ನವೆಂಬರ್‌ನಲ್ಲಿ ಕಾಲೇಜುಗಳು ಆರಂಭ !

17/10/2020

ಬೆಂಗಳೂರು ಅ.17 : ಪಿಜಿ, ಡಿಗ್ರಿ, ಪಿಯುಸಿ ಕಾಲೇಜುಗಳನ್ನು ನವೆಂಬರ್ 2-3ನೇ ವಾರದಲ್ಲಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರದ ಮಾರ್ಗಸೂಚಿ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯಿಸಿ ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ ಕಾಲೇಜು ಪ್ರಾರಂಭದ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಸುಳಿವು ನೀಡಿದ್ದಾರೆ.
ಶೀಘ್ರವೇ ಸಿಎಂ ಯಡಿಯೂರಪ್ಪ ಜೊತೆ ಸಭೆ ಮಾಡಿ ಕಾಲೇಜು ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳೋದಾಗಿ ಉನ್ನತ ಮೂಲಗಳು ತಿಳಿಸಿವೆ. ಸಿಎಂ ಓಕೆ ಅಂದ್ರೆ ಪ್ರಾರಂಭಿಕ ಹಂತವಾಗಿ ಕಾಲೇಜುಗಳನ್ನ ಪ್ರಾರಂಭಿಸಿ, ನಂತರ ಪರಿಸ್ಥಿತಿ ಅವಲೋಕನ ಮಾಡಿಕೊಂಡು ಹೈಸ್ಕೂಲ್ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಕಾಲೇಜು ಪ್ರಾರಂಭಿಸಬೇಕು ಎನ್ನುವ ಸರ್ಕಾರದ ನಿರ್ಧಾರಕ್ಕೆ ಕೆಲ ತಜ್ಞರು ಸುತರಾಂ ಒಪ್ಪುತ್ತಿಲ್ಲ. ಈ ವರ್ಷ ಕಾಲೇಜು ಓಪನ್ ಮಾಡುವುದು ಬೇಡವೇ ಬೇಡ ಎಂದು ತಜ್ಞರು ಹೇಳಿದ್ರೆ, ಇನ್ನೂ ಕೆಲ ತಜ್ಞರು ಕಾಲೇಜು ಆರಂಭಿಸಿ ಪರವಾಗಿಲ್ಲ. ಆದ್ರೆ ಸರ್ಕಾರ ಕಠಿಣವಾಗಿ ಎಚ್ಚರಿಕೆಯಿಂದ ಮುಂಜಾಗೃತಾ ಕ್ರಮ ವಹಿಸಬೇಕು ಎಂದಿದ್ದಾರೆ.