ಜಾನಪದ ಪರಿಕರಗಳ ಪ್ರದಶ೯ನ : ಪುರಾತನ ವಸ್ತುಗಳ ಬಗ್ಗೆ ಯುವಪೀಳಿಗೆಯಲ್ಲಿ ತಿಳುವಳಿಕೆ ಮೂಡಿಸುವ ಕಾಯ೯ವಾಗಬೇಕು : ನ್ಯಾಯಾಧೀಶೆ ನೂರುನ್ನೀಸ ಸಲಹೆ

16/10/2020

ಮಡಿಕೇರಿ ಅ.16 : ಹಿರಿಯರ ಬಗ್ಗೆ ತೋರುವ ನಿಲ೯ಕ್ಷ್ಯದಂತೆಯೇ ಪುರಾತನ ಕಾಲದ ವಸ್ತುಗಳ ಬಗ್ಗೆಯೂ ಯುವಪೀಳಿಗೆಯಲ್ಲಿ ಉದಾಸಿನ ಮನೋಭಾವ ಕಂಡುಬರುತ್ತಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪರಂಪರಿಕ ವಸ್ತುಗಳ ಮಹತ್ವ ಮತ್ತು ಮೌಲ್ಯವನ್ನು ತಿಳಿಸುವ ಜಾನಪದ ವಸ್ತುಗಳ ಪ್ರದಶ೯ನ ಇಂದಿನ ದಿನಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾದೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯ೯ದಶಿ೯ ನೂರುನ್ನೀಸಾ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ತಾಲೂಕು ಜಾನಪದ ಪರಿಷದ್ ವತಿಯಿಂದ ನಗರದ ರಾಜಾಸೀಟ್ ಬಳಿಯಲ್ಲಿನ ಕಾಫಿ ಕೖಪಾ ಕಟ್ಟದಲ್ಲಿರುವ ಸ್ಯ್ಪಾರೋ ಕಾಫಿ ಮಳಿಗೆಯಲ್ಲಿ ಪೊನ್ನಚ್ಚನ ಮಧು ಸಂಗ್ರಹದ ವೈವಿಧ್ಯಮಯ ಜಾನಪದ ಪರಿಕರಗಳ ಪ್ರದಶ೯ನವಾದ ಜಾನಪದ ದಸರಾ-2020 ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳೇ ಕಾಲದ ವಸ್ತುಗಳಿಗೆ ವೈಜ್ಞಾನಿಕ ತಳಹದಿಯಿದೆ. ಕಾಯಿಲೆ ನಿರೋಧಕ ಶಕ್ತಿಯೂ ಹಿಂದಿನ ಕಾಲದ ವಸ್ತುಗಳಿಗಿದೆ. ಎಷ್ಟೇ ವಿದ್ಯಾವಂತರಾದರೂ ಹಳೇ ಕಾಲದ ಮಹತ್ವವನ್ನು ತಿಳಿಯುವಲ್ಲಿ ಯುವಜನಾಂಗ ವಿಫಲರಾಗುತ್ತಿರುವುದು ದುರಂತ. ಮಕ್ಕಳನ್ನು ಇಂಥ ಜಾನಪದ ಪರಿಕರಗಳ ಪ್ರದಶ೯ನಗಳಿಗೆ ಕರೆದುಕೊಂಡು ಬಂದು ಹಳೇ ಕಾಲದ ವಸ್ತುಗಳಿಗಿರುವ ಮಹತ್ವವನ್ನು ಹಿರಿಯರು ತಿಳಿಸಬೇಕಾದ ಅಗತ್ಯವಿದೆ. ಪಾರಂಪರಿಕ ವಸ್ತುಗಳ ಮೌಲ್ಯವನ್ನು ಯುವಪೀಳಿಗೆಗೆ ತಿಳಿಸಿಹೇಳುವ ಕಾಯ೯ವಾಗಬೇಕೆಂದು ನೂರುನ್ನೀಸ ಸಲಹೆ ನೀಡಿದರು.

ಪುರಾತನ ಪರಿಕರಗಳ ಪರಿಚಯ ಮಾಡಲು ಮುಂದಾಗಿರುವ ಪೊನ್ನಚ್ಚನ ಮಧು ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ನವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ನೂರುನ್ನೀಸ, ತನ್ನ ಸಂಗ್ರಹದಲ್ಲಿರುವ ಕೆಲವು ಪಾರಂಪರಿಕ ವಸ್ತುಗಳನ್ನು ಈ ಸಂಗ್ರಹಾಲಕ್ಕೆ ಕೊಡುಗೆಯಾಗಿ ನೀಡುವುದಾಗಿ ಹೇಳಿದರು.

ಯಾವುದೇ ಕಕ್ಷಿದಾರರು ನ್ಯಾಯಕೇಳಿ ಬಂದಾಗ ಕಕ್ಷಿದಾರನ ಸ್ಥಾನದಲ್ಲಿ ನಾನೇ ನಿಂತು ಯೋಚಿಸಿ ಉತ್ತಮ ತೀಪು೯ ನೀಡುತ್ತಿರುವೆ ಎಂದು 12 ವಷ೯ಗಳ ನ್ಯಾಯಾಧೀಶೆಯ ಅನುಭವ ಹಂಚಿಕೊಂಡ ನೂರುನ್ನೀಸಾ, ಕೊಡಗು . ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳು, ಆದಿವಾಸಿ ಜನಾಂಗಗಳ ಸಮಸ್ಯೆ 3 ವಷ೯ಗಳಲ್ಲಿ ತಿಳಿದಿರುವೆ. ಕೊಡಗಿನ ಅನೇಕ ಅನುಭವ ಮುಂದಿನ ದಿನಗಳಲ್ಲಿ ತನ್ನ ಸೇವೆಗೆ ಪೂರಕವಾಗಬಲ್ಲದು ಎಂದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಅನಾದಿಯಾಗಿರುವ ಜಾನಪದದಲ್ಲಿ ಶ್ರೀಕೖಷ್ಣ, ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್ ಕೂಡ ಜಾನಪದವನ್ನು ಜೀವನದಲ್ಲಿ ಬಳಕೆ ಮಾಡುತ್ತಿದ್ದರು. ಋಷಿಮುನಿಗಳು ಕೂಡ ಜಾನಪದದ ಮಹತ್ವ ಅರಿತು ಅಗಾಧ ಜ್ಞಾನ ಹೊಂದಿದ್ದರು. ವೇದಗಳಲ್ಲಿ ಕೂಡ ಜಾನಪದದ ಉಲ್ಲೇಖವಿದೆ. ಸಕಲ ಜ್ಞಾನಗಳು ಕೂಡ ಕ್ರೋಡೀಕರಣಗೊಂಡು ಜಾನಪದವಾಗಿದೆ ಎಂದರು. ಅವರವರ ಭಾವಕ್ಕೆ ತಕ್ಕಂತೆ ಅವರವರು ಪುರಾತನ ವಸ್ತುಗಳ ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಹಾಗೇ ಹಳೇ ಕಾಲದ ವಸ್ತುಗಳ ಮೌಲ್ಯವನ್ನು ಹಿರಿಯರು ತಿಳಿದುಕೊಂಡಿದ್ದು ಮುಂದಿನ ಪೀಳಿಗೆಗೆ ಅವುಗಳ ಉಪಯೋಗವಾಗಬೇಕೆಂದು ಹೇಳಿದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿ, ಪೊನ್ನಚ್ಚನ ಮಧು ಸ್ವ ಆಸಕ್ತಿಯಿಂದ ಕಳೆದ 3 ವಷ೯ಗಳಲ್ಲಿ ದೇಶದ ವಿವಿದೆಡೆಗಳಿಂದ ಅಪರೂಪದ ಜಾನಪದ ಪರಿಕರಗಳನ್ನು ಸಂಗ್ರಹಿಸಿ ತನ್ನ ಮಳಿಗೆಯಲ್ಲಿ ಇರಿಸಿದ್ದರು. ಈ ಪರಿಕರಗಳನ್ನು ವ್ಯವಸ್ಥಿತವಾಗಿ ಇದೀಗ ಅಕ್ಟೋಬರ್ 26 ರವರೆಗೆ ಸಾವ೯ಜನಿಕರ ಪ್ರದಶ೯ನಕ್ಕೆ ತೆರೆಯಲಾಗಿದೆ. ಮಧು ಮತ್ತು ಪ್ರೀತು ದಂಪತಿ ಆಧುನಿಕ ದಿನಗಳಲ್ಲಿ ಜಾನಪದ ಪರಿಕರಗಳು ಮೂಲೆಗುಂಪಾಗುತ್ತಿರುವುದನ್ನು ಗಮನಿಸಿ ಮುಂದಿನ ಪೀಳಿಗೆಗೆ ಜಾನಪದ ಪರಿಕರಗಳ ಮಹತ್ವ ತಿಳಿಸಲು ಇವುಗಳನ್ನು ಸಂಗ್ರಹಿಸಿರುವುದು ಶ್ಲಾಘನೀಯ ಎಂದರು.ಈ ಸಂಗ್ರಹ ಗಮನಿಸಿದಾಗ ಹಲವರಿಗೆ ತಮ್ಮ ಬಾಲ್ಯದ ದಿನಗಳೂ ನೆನಪಾಗುತ್ತದೆ.ಹಾಗೇ ಕಳೆದು ಹೋದ ದಿನಗಳು ಎಷ್ಟು ಸುಂದರವಾಗಿದ್ದವು ಎಂದು ಅನ್ನಿಸದೇ ಇರಲಾರದು ಎಂದೂ ಅನಿಲ್ ಅಭಿಪ್ರಾಯಪಟ್ಟರು.

ಜಾನಪದ ಪರಿಕರಗಳ ಸಂಗ್ರಹಕಾರ ಪೊನ್ನಚ್ಚನ ಮಧು ಮಾತನಾಡಿ, ತನ್ನ ಅಂಗಡಿಯಲ್ಲಿ ಸಾಕಷ್ಟು ಸ್ಥಳ ಇರುವುದನ್ನು ಗಮನಿಸಿ ಇಲ್ಲಿಯೇ ಜಾನಪದ ಪರಿಕರಗಳನ್ನು ಸಂಗ್ರಹಿಸಿಡಬೇಕೆಂದು ಯೋಜನೆ ರೂಪಿಸಿದೆ. ಕೊಡಗಿನ ಹಲವಾರು ಮನೆಗಳಿಗೆ ತೆರಳಿ ಹಿರಿಯರ ಮನವೊಲಿಸಿ ಮನೆಗಳ ಮೂಲೆಯಲ್ಲಿದ್ದ ಹಳೇ ಕಾಲದ ಪರಿಕರಗಳನ್ನು ಸಾವಿರಾರು ರು. ಮೌಲ್ಯ ನೀಡಿ ಖರೀದಿಸಿ ಇಲ್ಲಿ ಇರಿಸಲಾಗಿದೆ. ಮಳಿಗೆಗೆ ಬಂದ ಅನೇಕ ಪ್ರವಾಸಿಗರು ಇವುಗಳನ್ನು ಖರೀದಿಗೆ ಕೇಳುತ್ತಿದ್ದಾರೆ. ಆದರೆ ಇಂಥ ಅಪರೂಪದ ವಸ್ತುಗಳನ್ನು ಖಂಡಿತಾ ಕೊಡುವ ಮನಸ್ಸಿಲ್ಲ. ನನ್ನ ಸಂಗ್ರಹದ ಪರಿಕರಗಳಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂದರು. ಮಡಿಕೇರಿಯ ಗುಜರಿ ಅಂಗಡಿಯ . ಅರಿಫಾ ಮನಾವರ್ ಎಂಬ ಅಜ್ಜಿಯೋವ೯ಳು ತನಗೆ ಮೊದಲು ಹಳೇ ಕಾಲದ ದೀಪ ನೀಡಿ ಆಶೀವ೯ದಿಸಿದ ಪರಿಣಾಮವೇ ಇಷ್ಟೊಂದು ಸಂಗ್ರಹ ಸಾಧ್ಯವಾಗಿದೆ ಎಂದೂ ಮಧು ಸ್ಮರಿಸಿಕೊಂಡರು. ಮುಂದಿನ ದಿನಗಳಲ್ಲಿ ಕೊಡಗಿನ ಪಾರಂಪರಿಕ ವಸ್ತುಗಳದ್ದೇ ವಿಶೇಷವಾದ ಪ್ರದಶ೯ನ ಮಳಿಗೆ ಪ್ರಾರಂಭಿಸುವ ಉದ್ದೇಶವಿದೆ ಎಂದೂ ಪೊನ್ನಚ್ಚನ ಮಧು ಹೇಳಿದರು,

ಕಾಯ೯ಕ್ರಮದಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಚಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು. ಪರಿಷತ್ ನಿದೇ೯ಶಕಿ ಸವಿತಾ ರಾಕೇಶ್ ಪ್ರಾಥಿ೯ಸಿ, ನಿದೇ೯ಶಕಿ ವೀಣಾಕ್ಷಿ ವಂದಿಸಿದರು.

ಜಾನಪದ ಪ್ರದಶ೯ನದ ಬಗ್ಗೆ ;

ಸ್ಪ್ಯೂರೋ ಕಾಫಿ ಮಳಿಗೆಯಲ್ಲಿಜಾನಪದದ ನೂರಾರು ಪರಿಕರಗಳು ಪ್ರದಶಿ೯ಸಲ್ಪಟ್ಟಿದೆ. ಕೊಡಗಿನ ಐನ್ ಮನೆಗಳಲ್ಲಿದ್ದ ಹಲವು ಸಂಗ್ರಹಗಳು, ಸಾಂಪ್ರದಾಯಿಕ ಆಯುಧಗಳು, 120 ವಷ೯ಗಳ ಮಣ್ಣಿನ ಕಳಸಿಗೆ, ತಮಿಳುನಾಡಿನ ದೇವಾಲಯದ ಪುರಾತನ ಕಾಲದ 84 ಜ್ಯೋತಿಗ ಬೆಳಗಬಹುದಾದ ದೀಪ, ಪೂಜಾಪರಿಕರಗಳು, ಬಿದಿರಿನ ಬುಟ್ಟಿಗಳು, ಆಫ್ರಿಕನ್ ಬೊಂಬೆಗಳು, ಆಫ್ರಿಕದ ಬೖಹತ್ ಮುಖವಾಡ, ಕಂಚಿನ ತಟ್ಟೆಗಳು, ಹುಕ್ಕಾ, ಹಳೇ ಕಾಲದಲ್ಲಿ ಬಳಕೆಯಲ್ಲಿದ್ದ ಕಾಫಿ ಪುಡಿ ಯಂತ್ರ, ಶಾವಿಗೆ ಮಣೆ,ಹತ್ತು ಹಲವಾರು ಬುಡ್ಡಿದೀಪಗಳು, ಏಲಕ್ಕಿ ಕುಯ್ಲು ಬುಟ್ಟಿ, ಹಿಂದಿನ ಕಾಲದಲ್ಲಿ ಮಹಿಳೆಯರು ಬಳಸುತ್ತಿದ್ದ ವಿಶಿಷ್ಟ ಜಂಭದ ಚೀಲ,ಮಣ್ಣಿನ ಪಾತ್ರೆಗಳು ಹೀಗೆ ನೂರಾರು ವಿಧದ ಜನಪದ ಪರಿಕರಗಳು ಇಲ್ಲಿ ಕಂಗೊಳಿಸುತ್ತಿದೆ.

ಜಾನಪದ ದಸರಾ ಪ್ರದಶ೯ನ ಅ.26 ರವರೆಗೆ ಸಾವ೯ಜನಿಕರ ಪ್ರದಶ೯ನಕ್ಕೆ ಲಭ್ಯವಿದ್ದು ಪ್ರದಶ೯ನಕ್ಕೆ ತೆರಳುವವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಮಳಿಗೆಯಲ್ಲಿ ಪಾಲಿಸುವುದು ಅಗತ್ಯ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.