ಪೊಂಗುರಿ ಸಂಚಿಕೆ : ಕೊಡವ ಭಾಷೆ ಲೇಖನಗಳ ಆಹ್ವಾನ

October 16, 2020

ಮಡಿಕೇರಿ ಅ.16 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಪ್ರಕಟಗೊಳ್ಳುತ್ತಿರುವ ತ್ರೈಮಾಸಿಕ ಪೊಂಗುರಿ ಸಂಚಿಕೆಗೆ ಸಾಹಿತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಇದುವರೆಗೆ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕೆ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ನುಡಿ ಫಾಂಟ್‍ನಲ್ಲಿ ಟೈಪ್ ಮಾಡಿ ಅಥವಾ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು ನವೆಂಬರ್, 30 ರೊಳಗೆ ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ ಈ ಕಚೇರಿಗೆ ತುಪಿಸಿದ್ದಲ್ಲಿ ಅರ್ಹವಾದುದ್ದನ್ನು ಮುಂದಿನ ಪೊಂಗುರಿ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ನಮೂದಿಸಬೇಕು ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂ.ಸಂ.08272-229074, ಪೊಂಗುರಿ ಸಂಪಾದಕಿ-ಗೌರಮ್ಮ ಮಾದಮ್ಮಯ್ಯ-8197034748 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

error: Content is protected !!