ಬಿತ್ತನೆ ಕಾಫಿ ಬೀಜಕ್ಕೆ ಅರ್ಜಿ ಆಹ್ವಾನ

October 17, 2020

ಮಡಿಕೇರಿ ಅ.17 : ಪ್ರಸಕ್ತ ವರ್ಷ (2020-21) ನೇ ಸಾಲಿನ “ಬಿತ್ತನೆ ಕಾಫಿ ಬೀಜ”ಕ್ಕೆ (Seed Coffee) ಆಸಕ್ತ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು ಮಂಡಳಿಯ ಕಛೇರಿಯಲ್ಲಿ ದೊರೆಯುವ ಅರ್ಜಿಯನ್ನು ಭರ್ತಿ ಮಾಡಿ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ರೂ.500 ನ್ನು ಮುಂಗಡವಾಗಿ ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವವರು ರೂ.500 ರಿಂದ ರೂ.2000 ದವರೆಗೆ ನಗದು ಅಥವಾ ಡಿಡಿ ಮುಖಾಂತರ ನೀಡಬಹುದು, ರೂ.2000 ಕ್ಕಿಂತ ಹೆಚ್ಚಿನ ಹಣವನ್ನು ಡಿಡಿ ಮುಖಾಂತರವೇ ನೀಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ನವೆಂಬರ್ ಆಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಛೇರಿಗಳನ್ನು ಸಂಪರ್ಕಿಸುವಂತೆ ವಿರಾಜಪೇಟೆ ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.