ಮಡಿಕೇರಿಯಲ್ಲಿ 10 ದಿನ ಅಪರೂಪದ ಜಾನಪದ ಪರಿಕರಗಳ ಪ್ರದರ್ಶನ

October 15, 2020

ಮಡಿಕೇರಿ ಅ.15 : ನಾಡಹಬ್ಬ ದಸರಾ ಪ್ರಯುಕ್ತ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಅ.16 ರ ಶುಕ್ರವಾರದಿಂದ 10 ದಿನಗಳ ಕಾಲ ಸರಳವಾಗಿ ಜಾನಪದ ದಸರಾ ಆಯೋಜಿಸಲಾಗಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಡಿಕೇರಿಯ ಗಾಂಧಿ ಮೈದಾನ ಬಳಿಯ ಕಾಫಿ ಕೃಪಾ ಕಟ್ಟಡದಲ್ಲಿನ ಸ್ಪ್ಯಾರೋ ಕಾಫಿ ಮಳಿಗೆಯಲ್ಲಿ ಅದರ ಮಾಲೀಕರಾದ ಪೊನ್ನಚ್ಚನ ಮಧು ಹಲವಾರು ತಿಂಗಳಿನಿಂದ ಕೊಡಗಿನಾದ್ಯಂತ ಸಂಚರಿಸಿ ಸಂಗ್ರಹಿಸಿದ ಅಪರೂಪದ ಜಾನಪದ ಪರಿಕರಗಳ ಪ್ರದರ್ಶನ ಅ.16 ರಿಂದ ಅ. 27 ರವರೆಗೆ ನಡೆಯಲಿದೆ.
ಈ ಪ್ರದರ್ಶನವನ್ನು ಅ.16 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕೊಡಗು ಪೆÇಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ ಸಾಂಕೇತಿಕವಾಗಿ ಸರಳ ಕಾರ್ಯಕ್ರಮದಲ್ಲಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಅಂಬೆಕಲ್ ನವೀನ್ ಕುಶಾಲಪ್ಪ, ಪೊನ್ನಚ್ಚನ ಮಧು ಪಾಲ್ಗೊಳ್ಳಲಿದ್ದಾರೆ ಎಂದೂ ಅನಿಲ್ ತಿಳಿಸಿದ್ದಾರೆ.
ನಮ್ಮ ಜಾನಪದ ಸಂಸ್ಕøತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಉದ್ಯಮಿಯಾಗಿ ಪೊನ್ನಚ್ಚನ ಮಧು ಕೈಗೊಂಡಿರುವ ಜಾನಪದ ಪರಿಕರಗಳನ್ನು ಮಡಿಕೇರಿಗೆ ಬರುವವರು ಗಮನಿಸಬೇಕೆಂಬ ಆಶಯದೊಂದಿಗೆ ಜಾನಪದ ದಸರಾ ಸಂಭ್ರಮ ಆಯೋಜಿಸಲಾಗಿದೆ. ಪ್ರದರ್ಶನ ವೀಕ್ಷಿಸಲು ಬರುವವರಿಗೆ ಥರ್ಮಲ್ ಸ್ಯ್ಕಾನಿಂಗ್, ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ, ಸಾಮಾಜಿಕ ಅಂತರವನ್ನೂ ಪಾಲಿಸಲಾಗುತ್ತಿದೆ ಎಂದೂ ಅನಿಲ್ ಎಚ್.ಟಿ. ಮಾಹಿತಿ ನೀಡಿದರು.