ಕೊಡಗಿನಲ್ಲಿ ಕೋವಿಡ್ : ಮೃತರ ಸಂಖ್ಯೆ 60 ಕ್ಕೆ ಏರಿಕೆ

October 16, 2020

ಮಡಿಕೇರಿ ಅ.16 : ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ 60 ಕ್ಕೆ ಏರಿಕೆಯಾಗಿದೆ.

ಪ್ರಯೋಗಾಲಯ ಪರೀಕ್ಷಾ ವರದಿ ವಿವರ:
ಇಲ್ಲಿಯವರೆಗೆ ಒಟ್ಟು 60886 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. • ಪಾಸಿಟಿವ್ ಪ್ರಕರಣಗಳು-4232• ನೆಗೆಟಿವ್ ವರದಿ ಬಂದ ಪ್ರಕರಣಗಳು-55861• ವರದಿ ನಿರೀಕ್ಷಿತ ಪ್ರಕರಣಗಳು-793.

ಮೃತಪಟ್ಟ ಪ್ರಕರಣಗಳು-60


ದಾಖಲಿರುವ ಪ್ರಕರಣಗಳು:
 ಕೋವಿಡ್ ಆಸ್ಪತ್ರೆ :112ಕೋವಿಡ್ ಕೇರ್ ಸೆಂಟರ್ :40ಹೋಂ ಐಸೋಲೇಶನ್ :474
ಇತರೆ ವಿಷಯಗಳು: 
ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸದಾಗಿ  137 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಈ ದಿನ  22 ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ.  ಈ ಹಿಂದೆ ತೆರೆಯಲಾಗಿದ್ದ ನಿಯಂತ್ರಿತ ಪ್ರದೇಶಗಳ ಪೈಕಿ  84 ಪ್ರದೇಶವನ್ನು  ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. 
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಈ ದಿನ ಮತ್ತೊಂದು ಸಾವು ವರದಿಯಾಗಿದೆ.   ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಗ್ರಾಮದ ವಾಸಿಯಾದ 73 ವಾರ್ಷದ ಪುರುಷರೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.  ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 60 ಕ್ಕೇರಿದೆ. 
ಈ ದಿನ 87 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತವೆ. 
ಘೋಷ್ವಾರೆ
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:4232ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳ ಸಂಖ್ಯೆ:3546ಮೃತರ ಸಂಖ್ಯೆ: 60ಸಕ್ರಿಯ ಪ್ರಕರಣಗಳ ಸಂಖ್ಯೆ: 626ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ: 536