡೌನ್ ಮುಗಿದು ಒಂದೊಂದೇ ವ್ಯವಸ್ಥೆಗಳನ್ನು ಸಡಿಲ ಮಾಡುತ್ತಾ ಬಂದಿದ್ದ ಸರ್ಕಾರ ಇಷ್ಟು ದಿನ ಸಿನೆಮಾ ಥಿಯೇಟರ್ ಗಳ ತೆರೆಯುವಿಕೆಗೆ ಅನುಮತಿ ಕೊಟ್ಟಿರಲಿಲ್ಲ.
ಇದೀಗ ಹಸಿರು ನಿಶಾನೆ ತೋರಿಸಿದ್ದು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಶೇಕಡಾ 50ರಷ್ಟು ಮಾತ್ರ ಪ್ರೇಕ್ಷಕರು ಹಾಲ್ ನೊಳಗೆ ಇರಬೇಕು. ಹಾಲ್ ನ ಹೊರಗೆ ಕೆಫೆಟೇರಿಯಾದಲ್ಲಿ ಪ್ಯಾಕಿಂಗ್ ಆಹಾರಗಳನ್ನು ಮಾತ್ರ ಮಾರಾಟ ಮಾಡಬಹುದು, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ವ್ಯವಸ್ಥೆಯಿರಬೇಕು.