ಉಸ್ತುವಾರಿಯಾಗಿ ಸೂರಜ್, ಚಂದ್ರಶೇಖರ್ ಆಯ್ಕೆ

October 15, 2020

ಮಡಿಕೇರಿ ಅ.15 : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನಾದೂರು ಜಿ.ಪಂ ಕ್ಷೇತ್ರದ ಉಸ್ತುವಾರಿಯನ್ನಾಗಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ಚಿಕ್ಕೆನಹಳ್ಳಿ ಜಿ.ಪಂ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್ ಅವರನ್ನು ಕೆಪಿಸಿಸಿ ರಾಜ್ಯ ಸಂಚಾಲಕ ಎ.ಎನ್.ನಟರಾಜ್ ಗೌಡ ನೇಮಕ ಮಾಡಿದ್ದಾರೆ.