ತಲಕಾವೇರಿಯಲ್ಲಿ ತೀರ್ಥೋದ್ಭವ : ಭಕ್ತರ ಹರ್ಷೋದ್ಘಾರ

ಮಡಿಕೇರಿ ಅ.17 : ಬ್ರಹ್ಮಗಿರಿಯ ತಪ್ಪಲಿನ ತಲಕಾವೇರಿಯ ‘ಬ್ರಹ್ಮಕುಂಡಿಕೆ’ಯಲ್ಲಿ ಶುಭ ಕನ್ಯಾ ಲಗ್ನದಲ್ಲಿ ಶನಿವಾರ ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ಕಾಣಿಸಿಕೊಂಡಳು.
ಬೆಳಗ್ಗಿನ ಮಂಜು ಮುಸುಕಿದ ವಾತಾವರಣದಲ್ಲಿ ಅರ್ಚಕ ವೃಂದ ವೇದ ಮಂತ್ರ ಘೋಷಣೆ, ಸೀಮಿತ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಗಣದ ‘ಜೈ ಜೈ ಮಾತಾ ಕಾವೇರಿ ಮಾತಾ’ ಉದ್ಘೋಷಗಳ ನಡುವೆ ಕಾವೇರಿಯ ತೀರ್ಥೋದ್ಭವವಾಯಿತು.
ಪವಿತ್ರ ತೀರ್ಥೋದ್ಭವ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವÀ ವಿ.ಸೋಮಣ್ಣ, ಶಾಸಕÀ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಡಿಎಫ್‍ಒ ಪ್ರಭಾಕರನ್, ನೀಲೇಶ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಡಿವೈಎಸ್‍ಪಿ ದಿನೇಶ್ ಕುಮಾರ್, ತಲಕಾವೇರಿ ಭಗಂಡೇಶ್ವರ ದೇವಾಲಯ ಇಒ ಬಿ.ಎಂ.ಕೃಷ್ಣಪ್ಪ ಮೊದಲಾದವರು ಹಾಜರಿದ್ದು, ಮಾತೆ ಕಾವೇರಿಯ ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು.
::: ಸಂಕಲ್ಪ ಪೂಜೆ :::
ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಆಚಾರ್ ನೇತೃತ್ವದಲ್ಲಿ ಮುಂಜಾನೆ 3.30 ಗಂಟೆಯಿಂದಲೇ ಕಾವೇರಿ ಕುಂಡಿಕೆ ಬಳಿ ವಿಶೇಷ ಪೂಜಾ ಕಾರ್ಯಗಳು ನಡೆದು, ತೀರ್ಥೋದ್ಭವದ ಗಳಿಗೆ ಸಮೀಪಿಸುತ್ತಿರುವಮತೆಯೇ ಮಹಾಸಂಕಲ್ಪ ಪ್ರಾರ್ಥನೆ ನಡೆಯುವ ಮೂಲಕ ತೀರ್ಥೋದ್ಭವ ಸಂಪನ್ನಗೊಂಡು, ಸಂಪ್ರದಾಯದಂತೆ ಭಾಗಮಂಡಲ ಕ್ಷೇತ್ರದ ತಕ್ಕ ಮುಖ್ಯಸ್ಥರು ತೀರ್ಥವನ್ನು ಪಡೆದುಕೊಂಡು ಭಾಗಮಂಡಲಕ್ಕೆ ತೆರಳಿ ಶ್ರೀ ಭಗಂಡೇಶ್ವರನಿಗೆ ಅಭಿಷೇಕವನ್ನರ್ಪಿಸಿದರು.
::: ಭಕ್ತರ ಸಂಖ್ಯೆ ಕಡಿಮೆ :::
ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರಿಂದ ತೀರ್ಥೋದ್ಭವದ ಸಂದರ್ಭ ವರ್ಷಂಪ್ರತಿ ಗಿಜಿಗುಡುತ್ತಿದ್ದ ಭಕ್ತ ಸಮುದಾಯ ಈ ಬಾರಿ ಕ್ಷೀಣಿಸಿತ್ತಲ್ಲದೆ, ಕುಂಡಿಕೆಯ ಬಳಿಯ ಕೊಳ ಖಾಲಿ ಖಾಲಿಯಾಗಿತ್ತು.
ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಷೇತ್ರಕ್ಕೆ ಬಂದ ಭಕ್ತಜನರಿಗೆ ಕ್ಷೇತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ 8 ಗಂಟೆಯ ಬಳಿಕ ಭಕ್ತಾದಿಗಳಿಗೆಲ್ಲ ಅವಕಾಶವನ್ನು ನೀಡಲಾಗಿತ್ತು. ತೀರ್ಥೋದ್ಭವ ಸಂದರ್ಭ ಭಕ್ತಾದಿಗಳಿಗೆ ಅವಕಾಶ ನಿಡುವಂತೆ ಎಂಎಲ್‍ಸಿ ವೀಣಾ ಅಚ್ಚಯ್ಯ ಮತ್ತು ಕೆ.ಪಿ.ಚಂದ್ರಕಲಾ ಅವರು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರಾದರು, ಅದಕ್ಕೆ ಅವಕಾಶ ದೊರಕಲಿಲ್ಲ.
ಕೋವಿಡ್ ಹಿನ್ನೆಲೆ ಭಕ್ತರಿಗೆ ಕುಂಡಿಕೆಯಿಂದ ನೇರವಾಗಿ ತೀರ್ಥ ಸ್ವೀಕರಿಸುವುದಕ್ಕೆ ಅವಕಾಶವಿರಲಿಲ್ಲ. ದೇವಾಲಯ ಸಮಿತಿ ಪ್ರತ್ಯೇಕ ಸ್ಥಳದಲ್ಲಿ ತೀರ್ಥ ವಿತರಣೆ ಮಾಡುವ ಮೂಲಕ ಕುಂಡಿಕೆಯ ಬಳಿ ಜನ ದಟ್ಟಣೆಯಾಗದಂತೆ ಕ್ರಮ ವಹಿಸಿತ್ತು.




