ಪರಿಸರ ಕಾಳಜಿ ತೋರಿದ ಸಾಮಾಜಿಕ ಕಾರ್ಯಕರ್ತ ಗಣೇಶ್

October 16, 2020

ಮಡಿಕೇರಿ ಅ. 16 : ಗಿಡ ನೆಟ್ಟು ಪರಿಸರ ಉಳಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ಕೊಡಗು ಜಿ.ಪಂ. ಸಮೀಪದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದರು.
ನಂತರ ಮಾತನಾಡಿದ ಅವರು, ಹೊಂಗೆ ಮರದ ಗಾಳಿ ಆರೋಗ್ಯಕ್ಕೆ ಒಳ್ಳೆಯದು. ನೇರಳೆ ಮರದಿಂದ ಪಕ್ಷಿಗಳಿಗಳ ಆಹಾರಕ್ಕೆ ಸಹಾಯವಾಗಲಿದ್ದು, ಪ್ರತಿಯೊಬ್ಬರುವ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು.
ರಸ್ತೆಯ ಸಮೀಪ ಕಾಡು ಕಡಿದು ಹೊಂಗೆ, ನೇರಳೆ ಸೇರಿದಂತೆ 20ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.

error: Content is protected !!