ಚಂದ್ರ ದರ್ಶನ : ಅ.29 ರಂದು ಈದ್ ಮಿಲಾದ್ ಆಚರಣೆ

17/10/2020

ಮಡಿಕೇರಿ ಅ.17 : ಇಂದು (ಶನಿವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 18 (ನಾಳೆ) ರಬೀವುಲ್ ಅವ್ವಲ್ ತಿಂಗಳ ಚಾಂದ್ ಒಂದು ಆಗಿದೆ. ಆದ್ದರಿಂದ ಅ.29 ರಂದು ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮದಿನ (ಈದ್ ಮೀಲಾದ್) ಆಗಿರುತ್ತದೆ ಎಂದು ಜಿಲ್ಲೆಯ ಮೊಹಲ್ಲಾಗಳ ಗೌರವಾನ್ವಿತ ಉಪ ಖಾಝಿಗಳಾದ ಕೆ.ಎ.ಮಹಮೂದ್ ಮುಸ್ಲಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.