ಮುಖದ ಸೌಂದರ್ಯ ಹೆಚ್ಚಿಸಲು ಆಲೂ ಅರಿಶಿಣ ಪೇಸ್ ಮಾಸ್ಕ್

17/10/2020

ಕಳೆಗುಂದಿದ ಮತ್ತು ಕಪ್ಪು ವರ್ಣಕ್ಕೆ ತಿರುಗಿದ ಚರ್ಮದ ಕಾಂತಿ ಹೆಚ್ಚಿ ಸಲು ಆಲೂಗಡ್ಡೆ ಒಂದು ಅತ್ಯತ್ತಮ ಮನೆ ಔಷಧಿಯಾಗಬಲ್ಲದು. ಇದನ್ನು ಬಳಸುವುದರಿಂದಾಗಿ ಚರ್ಮದ ಟೆಶ್ಚ್ಕರ್ ಬದಲಾಗುತ್ತೆ ಮತ್ತು ನೆರಿಗೆಗಳನ್ನು ನಿಮ್ಮ ಚರ್ಮದಿಂದ ದೂರ ಓಡಿಸುವ ತಾಕತ್ತು ಇದಕ್ಕಿದೆ ಅಷ್ಟೇ ಅಲ್ಲ ಕಪ್ಪು ಚುಕ್ಕೆಗಳು, ಮೊಡವೆ ಸಮಸ್ಯೆಗಳಿಗೂ ಇದು ಉತ್ತಮವಾಗಿ ವರ್ತಿಸುತ್ತೆವೆ. ಇಲ್ಲಿ ಆಲೂಗಡ್ಡೆ ಮತ್ತು ಅರಿಶಿಣ ಬಳಸಿ ತಯಾರಿಸುವ ಕೆಲವು ಪರಿಣಾಮಕಾರಿ ಮಾಸ್ಕ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಬಿಳಿಯ ತ್ವಚೆ ಪಡೆಯಲು ಆಲೂಗಡ್ಡೆ ಮತ್ತು ಅರಿಶಿಣ ಫೇಸ್ ಮಾಸ್ಕ್‌ಗೆ ಬೇಕಾಗುವ ಸಾಮಗ್ರಿಗಳು : ಆಲೂಗಡ್ಡೆಯನ್ನು ಪೇಸ್ಟ್ ಮಾಡಿಕೊಳ್ಳಿ ಅರ್ಧ ಟೀ ಸ್ಪೂನ್ ಕಾಸ್ಮೆಟಿಕ್ ಅರಿಶಿಣ 2 ಟೇಬಲ್ ಸ್ಪೂನ್ ನೈಸರ್ಗಿಕವಾದ ಅಲೋವಿರಾ ಜೆಲ್.

ತಯಾರಿಸುವ ವಿಧಾನ : ಒಂದು ಬೌಲ್ ತೆಗೆದುಕೊಳ್ಳಿ, ಮೇಲೆ ಹೇಳಿದ ಪ್ರಮಾಣದಲ್ಲಿ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ. ಚೆನ್ನಾಗಿ ಕದಲಿಸಿ. ಅವೆಲ್ಲವೂ ಮಿಕ್ಸ್ ಆಗಿ ಸ್ಮೂತ್ ಆಗಿರುವ ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟನ್ನು ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಮುಖದಲ್ಲಿ ಸ್ಕ್ರಬ್ ಮಾಡಿ. ಸುಮಾರು 10 ನಿಮಿಷ ನಿಮ್ಮ ಸ್ಕ್ರಬ್ಬಿಂಗ್ ನಡೆಯಬೇಕು. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಸುಮಾರು 30 ನಿಮಿಷ ಈ ಪ್ಯಾಕ್ ನಿಮ್ಮ ಮುಖದಲ್ಲಿರಲಿ.ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ ವಾರಕ್ಕೆ ಎರಡು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಉತ್ತಮ ಲಾಭವನ್ನು ಗಳಿಸಿ.