ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ.ಮಹಾಭಲೇಶ್ವರ ಭಟ್ ಆಯ್ಕೆ

ಮಡಿಕೇರಿ ಅ.15 : ನೂತನವಾಗಿ ರಚನೆಯಾಗಿರುವ ಮೂರ್ನಾಡಿನ ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ.ಮಹಾಭಲೇಶ್ವರ ಭಟ್ ಹಾಗೂ ಉಪಾಧ್ಯಕ್ಷರಾಗಿ ಕೆ.ಬಿ.ಯಶೋಧ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ವ್ಯವಹಾರಿಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಅಧಿಕಾರಿಗಳಾದ ನರಸಿಂಹಮೂರ್ತಿ ಅವರ ಸಮ್ಮುಖದಲ್ಲಿ ಮೊದಲ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾಗಿ ಎಂ.ಪಿ.ತಿಮ್ಮಯ್ಯ, ಎಂ.ಪಿ.ಶ್ರೀನಿವಾಸ್, ಕಾಂಚನ ಭಟ್, ಹೆಚ್.ವಿ.ಗ್ರೇಸಿ, ಬಿ.ಬಿ.ಜಯಂತಿ, ಬಿ.ಸಿ.ಸ್ವಪ್ನ, ಮೀನಾಕ್ಷಿ ಕೇಶವ, ಆರ್.ಡಿ.ಮಂಜು, ಪಿ.ಪಿ.ಸುಕುಮಾರ್, ಬಿ.ಎ.ಸತೀಶ್, ಹೆಚ್.ಆರ್.ಮುರುಳಿ, ಪಿ.ಬಿ.ರಾಜು ಅವರನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷ ಮಹಾಭಲೇಶ್ವರ ಭಟ್ ಮಾತನಾಡಿ, ಶೀಘ್ರದಲ್ಲೆ ಸಂಘದ ಎಲ್ಲಾ ವ್ಯವಹಾರಗಳು ಆರಂಭಗೊಳ್ಳಲಿದ್ದು, ಮೂರ್ನಾಡಿನ ಸುತ್ತಮುತ್ತಲಿನ ಗ್ರಾಹಕರು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸಹಕಾರಿ ಸಂಘದ ಷೇರುದಾರರು ಸಣ್ಣ ಉಳಿತಾಯ ಹಾಗೂ ಸಾಲ ಸೌಲಭ್ಯವನ್ನು ಪಡೆದುಕೊಂಡು ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

