ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಸಿದ್ದತಾ ಸಭೆ

October 16, 2020

ಮಡಿಕೇರಿ ಅ. 16 : ಮುಂಬರುವ ಗ್ರಾ.ಪಂ ಚುಣಾವಣೆಗೆ ಸಂಬಂಧಿಸಿದಂತೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಸಿದ್ದತಾ ಸಭೆ ನಡೆಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಗ್ರಾ.ಪಂ. ಚುನಾವಣೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆಗೆ ಮುನ್ನುಡಿ ಬರೆಯಲು ಕರೆ ನೀಡಿದರು.
2018ರ ವಿಧಾನ ಸಭಾ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ಇದ್ದು ಇದರ ಸದುಪಯೋಗ ಪಡೆಯಲು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಗ್ರಾ.ಪಂ ಚುಣಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳಿಸುವ ನಿಟ್ಟಿನಲ್ಲಿ ಎಲ್ಲಾ ನಾಯಕರುಗಳು ಪ್ರತಿ ವಲಯಗಳಲ್ಲಿ ಕಾರ್ಯಕರ್ತರಿಗೆ ಜೊತೆಗೂಡಿ ಸಹಕಾರ ನೀಡಲಿದ್ದಾರೆ ಎಂದರು.
ಪ್ರತಿ ಜಿ.ಪಂ ಕ್ಷೇತ್ರದಲ್ಲಿ ಚುನಾವಣಾ ಸಮಿತಿ ರಚಿಸಿ ಅಖಾಡಕ್ಕೆ ಇಳಿಯುವುದಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪ್ರು ರವೀಂದ್ರ, ಬೂತ್ ಮಟ್ಟದ ಸಮಿತಿ ರಚನೆಯಲ್ಲಿ ಸ್ಥಳೀಯ ಮುಖಂಡರನ್ನು ಸಮನ್ವಯದೊಂದಿಗೆ ಸಿದ್ದಪಡಿಸಲು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡರು ಪಕ್ಷದ ಚುನಾವಣಾ ಕಾರ್ಯಸೂಚಿಯ ಬಗ್ಗೆ ಮಾಹಿತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ಹಿರಿಯ ಮುಖಂಡರುಗಳಾದ ಮನುಮೇದಪ್ಪ, ಸುಜು ತಿಮ್ಮಯ್ಯ, ಡಾ. ಜಯಂತಿ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಡಿಸಿಸಿ ಸದಸ್ಯ ಪುಷ್ಪ ಪೂಣಚ್ಚ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ದಾದು ಬೋಪಯ್ಯ, ಮಂದ್ರಿರ ಮೋಹನ್ ದಾಸ್, ಜಾನ್ಸನ್ ಪಿಂಟೋ, ಕೆದಕಲ್ ವೆಂಕಪ್ಪ, ಕೊಟ್ಟಕೇರಿಯನ ಪ್ರದೀಪ್, ಮಹಿಳಾ ಬ್ಲಾಕ್ ಅಧ್ಯಕ್ಷೆ ಮೀನಾಕ್ಷಿ ಕೇಶವ, ಪ್ರಮುಖರಾದ ತೀರ್ಥ ಕುಮಾರ್, ಹೊಸ್ಕೇರಿ ಜಯಣ್ಣ, ನಾಸೀರ್ ಸೀದಿ ಯವರು ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಜಿ.ಪಂ. ಸದಸ್ಯೆ ಸುನೀತಾ ಮಂಜುನಾಥ್, ಮಾಜಿ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸೇವಾದಳ ಜಿಲ್ಲಾಧ್ಯರಾದ ಪ್ರೇಮಾ ಕೃಷ್ಣಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಡಿಸಿಸಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಸುನೀಲ್ ಪತ್ರಾವೋ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುರೈ, ಪ್ರಮುಖರಾದ ಕುಂಬುಗೌಡನ ಪ್ರಸನ್ನ, ವಿ.ಜಿ ಮೋಹನ್, ಸ್ವರ್ಣಲತಾ, ಎ.ಎಸ್ ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಎಸ್.ಸಿ ಘಟಕ ನಗರಾಧ್ಯಕ್ಷ ಮುದ್ದುರಾಜ್, ನಗರ ಮಹಿಳಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಸಾಮಾಜಿಕ ಜಾಲತಾಣದ ಉಸ್ತುವಾರಿ ರಾಹುಲ್ ಮಾರ್ಷಲ್, ಟಿ.ಎ. ಕುಶಾಲಪ್ಪ, ಹೆಚ್.ಎನ್. ಜಯಣ್ಣ, ಜುಬೇರ್, ಎಂ.ಎಸ್ ನಯೀಮ್, ಅಬ್ದುಲ್ ಖಾದರ್, ರಘುಭೈರ, ವರ್ಗೀಸ್, ಧನಂಜಯ, ಸಮೀರ್, ಮಣಿಕಂಠ, ಬೋಜ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಭಾಗವಹಿಸಿದ್ದರು.